ISRO Recruitment 2025: ಇಸ್ರೋದಲ್ಲಿದೆ 320 ಹುದ್ದೆ; ಇಂದೇ ಅಪ್ಲೈ ಮಾಡಿ
Job Guide: ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇಸ್ರೋ ಅರ್ಜಿ ಆಹ್ವಾನಿಸಿದೆ. ಒಟ್ಟು 320 ಸೈಂಟಿಸ್ಟ್/ಎಂಜಿನಿಯರ್ ಹುದ್ದೆ ಖಾಲಿದ್ದು, ದೇಶದ ಯಾವ ಭಾಗದಲ್ಲಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ: ಎಂಜಿನಿಯರಿಂಗ್ ಪದವಿ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂ. 16.

ಸಾಂದರ್ಭಿಕ ಚಿತ್ರ.

ಬೆಂಗಳೂರು: ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation)ಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವುದು ಹಲವರ ಕನಸು. ಈ ಕನಸು ಈಗ ನನಸಾಗಲಿದೆ. ಹೌದು, ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಇಸ್ರೋ ಅರ್ಜಿ ಆಹ್ವಾನಿಸಿದೆ (ISRO Recruitment 2025). ಒಟ್ಟು 320 ಸೈಂಟಿಸ್ಟ್/ಎಂಜಿನಿಯರ್ ಹುದ್ದೆ ಖಾಲಿದ್ದು, ದೇಶದ ಯಾವ ಭಾಗದಲ್ಲಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು (Job Guide). ವಿದ್ಯಾರ್ಹತೆ: ಎಂಜಿನಿಯರಿಂಗ್ ಪದವಿ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂ. 16.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಸೈಂಟಿಸ್ಟ್/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್) - 113
ಸೈಂಟಿಸ್ಟ್/ಎಂಜಿನಿಯರ್ (ಮೆಕ್ಯಾನಿಕಲ್) - 160
ಸೈಂಟಿಸ್ಟ್/ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್) - 44
ಸೈಂಟಿಸ್ಟ್/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್)-ಪಿಆರ್‌ಎಲ್ - 2
ಸೈಂಟಿಸ್ಟ್/ಇಂಜಿನಿಯರ್ (ಕಂಪ್ಯೂಟರ್ ಸೈನ್ಸ್)-ಪಿಆರ್‌ಎಲ್ - 1 ಹುದ್ದೆಗಳಿವೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿಷಯಗಳಲ್ಲಿ ಬಿ.ಇ ಅಥವಾ ಬಿ.ಟೆಕ್ ಓದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಇದನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿದ್ದು, ಇದಕ್ಕಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: IOB Recruitment 2025: ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನಲ್ಲಿದೆ 400 ಹುದ್ದೆ; ಹೀಗೆ ಅಪ್ಲೈ ಮಾಡಿ
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳಿಗೆ ಆಯ್ಕೆ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರವಿದೆ. ಇನ್ನುಳಿದಂತೆ ಅಹಮದಾಬಾದ್, ಭೋಪಾಲ್, ಚೆನ್ನೈ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಮುಂಬೈ, ಹೊಸದಿಲ್ಲಿ ಮತ್ತು ತಿರುವನಂತಪುರಂನಲ್ಲಿ ಪರೀಕ್ಷೆ ನಡೆಯಲಿದೆ. ಅದಾಗ್ಯೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾಯಿಸಬಹುದು. ಇಮೇಲ್‌ಗೆ ಹಾಲ್ ಟಿಕೆಟ್ ಬರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 56,100 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ISRO Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಮೊದಲು ಹೆಸರು ನೋಂದಾಯಿಸಿ.
- ಎಚ್ಚರಿಕೆಯಿಂದ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಹೆಚ್ಚಿನ ವಿವರಗಳಿಗೆ ಇಸ್ರೋ ಅಧಿಕೃತ ವೆಬ್‌ಸೈಟ್ ವಿಳಾಸ: isro.gov.inಗೆ ಭೇಟಿ ನೀಡಿ. ಯಾವುದೇ ಅನುಮಾನಗಳಿದ್ದರೆ rmt-icrb@isro.gov.in. ಇಮೇಲ್ ವಿಳಾಸಕ್ಕೆ ಮೇಲ್ ಮಾಡಿ ಎಂದು ಇಸ್ರೋ ತಿಳಿಸಿದೆ.