ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಜಾತ್ರೆಯಿಂದ ಖುಷಿಯಾಗಿ ಬಂದ ವಿದ್ಯಾರ್ಥಿನಿ ಪಿಜಿಯಲ್ಲಿ ಅನುಮಾನಾಸ್ಪದ ಸಾವು

Bagalkote: ಬಾಗಲಕೋಟೆಯ ವಾಗ್ದೇವಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸೀಮಾ, ಕಳೆದ ಮೂರು ದಿನಗಳ ಹಿಂದೆಯಷ್ಟೇ ಊರಿಗೆ ಬಂದು ಕುಟುಂಬಸ್ಥರ ಜೊತೆ ಜಾತ್ರೆ ತಿರುಗಿ ಖುಷಿಯಾಗಿದ್ದಳು. ಸೆ.25ರಂದು ಹಾಸ್ಟೆಲ್‌ಗೆ ಬಂದವಳು ಕೆಲ ಕಾಲ ಹಾಸ್ಟೆಲ್ ವಾರ್ಡನ್ ಜೊತೆ ಮಾತಾಡಿದ ಬಳಿಕ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಬಾಗಲಕೋಟೆ: ವಿದ್ಯಾರ್ಥಿನಿಯೊಬ್ಬಳು (Student) ಖಾಸಗಿ ಪಿಜಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸೀಮಾ ರಾಠೋಡ (17) ಮೃತ ದುರ್ದೈವಿ. ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ತಾಂಡಾದ ನಿವಾಸಿಯಾಗಿರುವ ಸೀಮಾ ರಾಠೋಡ, ಸೆಪ್ಟೆಂಬರ್ 25ರಂದು ಊರಿನಲ್ಲಿ ಜಾತ್ರೆ ಮುಗಿಸಿಕೊಂಡು ವಾಪಸ್ ಪಿಜಿಗೆ ಬಂದಿದ್ದು, ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ (Self Harming) ಪತ್ತೆಯಾಗಿದೆ. ಸೀಮಾ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಬಾಗಲಕೋಟೆಯ ವಾಗ್ದೇವಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸೀಮಾ, ಕಳೆದ ಮೂರು ದಿನಗಳ ಹಿಂದೆಯಷ್ಟೇ ಊರಿಗೆ ಬಂದು ಕುಟುಂಬಸ್ಥರ ಜೊತೆ ಜಾತ್ರೆ ತಿರುಗಿ ಖುಷಿಯಾಗಿದ್ದಳು. ಸೆ.25ರಂದು ತಾಯಿಗೆ ತಿಳಿಸಿ ಚಿಕ್ಕಪ್ಪನೊಂದಿಗೆ ಹಾಸ್ಟೆಲ್‌ಗೆ ಬಂದಿದ್ದಳು. ಬಳಿಕ ಕೆಲ ಕಾಲ ಹಾಸ್ಟೆಲ್ ವಾರ್ಡನ್ ಜೊತೆ ಮಾತಾಡಿದ ಸೀಮಾ ಸಂಜೆ 4 ಗಂಟೆ ಸುಮಾರಿಗೆ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಪಿಜಿಯಲ್ಲಿ ಸೀಮಾ ಆತ್ಮಹತ್ಯೆಗೂ ಮುನ್ನ ಸುಮಾರು ಹೊತ್ತು ಹೊರಗಡೆ ಕಟ್ಟೆ ಮೇಲೆ ಕುಳಿತು ಮಹಿಳಾ ವಾರ್ಡನ್ ಜೊತೆ ಮಾತನಾಡಿದ್ದಳು. ವಾರ್ಡನ್ ತನ್ನ ಮಗು ಎತ್ತಿಕೊಂಡು ಅಲ್ಲಿಂದ ಹೋದ ಮೇಲೆ ಸೀಮಾ ರೂಮಿಗೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಇತರೆ ವಿದ್ಯಾರ್ಥಿನಿಯರು ಹಾಸ್ಟೆಲ್ ರೂಮಿಗೆ ಹೋದಾಗ ಸೀಮಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದರಿಂದ ಭಯಬಿದ್ದ ವಿದ್ಯಾರ್ಥಿಗಳು ಗಾಬರಿಯಾಗಿ ಹೊರ ಬರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೀಮಾಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ. ಸ್ಥಳದಲ್ಲಿ ಮೃತ ಸೀಮಾಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಮಗೆ ಸಾವಿನಲ್ಲಿ ಸಂಶಯವಿದೆ, ಸೂಕ್ತ ತನಿಖೆಯಾಗಬೇಕೆಂದು ಆಗ್ರಹ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಾಗ ಮೊದಲು ಹಾಸ್ಟೆಲ್ ಸಿಬ್ಬಂದಿ ಸೀಮಾ ತಾಯಿ ಶಕುಂತಲಾಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಫಿಟ್ಸ್ ಬಂದಿದೆ ಎಂದು ತಿಳಿಸಿದ್ದಾರೆ‌‌‌. ಆದರೆ ಸೀಮಾ ನೇಣು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ‌. ಇದು ಕುಟುಂಬಸ್ಥರಿಗೆ ಅನುಮಾನ ಹುಟ್ಟಲು ಕಾರಣವಾಗಿದೆ. ಸೀಮಾ ತಾಯಿ ಬಾಗಲಕೋಟೆ ನವನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾವಿಗೂ ಮುನ್ನ ಸೀಮಾ ತನ್ನ ತಾಯಿ ಜೊತೆ ಮಾತನಾಡಿದ್ದು, ಕೆಲವೊಂದು ಮನೆಯ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ.

ಪ್ರಕರಣ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿನಿ ನೇಣು ಹಾಕಿಕೊಂಡಿದ್ದಾಳೆ. ಸಿಸಿಟಿವಿ ಆಧರಿಸಿ ತನಿಖೆ ಮಾಡಿ ವಿದ್ಯಾರ್ಥಿನಿಗೆ ಯಾರದಾದರೂ ಒತ್ತಡವಿತ್ತಾ ಅಥವಾ ಬೇರೆ ಕಾರಣವೇನಾದರೂ ಇತ್ತಾ ಎನ್ನುವುದನ್ನು ಪತ್ತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿಡಿಪಿಯು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಕಾಲೇಜು ಹಾಗೂ ಹಾಸ್ಟೆಲ್‌ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ‌.

ಇದನ್ನೂ ಓದಿ: Self harming: ಮದುವೆಗೆ ವಿರೋಧ, ರೈಲಿಗೆ ತಲೆ ಕೊಟ್ಟು ಅಂತರ್ಜಾತಿ ಪ್ರೇಮಿಗಳು ಆತ್ಮಹತ್ಯೆ

ಹರೀಶ್‌ ಕೇರ

View all posts by this author