Federal Bank Recruitment 2026: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್; ಫೆಡರಲ್ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ
Job Guide: ಕೇರಳ ಮೂಲದ ಖಾಸಗಿ ಬ್ಯಾಂಕ್ ಫೆಡರಲ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಆಫೀಸ್ ಅಸಿಸ್ಟಂಟ್ ಹುದ್ದೆ ಇದ್ದು, ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಜನವರಿ 8.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 4: ಬ್ಯಾಂಕ್ ಉದ್ಯೋಗ ಹೊಂದಬೇಕು ಎನ್ನುವುದು ಹಲವರ ಕನಸು. ಈ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ. ಕೇರಳ ಮೂಲದ ಖಾಸಗಿ ಬ್ಯಾಂಕ್ ಫೆಡರಲ್ ಬ್ಯಾಂಕ್ (Federal Bank) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Federal Bank Recruitment 2026). ದೇಶಾದ್ಯಂತ ಅನೇಕ ಆಫೀಸ್ ಅಸಿಸ್ಟಂಟ್ (Office Assistant) ಹುದ್ದೆ ಇದ್ದು, ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ಜನವರಿ 8.
ವಿದ್ಯಾರ್ಹತೆ
ದೇಶಾದ್ಯಂತ ನೇಮಕಾತಿ ನಡೆಯಲಿದ್ದು, ಸದ್ಯ ಎಷ್ಟು ಹುದ್ದೆ ಖಾಲಿ ಇದೆ ಎನ್ನುವ ವಿವರ ಗೊತ್ತಾಗಿಲ್ಲ. ಫೆಡರಲ್ ಬ್ಯಾಂಕ್ ಅಧಿಸೂಚನೆ ಪ್ರಕಾರ ದೇಶದ ಅಂಗೀಕೃತ ಶಿಕ್ಷಣ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಜತೆಗೆ ಕಂಪ್ಯೂಟರ್ ಬಳಕೆ ತಿಳಿದಿರಬೇಕು.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 20 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ಅಂಚೆ ಇಲಾಖೆಯ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 100 ರುಪಾಯಿ ಮತ್ತು ಸಾಮಾನ್ಯ/ಇತರ ವರ್ಗಗಳ ಅಭ್ಯರ್ಥಿಗಳು 500 ರುಪಾಯಿ ಪಾವತಿಸಬೇಕು. ಇದಕ್ಕಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ವಿಧಾನ ಬಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ವಿಧಾನ
ಆನ್‌ಲೈನ್ ಆಪ್ಟಿಟ್ಯೂಡ್ ಡೆಸ್ಟ್, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಟೆಸ್ಟ್ ಒಟ್ಟು 60 ಅಂಕಗಳಿಗೆ ನಡೆಯಲಿದ್ದು, ಕಂಪ್ಯೂಟರ್ ನಾಲೆಡ್ಜ್, ಇಂಗ್ಲಿಷ್, ಲಾಜಿಕಲ್ ರೀಸನಿಂಗ್ ಮತ್ತು ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದ ತಲಾ 15 ಪ್ರಶ್ನೆಗಳಿರುತ್ತವೆ. ಗಮನಿಸಿ ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕಗಳಿಲ್ಲ. ಆನ್‌ಲೈನ್ ಪರೀಕ್ಷಾ ಕೇಂದ್ರ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿದೆ. ಆಯ್ಕೆಯಾದವರಿಗೆ 6 ತಿಂಗಳು ಪ್ರೊಬೆಷನರಿ ಅವಧಿ ಇರಲಿದೆ. ಈ ಅವಧಿಯಲ್ಲಿನ ಅವರ ಕಾರ್ಯ ವೈಖರಿಯನ್ನು ಗಮನಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
Federal Bank Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://fedregister.zappyhire.com/start/2993/bm/ad) - ಲಾಗಿನ್ ಆಗಿ.
- ಈಗ ಕಂಡುಬರುವ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಫೆಡರಲ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ವಿಳಾಸfederalbank.co.inಗೆ ಭೇಟಿ ನೀಡಿ ಎಂದು ಪ್ರಕಟಣೆ ತಿಳಿಸಿದೆ.