ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇದೊಂದು ದಶಕಗಳ ಸಮಸ್ಯೆಯಾಗಿದ್ದು ಶೀಘ್ರವೇ ಪರಿಹಾರ ಕಾಣಿಸುವಂತೆ ಇಂಜನಿಯರ್ ಉಮಾಶಂಕರ್ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಸೂಚನೆ

ಏನಾದರೂ ಹೇಳಿದರೆ ಕನೆಕ್ಟ್ ಮಾಡಲು ಆಗುತ್ತಿಲ್ಲ, ಮಿಸ್ಸಿಂಗ್ ಲಿಂಕ್ ಇದೆ ಅಂತಾರೆ.ಇದು ಬಹಳ ಚಾಲೆಂಜಿಂಗ್ ಇದನ್ನು ಪರಿಹಾರ ಮಾಡಲು ತುಂಬಾ ವರ್ಷಗಳು ಬೇಕು. ಆದರೂ ಕೂಡ ಇಲ್ಲಿನ ಯುಜಿಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿ ಚರಂಡಿಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಗರಸಭೆ ಆಡಳಿತಕ್ಕೆ ಶಾಸಕರು ತಾಕೀತು ಮಾಡಿ ದರು.

ಕೆಳಗಿನ ತೋಟದ ರಾಜಕಾಲುವೆ ಸಮಸ್ಯೆ ಪರಿಹಾರಕ್ಕೆ 2 ಕೋಟಿ ಬೇಕಿದೆ

Profile Ashok Nayak Apr 9, 2025 8:24 PM

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆ ಎದುರಿನ ೮ನೇ ವಾರ್ಡ್ ನಿವಾಸಿಗಳ ಏಕೈಕ ಸಮಸ್ಯೆ ವೈಜ್ಞಾನಿಕವಾಗಿ ಒಳಚರಂಡಿ ಮಾಡಿಲ್ಲ,ಮಳೆಗಾಲದಲ್ಲಿ ನೀರುಸಂಗ್ರಹಾಗಾರದ ಸಂಪ್‌ಗೆ ಯುಜಿಡಿ ನೀರು ಸೇರು ತ್ತಿದ್ದು ಬದುಕನ್ನು ಹೈರಾಣಾಗಿಸಿದೆ ಸರಿಮಾಡಿಸಿಕೊಡಿ ಎಂದು ಕೇಳಿದ್ದಾರೆ. ಇದೊಂದು ದಶಕಗಳ ಸಮಸ್ಯೆಯಾಗಿದ್ದು ಶೀಘ್ರವೇ ಪರಿಹಾರ ಕಾಣಿಸುವಂತೆ ಇಂಜನಿಯರ್ ಉಮಾಶಂಕರ್ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದು ನಿವಾಸಿಗಳ ಸಂತೋಷಕ್ಕೆ ಕಾರಣವಾಗಿತ್ತು. ಹೌದು. ನಗರದ ೮ ವಾರ್ಡಿನಲ್ಲಿ ಮಂಗಳವಾರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನು ಮುಂದುವರೆ ಸಿದ ಶಾಸಕ ಪ್ರದೀಪ್ ಈಶ್ವರ್ ಮನೆಮನೆಗೆ ತೆರಳಿ ಜನರ ಕಷ್ಟಗಳಿಗೆ ಕಿವಿಯಾದರು. ಬೆಳಗ್ಗೆ ೬ ರಿಂದ ೧೦ ಗಂಟೆಯವರೆಗೆ ೮ ವಾರ್ಡ್ ಯುಜಿಡಿ ಸಮಸ್ಯೆ ಪರಿಹಾರ ಮಾಡಲು ೧೨೦ ಕೋಟಿಗೂ ಹೆಚ್ಚು ಅನುದಾನ ಬೇಕಿದೆ. ಏನಾದರೂ ಹೇಳಿದರೆ ಕನೆಕ್ಟ್ ಮಾಡಲು ಆಗುತ್ತಿಲ್ಲ, ಮಿಸ್ಸಿಂಗ್ ಲಿಂಕ್ ಇದೆ ಅಂತಾರೆ.ಇದು ಬಹಳ ಚಾಲೆಂಜಿಂಗ್ ಇದನ್ನು ಪರಿಹಾರ ಮಾಡಲು ತುಂಬಾ ವರ್ಷಗಳು ಬೇಕು. ಆದರೂ ಕೂಡ ಇಲ್ಲಿನ ಯುಜಿಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿ ಚರಂಡಿಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಗರಸಭೆ ಆಡಳಿತಕ್ಕೆ ಶಾಸಕರು ತಾಕೀತು ಮಾಡಿ ದರು.

