ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India: ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್‌, ಬೆಂಗಳೂರು- ದಿಲ್ಲಿ ವಿಮಾನ ವಿಳಂಬ

Air India: ಬೆಂಗಳೂರಿನಿಂದ ದೆಹಲಿಗೆ AI2414 ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕುಸಿದು ಬಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬದಲು ಬೇರೆ ಪೈಲಟ್‌ ನಿಯೋಜನೆ ಮಾಡಿದ ನಂತರ ವಿಮಾನ ಹಾರಾಟ ನಡೆಸಲಾಯಿತು.

ಸಾಂದರ್ಭಿಕ ಚಿತ್ರ

ಬೆಂಗಳೂರು: ಶುಕ್ರವಾರ ಮುಂಜಾನೆ ಬೆಂಗಳೂರಿನಿಂದ (Bengaluru) ದೆಹಲಿಗೆ (New delhi) ತೆರಳುತ್ತಿದ್ದ ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ (Pilot) ಕಾಕ್‌ಪಿಟ್‌ನಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಏರ್ ಇಂಡಿಯಾ (Air India) ವಿಮಾನವನ್ನು ಕೆಲಕಾಲ ಏರ್​ಪೋರ್ಟ್​ನಲ್ಲೇ ನಿಲ್ಲಿಸಲಾಯಿತು. ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಪೈಲಟ್ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೂಲಗಳ ಪ್ರಕಾರ, ಬೆಂಗಳೂರಿನಿಂದ ದೆಹಲಿಗೆ AI2414 ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕುಸಿದು ಬಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬದಲು ಬೇರೆ ಪೈಲಟ್‌ ನಿಯೋಜನೆ ಮಾಡಿದ ನಂತರ ವಿಮಾನ ಹಾರಾಟ ನಡೆಸಲಾಯಿತು. ಇದಕ್ಕೆ ಏರ್ ಇಂಡಿಯಾ ವಿಮಾನವನ್ನು ಚಲಾಯಿಸಲು ಬದಲಿ ಪೈಲಟ್ ವ್ಯವಸ್ಥೆ ಮಾಡಿತು. ಈ ಅನಿರೀಕ್ಷಿತ ಘಟನೆಯಿಂದಾಗಿ, ಪ್ರಯಾಣಿಕರು ಸ್ವಲ್ಪ ತಡವಾಗಿ ದೆಹಲಿಯನ್ನು ತಲುಪಿದರು. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ದೃಢಪಡಿಸಿದೆ.



“ಜುಲೈ 4ರ ಮುಂಜಾನೆ ನಮ್ಮ ಪೈಲಟ್‌ಗಳಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು. ಇದರ ಪರಿಣಾಮವಾಗಿ ಆ ಪೈಲಟ್ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗದೆ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪೈಲಟ್ ಈಗ ಸ್ಥಿರವಾಗಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: Ahmedabad Air Crash: ಅಹಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದಿಂದ ಸಂತ್ರಸ್ತ ಕುಟುಂಬಗಳಿಗೆ ಬೆದರಿಕೆ ಆರೋಪ

ಹರೀಶ್‌ ಕೇರ

View all posts by this author