ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಲ್ಲರೆದುರೇ ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ- ವಿಡಿಯೊ ವೈರಲ್

Vijay Deverakonda And Rashmika Mandanna: ನಟಿ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ ಸಿನಿಮಾದ ಸಕ್ಸಸ್ ಪಾರ್ಟಿಗೆ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ‌. ಈ ವೇಳೆ ವೇದಿಕೆ ಬಳಿಯಲ್ಲಿಯೇ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ(ಸಂಗ್ರಹ ಚಿತ್ರ) -

Profile
Pushpa Kumari Nov 13, 2025 2:07 PM

ನವದೆಹಲಿ: ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಭಾರತೀಯ ಸಿನಿಮಾ ರಂಗದಲ್ಲಿ ಬಹುಭಾಷೆಯ ನಟಿಯಾಗಿ ಮಿಂಚಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda) ಅವರ ಜೊತೆಗೆ ತೆರೆ ಹಂಚಿ ಕೊಂಡ ಇವರು ಬಳಿಕ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡರು‌‌. ಸಿನಿಮಾ ಹೊರತಾಗಿ ಇತರ ಕಾರ್ಯಕ್ರಮ, ಸಿನಿಮಾ ಸಂಬಂಧಿತ ಇವೆಂಟ್ , ವಿದೇಶಿ ಪ್ರವಾಸ ಹೀಗೆ ನಾನಾ ಕಡೆಯಲ್ಲಿ ಈ ಜೋಡಿ ಕಾಣಿಸಿಕೊಂಡು ಸುದ್ದಿಯಾಗಿದ್ದರು‌. ಇತ್ತೀಚೆಗಷ್ಟೇ ಕುಟುಂಬದ ವರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಇದೀಗ ನಟಿ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ (The Girlfriend) ಸಿನಿಮಾದ ಸಕ್ಸಸ್ ಪಾರ್ಟಿಗೆ ನಟ ವಿಜಯ್ ದೇವರಕೊಂಡ ಆಗಮಿಸಿ ದ್ದಾರೆ‌. ಈ ವೇಳೆ ವೇದಿಕೆ ಬಳಿಯಲ್ಲಿಯೇ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ (Dheekshith Shetty) ಅಭಿನಯದ ದಿ ಗರ್ಲ್ ಫ್ರೆಂಡ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸಕ್ಸಸ್ ಪಡೆಯುತ್ತಿದೆ. ಹೀಗಾಗಿ ಈ ಸಿನಿಮಾದ ಸಕ್ಸಸ್ ಪಾರ್ಟಿಯನ್ನು ಕೂಡ ಆಯೋಜಿಸಲಾಗಿದೆ. ತೆಲುಗು ನಟ ವಿಜಯ್ ದೇವರಕೊಂಡ ಅವರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯಲಾಗಿತ್ತು. ಈ ವೇಳೆ ಅವರು ನಟಿ ರಶ್ಮಿಕಾ ಮಂದಣ್ಣ ಅವರ ಕೈ ಗೆ ಮುತ್ತಿಟ್ಟಿದ್ದಾರೆ. ಇದೇ ವೇಳೆ ಉಳಿದ ಸಹಕಲಾವಿದರು ಮತ್ತು ಅಭಿಮಾನಿಗಳು ಖುಷಿಯಿಂದ ಓ.. ಎಂದು ಚುಡಾಯಿಸಿದ್ದ ದೃಶ್ಯಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ

ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತನಾಡಿ, ವಿಜ್ಜು ನಿಮ್ಮ ಬಗ್ಗೆ ಹೇಳಲು ಹೆಮ್ಮೆ ಯಾಗುತ್ತದೆ. ಮೊದಲ ದಿನದಿಂದಲೂ ನೀನು ಈ ಸಿನಿಮಾದಲ್ಲಿ ನನ್ನ ಜೊತೆಗಿದ್ದೀಯಾ, ಸಿನಿಮಾ ಗೆದ್ದ ಬಳಿಕ ಕೂಡ ನೀನು ಇಲ್ಲಿಗೆ ಬಂದು ನಮ್ಮ ಸಿನಿಮಾಕ್ಕೆ ಶುಭ ಹಾರೈಸಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಅವರಂತವರು ಬೆಂಬಲ ವಾಗಿ ನಿಲ್ಲುವವರು ಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ:Thama movie OTT : ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್‌ ಯಾವಾಗ?

ವಿಜಯ್ ದೇವರಕೊಂಡ ಕೂಡ ಸಿನಿಮಾ ತಂಡಕ್ಕೆ ಶುಭ ಹಾರೈಸಿ ಮಾತನಾಡಿ, ರಶ್ಮಿಕಾ ಅವರು ನಿಜ ಜೀವನದಲ್ಲಿ ಕೂಡ ಚಿತ್ರದ ಪಾತ್ರದಂತೆ ಇದ್ದಾರೆ. ಬಹಳ ಸಿಂಪಲ್ ಮತ್ತು ಮುಗ್ಧ ಹುಡುಗಿ. ತಾನು ತನ್ನ ಕೆಲಸ ಅಷ್ಟೇ ಅವಳ ಗುರಿ, ಯಾರಿಗೂ ತೊಂದರೆ ಕೊಡಲು ಬಯಸಲಾರಳು. ಈ ಚಿತ್ರದಲ್ಲಿ ಅಂಥದ್ದೇ ಪಾತ್ರ ಇದ್ದ ಕಾರಣ ನ್ಯಾಚುರಲ್ ಆಗಿ ಅಭಿನಯಿಸಿದ್ದಾರೆ ಎಂದಿದ್ದಾರೆ.

ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ದಿ ಗರ್ಲ್‌ಫ್ರೆಂಡ್' ಚಿತ್ರವನ್ನು ನಿರ್ಮಾಣಮಾಡಲಾಗಿದ್ದು ಪ್ರಸ್ತುತ ಯುಗದಲ್ಲಿ ಲವರ್ಸ್ ರಿಲೇಶನ್ ಶಿಪ್ , ಟಾಕ್ಸಿಕ್ ಬಾಯ್ ಫ್ರೆಂಡ್ ಇತ್ಯಾದಿಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ರಿಲೀಸ್ ಆದ ಮೊದಲ ದಿನದಿಂದ ಇಲ್ಲಿ ತನಕವು ಅತೀ ಹೆಚ್ಚು ಮಹಿಳಾ ಪ್ರೇಕಕರ ಮನ ಸೆಳೆದಿದ್ದ ಈ ಸಿನಿಮಾ 5ನೇ ದಿನಕ್ಕೆ ಸಿನಿಮಾ 20 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ರಶ್ಮಿಕಾ ಅಭಿನಯ ಪ್ರೇಕ್ಷಕರ ಮನಗೆದ್ದಿದ್ದು ಸಿನಿಮಾ ಸಕ್ಸಸ್ ಅನ್ನು ವಿಜಯ್ ಕೊಂಡಾಡಿಕೊಂಡಿದ್ದಾರೆ. ಈ ಮೂಲಕ ಈ ಜೋಡಿಯೂ 2026ರ ಫೆಬ್ರವರಿಯಲ್ಲಿ ವಿವಾಹವಾಗ್ತಾರೆ ಎಂಬ ವದಂತಿಗಳು ಕೂಡ ಇದೇ ಸಂದರ್ಭದಲ್ಲಿ ಕೇಳಿಬರುತ್ತಿದೆ