ಇದನ್ನೂ ಓದಿ: Chikkaballapur News: ಒತ್ತುವರಿ ತೆರವು ವೇಳೆ ಅಧಿಕಾರಿಗಳ ಹಾಗೂ ಒತ್ತುವರಿದಾರರ ನಡುವೆ ಮಾತಿನ ಜಟಾಪಟಿ

ಮಂಗಳವಾರವೇ ಬೆಳಿಗ್ಗೆ ೧೦ ಗಂಟೆಯಿಂದ ೧೨.೩೦ ರವರೆಗೆ ೨೨ನೇ ವಾರ್ಡ್ನಲ್ಲಿ ಮನೆಮನೆಗೂ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಜನತೆಯ ಅಹವಾಲು ಆಲಿಸಿದರು.ಈ ವೇಳೆ ಕನಕ ನಗರದ ನಿವಾಸಿಗಳು ಸ್ಮಶಾನಕ್ಕೆ ಹೋಗಲು ರಸ್ತೆ ಮಾಡಿಸಿಕೊಡಿ, ಕಂದವಾರದಿಂದ ಹರಿದು ಬರುವ ನೀರು ರಾಜಕಾಲುವೆ ಮೂಲಕ ಅಮಾನಿ ಗೋಪಾಲಕೃಷ್ಣಕೆರೆ ತಲುಪುವಂತೆ ಮಾಡಿರುವ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದನ್ನು ಪೂರ್ಣಗೊಳಿಸಿ,ಇಲ್ಲವಾದಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದು ಖಚಿತ ಎಂದು ಇಲ್ಲಿನ ನಿವಾಸಿಗಳು ಶಾಸಕರಿಗೆ ಅವಲತ್ತುಕೊಂಡರು.

ಕೂಡಲೇ ತಹಶೀಲ್ದಾರ್ ಅನಿಲ್ ಅವರಿಗೆ ಈ ಬಗ್ಗೆ ಏನು ಮಾಡುಬೇಕು ಎಂದು ವಿಚಾರಿಸಲಾಗಿ  ಹಿಂದೆ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಇದರ ಡಿಪಿಆರ್ ಆಗಿದೆ. ಕಾಮಗಾರಿ ಪೂರ್ಣಗೊಳಿಸಲು ಅವರು ೨ ಕೋಟಿ ಅನುದಾನ ಬೇಕಿದೆ ಎಂದರು. ಆಗ ಜನತೆನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಆದಷ್ಟು ಬೇಗ ಪರಿಹಾರ ಮಾಡಿಕೊಡಲು ಮುಂದಾಗು ತ್ತೇನೆ ಎಂದರು.

2ವರ್ಷ ತಡೆಯುವೆ?
ಮನೆಮನೆ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ನಗರಸಭೆಯ ೯೯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಶಾಸಕ ಪ್ರದೀಪ್ ಈಶ್ವರ್ ತಡೆದಿದ್ದಾರೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ.ನಾನು ಹಾಗೆ ಮಾಡಲು ಮುಂದಾದರೆ ಮುಂದಿನ ೨ ವರ್ಷಗಳ ಕಾಲ ತಡೆಯಬಹುದಲ್ಲ ಎನ್ನುವ ಮೂಲಕ ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಚರ್ಚೆಗಳಿಗೆ ತೆರೆ ತೆಳೆದರು.

ನಾನು ಎಸ್‌ಸಿ,ಎಸ್‌ಟಿ ಪರ!!
ಪ್ರದೀಪ್ ಈಶ್ವರ್ ಬಲಜಿಗರಿಗಾಗಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ನಿಲ್ಲಿಸಿದ್ದಾರೆ ಎನ್ನುವವರು ಅಲ್ಲಿ ಯಾವ ಯಾವ ಸಮುದಾಯದವರು ಎಷ್ಟೆಷ್ಟು ಅಂಗಡಿಗಳನ್ನು ಹೊಂದಿದ್ದಾರೆ ಎಂಬ ಬಗ್ಗೆ ಮಾಧ್ಯಮದವರು ತನಿಖೆ ಮಾಡಿ.ಹೌದು ನಾನು ಬಲಿಜಿಗ ಸಮುದಾಯದಲ್ಲಿ ಹುಟ್ಟಿರುವುದರಿಂದ ಸಮುದಾಯದ ಮಂದಿ ಭೇಟಿ ಮಾಡುವುದು ಸಹಜ.ನಾನು ಜಾತಿಗೆ ಮಣೆ ಹಾಕಿದ್ದೇನೆ ಎನ್ನುವವರು ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಮತ್ತು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು,ನಗರಸಭೆ ನಾಮನಿರ್ದೇಶನ,ದರಖಾಸ್ತು ಸಮಿತಿಗೆ ನಾಮನಿರ್ದೇಶನ ಯರ‍್ಯಾರನ್ನು ಮಾಡಿದ್ದೇನೆ ಎಂಬುದನ್ನು ತಿಳಿದು ಮಾತನಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ನಮ್ಮದೆ
ಮುಂದಿನ ದಿನಗಳಲ್ಲಿ ನಡೆಯುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬಂದು ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಅಧಿಕಾರ ಚುಕ್ಕಾಣಿ  ಹಿಡಿಯುವುದು ಖಚಿತ.ನಾನು ಪಕ್ಷದ ಚಿನ್ಹೆಯಡಿ ನಡೆಯುವ ನಡೆಯುವ ಚುನಾವಣೆಗೆ ತಲೆಕೆಡಿಸಿಕೊಳ್ಳುತ್ತೇನೆ ವಿನಃ ಪಾರ್ಟಿ ಸಿಂಬಲ್ ಇಲ್ಲದ ಚುನಾವಣೆಗಳ ಬಗೆ ತಲೆಕೆಡಿಸಿಕೊಳ್ಳುವುದಿಲ್ಲ.ಚುನಾವಣೆಗೆ ದೈರ್ಯ ಮತ್ತು ಜನಬೆಂಬಲ ಬೇಕು.ನಮ್ಮ ಬಳಿ ಅದು ಇದೆ. ಬಿಜೆಪಿ ಅವರ ಬಳಿ ಇದು ಬಿಟ್ಟು ಬೇರೆಲ್ಲಾ ಇದೆ ಎಂದು ಹೆಸರು ಹೇಳದೆಯೇ ಸಂಸದರಿಗೆ ಟಾಂಗ್ ನೀಡಿದರು.

