ಬಳ್ಳಾರಿ: ಯೋಧರ ಪ್ಯಾರಾಚೂಟ್ ತರಬೇತಿ ಅವಧಿಯಲ್ಲಿ ದುರಂತವೊಂದು ಸಂಭವಿಸಿದ್ದು, 50 ಅಡಿ ಮೇಲಿನಿಂದ ಜಿಗಿದ ಇಬ್ಬರು (Parachute training Accident) ಯೋಧರ ಕಾಲು ಮುರಿದಿದೆ ಎಂದು ವರದಿಯಾಗಿದೆ. ಬಳ್ಳಾರಿ ಹೊರವಲಯದ ಪೀಡಿಹಳ್ಳಿ ಪ್ಯಾರಾಚೂಟ್ ತರಬೇತಿ ನಡೆಯುತ್ತಿತ್ತು. ಯೋಧ ಚಿನ್ನ ರಾಜ್ ಅವರ ಕಾಲಿನ ಮೂಳೆಮುರಿತವಾಗಿದ್ದು ಮತ್ತೊಬ್ಬ ಯೋಧನಿಗೂ ಕಾಲಿನ ಮೂಳೆ ಮುರಿತವಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಿಮಾನದಿಂದ ಯೋಧರು ಜಂಪ್ ಮಾಡಿದ್ದಾರೆ. ಈ ವೇಳೆ ಪ್ಯಾರಾಚೂಟ್ ಓಪನ್ ಆಗಿದೆ. ಬಳಿಕ ಲ್ಯಾಂಡಿಂಗ್ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿ ಇಬ್ಬರು ಯೋಧರು ಹೊಲದಲ್ಲಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದೆ. ಭಾರತೀಯ ವಾಯು ಸೇನೆಯಿಂದ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿದ್ದು, ಒಟ್ಟು 417 ಸೈನಿಕರು ಇದ್ದರು ಎಂದು ತಿಳಿದು ಬಂದಿದೆ. ಬಳ್ಳಾರಿಯ ಐಟಿಐ ಕಾಲೇಜು ಮೈದಾನಕ್ಕೆ ಬಂದಿಳಿದ ಸೇನಾ ಹೆಲಿಕಾಪ್ಟರ್ ಮೂಲಕ ಚಿನ್ನರಾಜ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ವಾಯುಪಡೆಯ ಸಿಬ್ಬಂದಿ ಅರೆಸ್ಟ್
ಯುದ್ಧ ವಿಮಾನ ಭೂಸ್ಪರ್ಶ
ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇ ಮೇಲೆ ತುರ್ತು ಭೂ ಸ್ಪರ್ಷ ಮಾಡಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ. ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ.