ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭೂ ಪರಿಹಾರ ಕೊಡದೇ ಸತಾಯಿಸುತ್ತಿದ್ದ ಅಧಿಕಾರಿ; ಚಪ್ಪಲಿಯಿಂದ ಹೊಡೆದ ರೈತ!

ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಆಟಾಡಿಸುತ್ತಿದ್ದ ಅಧಿಕಾರಿಗಳ ವರ್ತನೆಗೆ ಬೇಸರಗೊಂಡ ಬಾಗಲಕೋಟೆ ರೈತರೊಬ್ಬರು ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ 2004 ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ರೈತ ಬಸವರಾಜ ದೊಡ್ಡಮನಿ ಎಂಬುವವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಸಂಗ್ರಹ ಚಿತ್ರ

ಬಾಗಲಕೋಟೆ: ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಆಟಾಡಿಸುತ್ತಿದ್ದ ಅಧಿಕಾರಿಗಳ ವರ್ತನೆಗೆ ಬೇಸರಗೊಂಡ ಬಾಗಲಕೋಟೆ ರೈತರೊಬ್ಬರು ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆ ನಗರವನ್ನು (Bagakakot News) ಸಂಪರ್ಕಿಸುವ ರಸ್ತೆ ಯೋಜನೆಗಾಗಿ 2004 ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ರೈತ ಬಸವರಾಜ ದೊಡ್ಡಮನಿ ಎಂಬುವವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಪರಿಹಾರ ಕೊಡುವುದರಲ್ಲಿನ ವಿಳಂಬ ಮತ್ತು ಅಸಮರ್ಪಕ ಪರಿಹಾರದ ಬಗ್ಗೆ ರೈತ ದೊಡ್ಡಮನಿ ಅಸಮಾಧಾನಗೊಂಡಿದ್ದರು.

ನಿನ್ನೆ ಕಚೇರಿಯ ಕಾರ್ಯಕಲಾಪಗಳ ವೇಳೆ, ಬಸವರಾಜ ದೊಡ್ಡಮನಿ ಅವರು ಬಿಟಿಡಿಎ ಕೇಸ್ ವರ್ಕರ್ ಅಂಕಡ್ ಅವರಿಗೆ ಚಪ್ಪಲಿಯಿಂದ ಹೊಡೆದರು, ಇದರಿಂದಾಗಿ ಕಚೇರಿ ಆವರಣದಲ್ಲಿ ಗದ್ದಲ ಉಂಟಾಯಿತು ಮತ್ತು ಸಭೆಗೆ ಸ್ವಲ್ಪ ಸಮಯ ಅಡ್ಡಿಯಾಯಿತು. ಕಳೆದ ಒಂದು ವರ್ಷದಿಂದ 15 ಜನ ಸಫಾಯಿ ಕರ್ಮಚಾರಿಗಳಿಗೆ ಸೈಟ್ ಮಂಜೂರು ಮಾಡಿಲ್ಲ ಎಂದು ಆಗ್ರಹಿಸಿ ಡಿಎಸ್‌ಎಸ್‌ (DSS) ಹೋರಾಟಗಾರರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಈ ಮುತ್ತಿಗೆಯ ವೇಳೆ ಕಚೇರಿಗೆ ಆಗಮಿಸಿದ ರೈತ ಬಸಪ್ಪ ದೊಡಮನಿ ಎಂಬುವವರು ಡಿಎಸ್‌ಎಸ್‌ ಮುಖಂಡರ ಎದುರೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿಡಿಯೋ ನೋಡಿ



50 ಗಂಟೆಯ ಶಿಫ್ಟ್ ಮುಗಿಸಿ ಬಂದ ವೈದ್ಯೆಗೆ ಅತ್ತೆಯಿಂದ ಆರತಿಯ ಸ್ವಾಗತ: ವಿಡಿಯೊ ವೈರಲ್

ನನ್ನ ಭೂಮಿ ಮುಳುಗಡೆಯಾಗಿ ನಾಲ್ಕು ವರ್ಷಗಳೇ ಕಳೆದರೂ ಬಿಟಿಡಿಎ ಅಧಿಕಾರಿಗಳು ಇನ್ನುವರೆಗೆ ನನಗೆ ಭೂ ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಬಿಟಿಡಿಎ ಹಿರಿಯ ಸಹಾಯಕ ಹಾಗೂ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ನೀಲಕಂಠ ಅಂಕದ್ ಮತ್ತು ರೈತನ ಮಧ್ಯೆ ತೀವ್ರ ವಾಗ್ವಾದ ಏರ್ಪಟ್ಟಿದೆ. ಮಾತು ಬೆಳೆಯುತ್ತಿದ್ದಂತೆ ತೀವ್ರ ಕೋಪಗೊಂಡ ರೈತ ಬಸಪ್ಪ, ತಕ್ಷಣವೇ ತಮ್ಮ ಚಪ್ಪಲಿಯನ್ನು ತೆಗೆದುಕೊಂಡು ಟೈಪಿಸ್ಟ್ ನೀಲಕಂಠ ಅವರಿಗೆ ಎಲ್ಲರ ಎದುರೇ ಹೊಡೆದಿದ್ದಾರೆ.

Vishakha Bhat Heggar

View all posts by this author