ಬಾಗಲಕೋಟೆ: ಭೀಕರ ರಸ್ತೆ ಅಪಘಾತದಲ್ಲಿ ತುಂಡಾಗಿ ಬಿದ್ದಿದ್ದ ಕೈಯನ್ನು ಹಿಡಿದು ಯುವಕನೊಬ್ಬ ಆಸ್ಪತ್ರೆಗೆ ಬಂದ (Road Accident) ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ (Bagalkot) ನಡೆದಿದೆ. ಯುವಕ ಕೈ ಮಣಿಕಟ್ಟಿನ ಭಾಗದಲ್ಲಿ ಸಂಪೂರ್ಣವಾಗಿ ಕತ್ತರಿಹೋದರೂ ಧೈರ್ಯ ಕಳೆದುಕೊಳ್ಳದೆ, ಕತ್ತರಿಸಿದ ಕೈಯನ್ನೇ ಹಿಡಿದು ಆಸ್ಪತ್ರೆಗೆ ಬಂದಿದ್ದಾನೆ. ರೋಹನ್ ಎಂಬ ಯುವಕ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ರೋಹನ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಭೀಕರ ಅಪಘಾತ ಸಂಭವಿಸಿದೆ. ಕಾರು ಪಲ್ಟಿಯಾದ ಪರಿಣಾಮ ರೋಹನ್ ಅವರ ಒಂದು ಕೈ ಮಣಿಕಟ್ಟಿನ ಭಾಗದಲ್ಲಿ ಸಂಪೂರ್ಣವಾಗಿ ಕಟ್ ಆಗಿದೆ. ತುಂಡಾಗಿದ್ದ ಎಡಗೈಯನ್ನು ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡು ಬಂದಿದ್ದಾನೆ. ಜಮಖಂಡಿಯಿಂದ ಸಾವಳಗಿಗೆ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.. ವೈದ್ಯರು ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಕತ್ತರಿಸಿದ ಕೈಯನ್ನು ಮರುಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ವೃದ್ಧ ಸಾವು
ಯಲಹಂಕ ನ್ಯೂಟೌನ್‌ನ ಹೊಯ್ಸಳ ಗ್ರೌಂಡ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಟ್ಯಾಂಕರ್ ಸಾಗಿಸುವ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಣ್ಣ (70) ಎಂದು ಗುರುತಿಸಲಾಗಿದ್ದು, ವೆಂಕಣ್ಣ ಅವರ ಮೊಮ್ಮಕ್ಕಳಾದ ಶ್ರಾವಣಿ (12) ಹಾಗೂ ಚರಿತ್ (5) ಕೂದಲೆಳೆ ಅಂತರದಲ್ಲಿ ಪ್ರಾಣಾಯದಿಂದ ಪಾರಾಗಿದ್ದಾರೆ.
Vijayapura Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ತಾಯಿ, ಇಬ್ಬರು ಮಕ್ಕಳ ಸಾವು
ಮೂಲಗಳ ಪ್ರಕಾರ ವೆಂಕಣ್ಣ ಅವರು ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಬೆಳಿಗ್ಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ರಸ್ತೆ ತಿರುವಿನಲ್ಲಿ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ಸಾಗುತ್ತಿದ್ದ ದ್ವಿಚಕ್ರವಾಹನ ಟ್ಯಾಂಕರ್ ಹಿಂದಿಕ್ಕಿ ಮುಂದಕ್ಕೆ ಸಾಗಲು ಯತ್ನಿಸಿದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿದೆ.