ಎಸ್‌ಡಿಎಂ ಕಾಲೇಜಿನಲ್ಲಿ ಗ್ರಾಮೀಣ ಜೀವನೋಪಾಯಗಳ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ
ವಿಚಾರ ಸಂಕಿರಣವು ಹವಾಮಾನ ಬದಲಾವಣೆ, ಗ್ರಾಮೀಣ ಆರ್ಥಿಕ ಸವಾಲುಗಳು, ವಲಸೆ, ಉದ್ಯೋಗ ಸವಾಲುಗಳು ಹಾಗೂ ಸಾಮಾಜಿಕ–ಆರ್ಥಿಕ ಅಸಮಾನತೆಗಳು ಮುಂತಾದ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ. ಚರ್ಚೆಗಳು ಸುಸ್ಥಿರ ಅಭಿವೃದ್ಧಿ ಗುರಿ–8 (SDG 8): ಗೌರವ ಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆಯೊಂದಿಗೆ ಹೊಂದಾಣಿಕೆಯಾಗಿರ ಲಿವೆ.
-
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ)ವು 'ಗ್ರಾಮೀಣ ಜೀವನೋಪಾಯಗಳು ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ' ಎಂಬ ವಿಷಯದ ಮೇಲೆ ಫೆ.9 ಮತ್ತು 10ರಂದು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎರಡು ದಿನಗಳ ಅಂತರ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ.
ಈ ಸಮ್ಮೇಳನವನ್ನು ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗ ಹಾಗೂ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗಗಳು, ಆಂತರಿಕ ಗುಣಮಟ್ಟ ಭರವಸೆ ಕೋಶ (IQAC)ದ ಸಹಯೋಗದಲ್ಲಿ ಸಂಯುಕ್ತವಾಗಿ ಆಯೋಜಿಸುತ್ತಿವೆ. ಶೈಕ್ಷಣಿಕ ವಿದ್ವಾಂಸರು, ಸಂಶೋಧಕರು, ನೀತಿ ರೂಪಕರು, ಅಭಿವೃದ್ಧಿ ಕ್ಷೇತ್ರದ ತಜ್ಞರು, ಕೈಗಾರಿಕಾ ಪರಿಣತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಕುರಿತು ಆಳವಾದ ಚರ್ಚೆ ನಡೆಸುವ ಜಾಗತಿಕ ವೇದಿಕೆ ಒದಗಿಸುವುದು ಈ ವಿಚಾರಸಂಕಿರಣದ ಉದ್ದೇಶವಾಗಿದೆ.
ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ
1966ರಲ್ಲಿ ಸ್ಥಾಪನೆಯಾದ ಎಸ್‌ಡಿಎಂ ಕಾಲೇಜು, ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ನಾಯಕತ್ವದ ಮಾರ್ಗದರ್ಶನದಲ್ಲಿ, ಗ್ರಾಮೀಣ ಕರ್ನಾಟಕ ದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ.
ವಿಚಾರ ಸಂಕಿರಣವು ಹವಾಮಾನ ಬದಲಾವಣೆ, ಗ್ರಾಮೀಣ ಆರ್ಥಿಕ ಸವಾಲುಗಳು, ವಲಸೆ, ಉದ್ಯೋಗ ಸವಾಲುಗಳು ಹಾಗೂ ಸಾಮಾಜಿಕ–ಆರ್ಥಿಕ ಅಸಮಾನತೆಗಳು ಮುಂತಾದ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ. ಚರ್ಚೆಗಳು ಸುಸ್ಥಿರ ಅಭಿವೃದ್ಧಿ ಗುರಿ–8 (SDG 8): ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆಯೊಂದಿಗೆ ಹೊಂದಾಣಿಕೆಯಾಗಿರ ಲಿವೆ.
ಗ್ರಾಮೀಣ ಉದ್ಯಮಶೀಲತೆ, ಕೃಷಿ ಉದ್ಯಮಶೀಲತೆ (ಅಗ್ರಿ-ಪ್ರೆನರ್‌ಶಿಪ್), ಎಂಎಸ್‌ಎಂಇಗಳು, ಮಹಿಳಾ ಸಬಲೀಕರಣ, ಡಿಜಿಟಲ್ ನವೋದ್ಯಮ, ಗ್ರಾಮೀಣ ಉದ್ಯೋಗದಲ್ಲಿ ಕೃತಕ ಬುದ್ಧಿ ಮತ್ತೆ (AI)ಯ ಪಾತ್ರ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳು ಹಾಗೂ ಸಾರ್ವಜನಿಕ–ಖಾಸಗಿ ಪಾಲುದಾರಿಕೆಗಳು ಪ್ರಮುಖ ವಿಷಯಗಳಾಗಿವೆ.
ಮೌಲಿಕ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಪ್ರಬಂಧ ಗಳನ್ನು ISBN ಹೊಂದಿದ ಸಂಪಾದಿತ ಸಂಪುಟದಲ್ಲಿ ಪ್ರಕಟಿಸಲಾಗುವುದು. ಅಲ್ಲದೆ, ಕೆಲವು ಆಯ್ದ ಪ್ರಬಂಧಗಳು ಪಿಯರ್–ರಿವ್ಯೂಡ್ ಜರ್ನಲ್‌ಗಳಲ್ಲಿ ಪ್ರಕಟವಾಗಲಿವೆ.