ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಒತ್ತುವರಿ ತೆರವು ವೇಳೆ ಅಧಿಕಾರಿಗಳ ಹಾಗೂ ಒತ್ತುವರಿದಾರರ ನಡುವೆ ಮಾತಿನ ಜಟಾಪಟಿ

ನಮ್ಮ ಬಳಿ ಕೋರ್ಟ್ ಆದೇಶವಿದೆ. ನಮಗೆ ನೋಟಿಸ್ ಕೊಟ್ಟಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಅಧಿಕಾರಿ ಗಳು ತಮ್ಮ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬನ್ನಿ! ನ್ಯಾಯಾಲಯದ ಆದೇಶ ವನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದರೆ ಅವರು ಯಾವುದೇ ರೀತಿಯ ಸೂಕ್ತ ದಾಖಲೆಗಳು ಸಲ್ಲಿಸದೆ ಇರುವ ಕಾರಣಕ್ಕೆ ಒತ್ತುವರಿ ತೆರವುಗೊಳಿಸಲು ಹೋಗಿದ್ದ ಅಧಿಕಾರಿಗಳು ಕೊನೆಗೆ ಒತ್ತುವರಿ ಯನ್ನು ತೆರವು ಮಾಡಿ ವಾಪಸ್ ಆದರು!

ನಾವು ತೆರವು ಮಾಡಕ್ಕೆ ಬಂದಿದ್ದೇವೆ ತೆರವು ಮಾಡಿ ಹೋಗ್ತೀವಿ

-

Ashok Nayak Ashok Nayak Apr 9, 2025 11:44 AM

ಚಿಂತಾಮಣಿ: ನಮ್ಮ ಬಳಿ ದಾಖಲೆ ಇವೆ, ನ್ಯಾಯಾಲಯದ ಆದೇಶ ಇದೆ. ತೆರವು ಮಾಡಕ್ಕೆ ಬಿಡಲ್ಲ!ನಾವು ತೆರವು ಮಾಡಕ್ಕೆ ಬಂದಿದ್ದೇವೆ ತೆರವು ಮಾಡಿ ಹೋಗ್ತೀವಿ ಎಂದು ಮಾತಿನ ಜಟಾಪಟಿ ನಡೆದಿದ್ದು ಎಲ್ಲಿ ಅಂತೀರಾ. ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಕಾವಲುಗಾನ ಹಳ್ಳಿ ಸರ್ವೆ ನಂ:30 ರ.0-36ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಗೋಡೆ ಯನ್ನು ನಿರ್ಮಾಣ ಮಾಡಿಕೊಂಡಿದ್ದರು. ಅದನ್ನು ತೆರೆವು ಗೊಳಿಸಿಕೊಡುವಂತೆ ಸದರಿ ಗ್ರಾಮದ ಸರಸ್ವತಮ್ಮ ಎಂಬುವರು ತಾಲ್ಲೂಕು ದಂಡಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿದ್ದರು.

ಇದನ್ನೂ ಓದಿ: US-China tariff War: ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ; ಚೈನೀಸ್‌ ಅಧಿಕಾರಿ ಹೇಳಿದ್ದೇನು?

ಅದರಂತೆ ಅಂಬಾಜಿದುರ್ಗ ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ನರಸಿಂಹಮೂರ್ತಿ.ಭೂ ಮಾಪನ ಇಲಾಖೆಯ ಸರ್ವೆಯರ್ ಖಾದರ್ ಸಾಬ್, ಗ್ರಾಮ ಆಡಳಿತ ಅಧಿಕಾರಿ ಸುಪ್ರಿಯ ಹಾಗೂ ಸಿಬ್ಬಂದಿ ಪೊಲೀಸ್ ನ ಸೂಕ್ತ ಬಂದೋಬಸ್ತ್ ಪಡೆದು ಒತ್ತುವರಿಯಾಗಿದ್ದನ್ನು ತೆರವುಗೊಳಿಸಲು ಮುಂದಾ ದಾಗ ಒತ್ತುವರಿ ಮಾಡಿಕೊಂಡಿದ್ದವರು ತೆರವು ಕಾರ್ಯಾಚರಣೆ ಮಾಡಲು ಬಿಡಲ್ಲ! ನಮ್ಮ ಬಳಿ ಕೋರ್ಟ್ ಆದೇಶವಿದೆ. ನಮಗೆ ನೋಟಿಸ್ ಕೊಟ್ಟಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಅಧಿಕಾರಿ ಗಳು ತಮ್ಮ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬನ್ನಿ! ನ್ಯಾಯಾಲಯದ ಆದೇಶವನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದರೆ ಅವರು ಯಾವುದೇ ರೀತಿಯ ಸೂಕ್ತ ದಾಖಲೆಗಳು ಸಲ್ಲಿಸದೆ ಇರುವ ಕಾರಣಕ್ಕೆ ಒತ್ತುವರಿ ತೆರವುಗೊಳಿಸಲು ಹೋಗಿದ್ದ ಅಧಿಕಾರಿಗಳು ಕೊನೆಗೆ ಒತ್ತುವರಿಯನ್ನು ತೆರವು ಮಾಡಿ ವಾಪಸ್ ಆದರು!

ಇನ್ನು ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ರೆವೆನ್ಯೂ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ರವರೆ ಖುದ್ದಾಗಿ ಗಡಾರಿ ಹಿಡಿದು ಅಕ್ರಮವಾಗಿ ನಿರ್ಮಿಸಿದ್ದ ಗೋಡೆಯನ್ನು ತಳ್ಳು ಹಾಕಿದ ದೃಶ್ಯಗಳು ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.