KAS recruitment: 384 ಕೆಎಸ್ ಹುದ್ದೆಗಳ ನೇಮಕಾತಿ; ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳಿಗೆ ದಿನಾಂಕ:29-12-2024ರಂದು ಪೂರ್ವಭಾವಿ ಮರುಪರೀಕ್ಷೆಯನ್ನು ನಡೆಸಲಾಗಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು : ಕೆಎಎಸ್ 384 ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಪೂರ್ವಭಾವಿ ಪರೀಕ್ಷೆಯಲ್ಲಿನ ಕಟ್ ಆಫ್ ಅಂಕಗಳ ಬಿಡುಗಡೆಗೆ ಮೊದಲೇ ಮುಖ್ಯ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಕೆಪಿಎಸ್ ಸಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳಿಗೆ ದಿನಾಂಕ:29-12-2024ರಂದು ಪೂರ್ವಭಾವಿ ಮರುಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಆಯೋಗವು ಸದರಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ದಿನಾಂಕ:10-02-2025ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಮುಖ್ಯ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ಕಾಲಮಿತಿ: ಮಾರ್ಚ್ 3
- ಸಹಾಯವಾಣಿ ಸಂಖ್ಯೆ: ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ತೊಂದರೆಗಳು ಎದುರಾದಲ್ಲಿ ಅಭ್ಯರ್ಥಿಗಳು ಈ HELP LINE : 080-30574957/30574901 ಗೆ ಕರೆ ಮಾಡಬಹುದು.
- ಪರೀಕ್ಷಾ ಶುಲ್ಕ:-
(ಅ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೆ ರೂ. 300/-
(ಆ) ಇತರೆ ಅಭ್ಯರ್ಥಿಗಳಿಗೆ ರೂ. 500/-
- ಪರೀಕ್ಷಾ ಕೇಂದ್ರ: ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
- ಅರ್ಜಿ ಸಲ್ಲಿಸಲು ಸೂಚನೆಗಳು: ಅಭ್ಯರ್ಥಿಗಳು ಆನ್ ಲೈನ್ ಮೂಲಕ (ONLINE) ಮುಖ್ಯ ಪರೀಕ್ಷೆಯ ಅರ್ಜಿ ಭರ್ತಿ ಮಾಡುವ ಮುನ್ನ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಓದಿ ಪಾಲಿಸತಕ್ಕದ್ದು:
5.1 ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.
5.2 ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.
5.3 ವಿಶೇಷ ಸೂಚನೆ: ಈಗಾಗಲೇ ಸದರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಅರ್ಜಿಯೊಂದಿಗೆ ಆನ್‌ಲೈನ್ ನಲ್ಲಿ
ಸಲ್ಲಿಸಿರುವ ದಾಖಲೆಗಳನ್ನು ಹಾಗೂ ಪ್ರಸ್ತುತ ಮುಖ್ಯ ಪರೀಕ್ಷೆಯ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತು/ದಾಖಲೆಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ, ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ. ಆಪ್ ಲೋಡ್ ಮಾಡತಕ್ಕದ್ದು.
5.4 ಅಭ್ಯರ್ಥಿಗಳು ಈಗಾಗಲೇ ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ವಯ ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ಪೂರ್ವಭಾವಿ ಪರೀಕ್ಷೆಯ ನೊಂದಣಿ ಸಂಖ್ಯೆ, ಅಭ್ಯರ್ಥಿಯ ಹೆಸರು, ಸಹಿ, ಭಾವಚಿತ್ರ, ತಂದೆ/ತಾಯಿ ಹೆಸರು, ಪತಿ/ಪತ್ನಿಯ ಹೆಸರು, ಅಭ್ಯರ್ಥಿಯ ಲಿಂಗ ಮತ್ತು ಜನ್ಮ ದಿನಾಂಕ, ಮೀಸಲಾತಿ ಹಾಗೂ ವಿಳಾಸದ ವಿವರಗಳು ಸ್ವಯಂ ದಾಖಲಾಗುತ್ತವೆ, ಈ ಹಿಂದೆ ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ನಮೂದಿಸಲಾದ ಯಾವುದೇ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುವುದಿಲ್ಲ.
5.5 ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ. ವಿದ್ಯಾರ್ಹತೆ ಅಂಕಣದಲ್ಲಿ Pursuing ಎಂದು ಆಯ್ಕೆ ಮಾಡಿಕೊಂಡಿದ್ದಲ್ಲಿ ಮಾತ್ರ ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಬಗ್ಗೆ, ರಿಜಿಸ್ಟ್ರಾರ್ ರವರಿಂದ ದೃಢೀಕರಿಸಿದ ಘಟಿಕೋತ್ಸವ ಪ್ರಮಾಣ ಪತ್ರ/ತಾತ್ಕಾಲಿಕ ಪದವಿ ಪ್ರಮಾಣ ಪತ್ರ/ಅಂಕಪಟ್ಟಿ /ರಿಸಲ್ಸ್ ಶೀಟ್ ಪ್ರತಿಯನ್ನು ಅಪ್‌ಲೋಡ್ ಮಾಡತಕ್ಕದ್ದು, (ದಾಖಲೆಗಳು ಸ್ಪಷ್ಟವಾಗಿರಬೇಕು). ಸದರಿ ದಾಖಲೆಗಳು ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಜಾರಿಯಾಗಿರತಕ್ಕದ್ದು. ತಪ್ಪಿದ್ದಲ್ಲಿ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.