*
ನಾನು ಶಾಸಕ ಆದ ಮೇಲೆ ಬಿಜೆಪಿಯ ಮುಖಂಡರನ್ನು ನಿದ್ದೆ ಮಾಡಲು ಬಿಟ್ಟಿಲ್ಲ. ಬಿಜೆಪಿಯಲ್ಲಿ ನನಗೆ ಇಷ್ಟವಾದ ನಾಯಕರಾದ ವಿಜಯೇಂದ್ರ, ಆರ್.ಅಶೋಕ್, ಯತ್ನಾಳ್, ಪ್ರಹ್ಲಾದ್ ಜೋಷಿ, ಪ್ರತಾಪ್ ಸಿಂಹ ಹೀಗೆ ಸಾಲುಸಾಲು ಪಟ್ಟಿಯಿದೆ. ಪ್ರತಾಪ್ ಸಿಂಹ ಅವರಂತೂ ನನ್ನ ಮೇಲೆ ೪ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.ಡಿಬೇಟ್‌ಗೆ ಬಾ ಎಂದರೆ ಕೇಸು ಹಾಕುವ ಇವರು ಇವರು ಫೈರ್‌ಬಾಂಡ್ ಅಂತೆ.ಬ್ರಾAಡ್‌ಗಳನ್ನು ಪೈರ್ ಮಾಡುವವನು ನಾನೇ ಎನ್ನುವ ಮೂಲಕ ಪ್ರದೀಪ್ ಈಶ್ವರ್ ಬಿಜೆಪಿ ಮುಖಂಡರ ಕಾಲೆಳೆದರು.

ಅನುದಾನ ಇಟ್ಟುಕೊಂಡೇ ನಗರದ ವಾರ್ಡುಗಳಿಗೆ, ಕ್ಷೇತ್ರದ ಹಳ್ಳಿಗಳಿಗೆ ತೆರಳುತ್ತಿದ್ದೇನೆ.ಬರಿಗೈಲಿ ಹೋಗಿ ಬಂದರೆ ಎಂಎಲ್‌ಎ ಬಂದರು ಹೋದರು ಎಂದು ಜನರಿಂದ ಹೇಳಿಸಿಕೊಳ್ಳಲು ನನಗೆ ಆಗದು. ಅನುದಾನ ಇಟ್ಟುಕೊಂಡೇ ಹೋಗುತ್ತಿದ್ದೇನೆ, ಜನರ ಕಷ್ಟಗಳನ್ನು ಪರಿಹಾರ ಮಾಡು ತ್ತಿದ್ದೇನೆ, ಯಾರು ಏನೇ ಹೇಳಲಿ ನಾನು ವಿಭಿನ್ನವಾಗಿಯೇ ಕೆಲಸ ಮಾಡಿ ತೋರುವ ಶಾಸಕ ಎನ್ನುವ ಮೂಲಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಈ ವೇಳೆ ಡ್ಯಾನ್ಸ್ ಶ್ರೀನಿವಾಸ್, ಈ ವೇಳೆ ತಹಸೀಲ್ದಾರ್ ಅನಿಲ್, ಪೌರಾಯುಕ್ತ ಮನ್ಸೂರ್ ಆಲಿ, ಎಡಿಎಲ್ ಆರ್ ವಿವೇಕ್ ಮಹದೇವ್ ನಗರಸಭೆ ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್, ಅಂಬರೀಶ್, ಮೊಹಮದ್ ಜಾಫರ್, ಶಕೀಲಾಭಾನು, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಾಯರ್ ಮುನೇಗೌಡ, ರಮೇಶ್ ಬಾಬು, ಕೋಲಾಟ್ಲು ರಾಮಚಂದ್ರ, ಶ್ರೀನಿವಾಸ್, ಸುರೇಶ್, ಜಿ.ಉಮೇಶ್, ಗೋಪಿನಾಥ್, ವೆಂಕಟ್, ಪೆದ್ದನ್ನ, ಬಾಬಾಜಾನ್, ಮೋಲ್ಡ್ ವೆಂಕಟೇಶ್, ನಗರಸಭೆ, ಕಂದಾಯ. ಆಹಾರ, ಆರೋಗ್ಯ, ಬೆಸ್ಕಾಂ ಸೇರಿದಂತೆ ಮತ್ತಿತರ ಇಲಾಖೆಗಳ  ಸಿಬ್ಬಂದಿ, ಮತ್ತಿತರರು ಇದ್ದರು.
೮ಸಿಬಿಪಿಎಂ೧ : ಚಿಕ್ಕಬಳ್ಳಾಪುರ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ವಾರ್ಡ್ ಭೇಟಿ ಮಾಡಿ ಜನರ ಅಹವಾಲು ಆಲಿಸಿದರು.