RBI Recruitment 2026: ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ; ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಸಾಕು ಅಪ್ಲೈ ಮಾಡಿ
Job Guide: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 572 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಫೆಬ್ರವರಿ 4.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 21: ಒಂದೊಳ್ಳೆ ಉದ್ಯೋಗ ಹೊಂದಬೇಕು ಎನ್ನುವವರಿಗೆ ಗುಡ್‌ನ್ಯೂಸ್ ಹೊರ ಬಿದ್ದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಖಾಲಿ ಇರುವ ಬರೋಬ್ಬರಿ 572 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (RBI Recruitment 2026). ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಭಾರತಾದ್ಯಂತ (Job Guide). ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಫೆಬ್ರವರಿ 4.
ಉದ್ಯೋಗ ವಿವರ
ಆಫೀಸ್ ಅಟೆಂಡೆಂಟ್ (Office Attendant) ಹುದ್ದೆ ಇದಾಗಿದೆ. ಬೆಂಗಳೂರು-16, ಅಹಮದಾಬಾದ್-29, ಭೋಪಾಲ್-4, ಭುವನೇಶ್ವರ-36, ಚಂಢೀಗಡ-2, ಚೆನ್ನೈ-9, ಗುವಾಹಟಿ-52, ಹೈದರಾಬಾದ್-36, ಜೈಪುರ-42, ಕಾನ್ಪುರ ಮತ್ತು ಲಖನೌ-125, ಕೋಲ್ಕತ್ತಾ-90, ಮುಂಬೈ-33, ದೆಹಲಿ-61 ಮತ್ತು ಪಾಟ್ನಾ-37 ಹುದ್ದೆಗಳಿವೆ.
ವಿದ್ಯಾರ್ಹತೆ
ಆರ್‌ಬಿಐ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಅಧಿಸೂಚನೆ ತಿಳಿಸಿದೆ.
ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟಿಸಿದ ಕೆಇಎ
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು 450 ರುಪಾಯಿ ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳು 50 ರುಪಾಯಿ ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಆನ್‌ಲೈನ್ ಟೆಸ್ಟ್ ಮತ್ತು ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 24,250 ರುಪಾಯಿಂದ 53,550 ರುಪಾಯಿವರೆಗೆ ಮಾಸಿಕ ವೇತನ ದೊರೆಯಲಿದೆ. ಇತರ ಭತ್ಯೆಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
RBI Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://ibpsreg.ibps.in/rbipodec25/) - ಲಾಗಿನ್ ಆಗಿ.
- ಈಗ ಕಂಡುಬರುವ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆ, ಪೋಟೊ, ಸಹಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಆರ್‌ಬಿಐ ಅಧಿಕೃತ ವೆಬ್‌ಸೈಟ್ ವಿಳಾಸ: https://rbi.org.in/ಕ್ಕೆ ಭೇಟಿ ನೀಡಿ.