5.6 ಅಂಗವಿಕಲ ಅಭ್ಯರ್ಥಿಗಳು ಸ್ವಂತ ಲಿಪಿಕಾರರ ಸಹಾಯವನ್ನು ಕೋರಿದಲ್ಲಿ ಲಿಪಿಕಾರರ ವಿವರಗಳನ್ನು ಅರ್ಜಿಯಲ್ಲಿ. ಕಡ್ಡಾಯವಾಗಿ ನಮೂದಿಸತಕ್ಕದ್ದು. ಲಿಪಿಕಾರರ ಭಾವಚಿತ್ರ ಮತ್ತು ಸಹಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡತಕ್ಕದ್ದು,
5.7 ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 03 ಹೈಕಕೋ 2019, ದಿನಾಂಕ:15-06-2022ರಲ್ಲಿ ನಿರ್ದಿಷ್ಟ ಪಡಿಸಿರುವ ಆಯ್ಕೆಗಳನ್ನಯ ಮುಖ್ಯ ಪರೀಕ್ಷೆಯ ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ಆಯ್ಕೆಗಳನ್ನು ನಮೂದಿಸತಕ್ಕದ್ದು.
5.8 ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಾವಳಿಗಳು, 1997 ಹಾಗೂ ತಿದ್ದುಪಡಿ ನಿಯಮಗಳ ಉಪನಿಯಮ 4. (3)ರಲೆ.. “The candidates who apply for the Competitive Examinations shall clearly indicate in their application forms the services or posts for which they wish to be considered for appointment in the order of preference. They shall not be considered for such of the service or posts which are not preferred by them.” ಎಂದು ನಮೂದಾಗಿದ್ದು, ಅದರಂತೆ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲಿ ಅಧಿಸೂಚಿಸಿರುವ ಹುದ್ದೆಗಳ ಆದ್ಯತಾನುಕ್ರಮವನ್ನು (Preference) ಭರ್ತಿ ಮಾಡತಕ್ಕದ್ದು, ಆದ್ರತೆ ನೀಡದಿರುವ ಹುದ್ದೆಗಳ ಆಯ್ಕೆಗೆ ಅವರನ್ನು ಪರಿಗಣಿಸಲಾಗುವುದಿಲ್ಲ. ಹುದ್ದೆಗಳ ವಿವರಗಳನ್ನು ಅನುಬಂಧ-ಎ ರಲ್ಲಿ ನೀಡಲಾಗಿದೆ.
5.9 ವಿಶೇಷ ಸೂಚನೆ:- ಅಂಗವಿಕಲ ಅಭ್ಯರ್ಥಿಗಳು ಹುದ್ದೆಗಳಿಗೆ ಆದ್ಯತೆ (Preference) ನೀಡುವ ಸಮಯದಲ್ಲಿ ಸಂಬಂಧಿತ ಇಲಾಖೆಗಳು ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮದನ್ವಯ ಗುರುತಿಸಿರುವ ಅನುಸೂಚಿಯನ್ನು ಪರಿಶೀಲಿಸತಕ್ಕದ್ದು (ಅನುಬಂಧ-ಬಿ), ಈಗಾಗಲೇ ಆಯೋಗವು ಪೂರ್ವಭಾವಿ ಪರೀಕ್ಷೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಗುರುತಿಸಲಾಗಿರುವ ಹುದ್ದೆಗಳಿಗೆ ಅನುಗುಣವಾಗಿ ಪರಿಶೀಲಿಸಿಕೊಂಡು ಆದ್ಯತೆಯನ್ನು ನೀಡತಕ್ಕದ್ದು.
5.10 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ಹುದ್ದೆಗಳ ಆದ್ಯತೆ ನೀಡುವಾಗ “ನೇಮಕಾತಿ ಪ್ರಾಧಿಕಾರವು ದೈಹಿಕ ದಾರ್ಢತೆ/ ವೈದ್ಯಕೀಯ ಅರ್ಹತೆಯ ಕುರಿತು ನಿಯಮಾನುಸಾರ ಪರಿಶೀಲಿಸುತ್ತದೆ. ಆಯೋಗದ ಅಧಿಸೂಚನೆಯನುಸಾರ ದೈಹಿಕ ದಾರ್ಢತೆ ಅಗತ್ಯವಿರುವ ಹುದ್ದೆಗಳಿಗೆ ಅರ್ಹರಿದ್ದಲ್ಲಿ ಮಾತ್ರ ಸದರಿ ಹುದ್ದೆಗಳ ಆದ್ಯತೆಯನ್ನು ನೀಡತಕ್ಕದ್ದು.”
5.11 ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ ಹಾಗೂ Pursuing ಎಂದು ವಿದ್ಯಾರ್ಹತೆಯ ಅಂಕಣದಲ್ಲಿ ಆಯ್ಕೆ ಮಾಡಿದಲ್ಲಿ ಸದರಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/UPI ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ / ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
5.12 ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಗಳು ಅಧಿಸೂಚನೆಯಲಿ…ನ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ ಎಂಬುದಾಗಿ ಅರ್ಥೈಸಿಕೊಳ್ಳುವಂತಿಲ್ಲ. ನಂತರದಲ್ಲಿ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗೂ ಯಾವುದೇ ಹಂತದಲ್ಲಿ ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಇದನ್ನೂ ಓದಿ: KAS Prelims Result: ಕೆಎಎಸ್ ಪೂರ್ವಭಾವಿ ಮರುಪರೀಕ್ಷೆ ಫಲಿತಾಂಶ ಪ್ರಕಟ; ಮುಖ್ಯ ಪರೀಕ್ಷೆಗೆ ಅರ್ಹರಾದವರ ಪಟ್ಟಿ ಇಲ್ಲಿದೆ