ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಎಸ್‌ಎಲ್‌ ಭೈರಪ್ಪ ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿ: ಕಮಲ ಹಾಸನ್‌

Actor Kamal Hassan: 'ಅವರ ಪರಂಪರೆ ಪರ್ವಗಳಷ್ಟು ಕಾಲ ನಿಲ್ಲಲಿದೆ. ಪುರಾಣಗಳನ್ನು ಮತ್ತು ಅದರೊಳಗೆ ಹುದುಗಿರುವ ಇತಿಹಾಸಗಳನ್ನು ಹೇಗೆ ಓದಬೇಕೆಂದು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ಅಭಿಮಾನಿ, ಕಮಲ್ ಹಾಸನ್ʼ ಎಂದು ಎಕ್ಸ್‌ನಲ್ಲಿ ಕಮಲ್‌ ಪೋಸ್ಟ್‌ ಮಾಡಿದ್ದಾರೆ.

ಎಸ್‌ಎಲ್‌ ಭೈರಪ್ಪ ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿ: ಕಮಲ ಹಾಸನ್‌

-

ಹರೀಶ್‌ ಕೇರ ಹರೀಶ್‌ ಕೇರ Sep 25, 2025 7:52 AM

ಬೆಂಗಳೂರು : ನಿನ್ನೆ ವಿಧಿವಶರಾದ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ (94) ಅವರ ಸಾವಿಗೆ ಬಹುಭಾಷಾ ನಟ ಕಮಲ ಹಾಸನ್‌ ಅವರು ಸಂತಾಪ ಸೂಚಿಸಿದ್ದಾರೆ. ಭೈರಪ್ಪನವರು ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿಗಳಲ್ಲಿ ಒಬ್ಬರು ಎಂದು ಕಮಲ್‌ ಹೇಳಿದ್ದಾರೆ.

ʼನಮ್ಮ ಕಾಲದ ಕಥೆಗಾರರ ಪಿತಾಮಹ ಶ್ರೀ ಎಸ್. ಎಲ್. ಭೈರಪ್ಪ ಅವರು ನಮ್ಮೊಂದಿಗಿದ್ದಾಗಲೇ ಅವರನ್ನು ಸಂಭ್ರಮದಿಂದ ಗೌರವಿಸಿದ್ದೇವೆ ಮತ್ತು ಅವರು ಕೂಡ ಆ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳ ಅಸಂಖ್ಯ ಸಮೂಹಕ್ಕೆ ನನ್ನ ಸಂತಾಪಗಳು. ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಕ ಧ್ವನಿಗಳಲ್ಲಿ ಒಬ್ಬರನ್ನು ಕನ್ನಡಿಗರು ನಮಗೆ ನೀಡಿದ್ದಾರೆ. ಈಗ ಅವರ ಅಮರ ಕೃತಿಗಳು ಮಹಾನ್ ಕಥೆಗಾರರ ​​ಜಗತ್ತಿನಲ್ಲಿ ಒಂದಾಗಿದೆ. ಭವಿಷ್ಯದ ಪೀಳಿಗೆಗಳು ಅವರ ಮಾತುಗಳಿಂದ ಶಾಶ್ವತತೆಯನ್ನು ಕಲಿಯುತ್ತವೆ. ಅವರ ಪರಂಪರೆ ಪರ್ವಗಳಷ್ಟು ಕಾಲ ನಿಲ್ಲಲಿದೆ. ಪುರಾಣಗಳನ್ನು ಮತ್ತು ಅದರೊಳಗೆ ಹುದುಗಿರುವ ಇತಿಹಾಸಗಳನ್ನು ಹೇಗೆ ಓದಬೇಕೆಂದು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ಅಭಿಮಾನಿ, ಕಮಲ್ ಹಾಸನ್ʼ ಎಂದು ಎಕ್ಸ್‌ನಲ್ಲಿ ಕಮಲ್‌ ಪೋಸ್ಟ್‌ ಮಾಡಿದ್ದಾರೆ.



ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಲಾಗಿದೆ. ಸಾರ್ವಜನಿಕರು, ಅಭಿಮಾನಿಗಳು ಈ ಸಂದರ್ಭದಲ್ಲಿ ಅವರ ದರ್ಶನ ಪಡೆಯಬಹುದು. ಮಧ್ಯಾಹ್ನ 2 ಗಂಟೆಯ ಬಳಿಕ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರು, ಹಿರಿಯ ಸಾಹಿತಿ ಡಾ.ಎಸ್ಎಲ್ ಭೈರಪ್ಪ ಅವರು ನಿಧನರಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ಪ್ರಕಟಿಸಿದೆ. ಡಾ.ಎಸ್ಎಲ್ ಭೈರಪ್ಪ ಅವರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: SL Bhyrappa: ಎಸ್‌.ಎಲ್‌. ಭೈರಪ್ಪ ಯುವ ತಲೆಮಾರಿಗೆ ಸ್ಫೂರ್ತಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣನೆ