ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Job Guide: ವಿಜ್ಞಾನಿಯಾಗಬೇಕೆ? NIELITಯಲ್ಲಿದೆ 78 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಕೇಂದ್ರ ಸರ್ಕಾರದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್ಸ್‌ & ಇನ್ಫರ್ಮೇಷನ್‌ ಟೆಕ್ನಾಲಜಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಿದೆ. ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆ ಇದಾಗಿದ್ದು, ಭಾರತಾದ್ಯಂತ ಒಟ್ಟು 78 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಫೆ. 17ರಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮಾ. 18.

NIELITಯ 78 ಹುದ್ದೆಗಳಿಗೆ ಹೀಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ.

Profile Ramesh B Feb 15, 2025 4:39 PM

ಬೆಂಗಳೂರು: ವಿಜ್ಞಾನಿಯಾಗಬೇಕೆಂಬ ನಿಮ್ಮ ಕನಸು ನನಸಾಗುವ ದಿನ ಬಂದೇಬಿಟ್ಟಿದೆ. ಕೇಂದ್ರ ಸರ್ಕಾರದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್ಸ್‌ & ಇನ್ಫರ್ಮೇಷನ್‌ ಟೆಕ್ನಾಲಜಿ (National Institute of Electronics & Information Technology) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಿದೆ. ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆ ಇದಾಗಿದ್ದು, ಭಾರತಾದ್ಯಂತ ಒಟ್ಟು 78 ಹುದ್ದೆಗಳಿವೆ (NIELIT Recruitment 2025). ಬಿ.ಇ, ಎಂ.ಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಫೆ. 17ರಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮಾ. 18(Job Guide).

ಹುದ್ದೆಯ ವಿವರ ಮತ್ತು ವಿದ್ಯಾರ್ಹತೆ

ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆ ಇದಾಗಿದೆ. ಸಿಎಸ್‌ - 19, ಐಟಿ - 16, ಇಸಿ - 43 ಹುದ್ದೆಗಳಿವೆ. ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ / ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ & ನೆಟ್‌ವರ್ಕಿಂಗ್‌ ಸೆಕ್ಯುರಿಟಿ / ಸಾಫ್ಟ್‌ವೇರ್‌ ಸಿಸ್ಟಮ್ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಿಕಲ್ / ಇನ್ಫಾರ್ಮ್ಯಾಟಿಕ್‌ ವಿಷಯದಲ್ಲಿ ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಇ ಅಥವಾ ಬಿ.ಟೆಕ್‌, ಎಂ.ಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಸಾಮಾನ್ಯ ಮತ್ತು ಇತರ ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 800 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಬೆಂಗಳೂರು, ಅಗರ್ತಲಾ, ಕ್ಯಾಲಿಕಟ್‌, ಚಂಡೀಗಢ, ಚೆನ್ನೈ, ದಿಲ್ಲಿ, ಗುವಾಹಟಿ, ಹೈದರಾಬಾದ್‌, ಜೈಪುರ, ಜಮ್ಮು, ಕೋಲ್ಕತಾ, ಲಖನೌ, ಮುಂಬೈ ಮತ್ತು ಪಾಟ್ನಾದಲ್ಲಿ ಪರೀಕ್ಷಾ ಕೇಂದ್ರವಿದೆ. ಗಮನಿಸಿ ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ನಂತರ ಅದನ್ನು ಬದಲಾಯಿಸಲು ಅವಕಾಶವಿಲ್ಲ. ಆಯ್ಕೆಯಾದವರಿಗೆ 35,400 ರೂ. - 1,12,400 ರೂ. ಮಾಸಿಕ ವೇತನವಿದೆ.

NIELIT Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(
https://recruit-delhi.nielit.gov.in/frmHome.aspx)

* ಹೆಸರು ನೋಂದಾಯಿಸಿ.

* ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.

* ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: nielit.gov.inಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: Job Guide: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಲಿಮಿಟೆಡ್‌ನ 129 ಹುದ್ದೆಗಳಿಗೆ ಅಪ್ಲೈ ಮಾಡಿ