ಬಳ್ಳಾರಿ: ಬಳ್ಳಾರಿ ಗಲಭೆ ಪ್ರಕರಣದ (Ballari Clash Case) ವೇಳೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮೇಲೆ ಕೆಲ ಕಿಡಿಗೇಡಿಗಳು ಗುಂಡು ಹಾರಿಸಿದ್ದರು. ಇದಕ್ಕೆ ಸಂಬಂಧಿಸಿ ಬುಲೆಟ್ ಪತ್ತೆ ಹಚ್ಚಲು ರೆಡ್ಡಿ ಮನೆಗೆ ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ನೀಡಿದೆ. ಹುಬ್ಬಳ್ಳಿ ಬಾಂಬ್ ನಿಷ್ಕ್ರಿಯ ದಳ ತಂಡದಿಂದ ಬುಲೆಟ್‌ಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಜನಾರ್ದನ ರೆಡ್ಡಿ ಮನೆ ಮೇಲೆ ಒಟ್ಟು ಏಳು ರೌಂಡ್ ಫೈರಿಂಗ್ ನಡೆದಿದೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ, ಪ್ಯಾಲಿಸ್ಟಿಕ್ ಟೀಂ ಮತ್ತು ಸುಕೋ (ಫಾರೆನ್ಸಿಕ್ ಲ್ಯಾಬ್) ಟೀಂ ನಿಂದ ಪರಿಶೀಲನೆ ಮಾಡಲಾಗುತ್ತಿದೆ.
ಘಟನೆ ನಡೆದ ದಿನ ಏನೇನಾಯ್ತು ಎಂದು ತಿಳಿಯಲು ಹುಬ್ಬಳ್ಳಿಯಿಂದ ಬಂದಿರೋ ಪ್ಯಾಲಿಸ್ಟಿಕ್ ತಂಡದಿಂದ ಸೀನ್ ರಿಕ್ರಿಯೇಟ್ ಮಾಡಲಾಗುತ್ತಿದೆ. ಘಟನೆ ಬಗ್ಗೆ ಐಜಿ ವರ್ತಿಕಾ ಅವರಿಂದ ತಂಡ ಮಾಹಿತಿ ಪಡೆದಿದೆ. ಜನಾರ್ದನ ರೆಡ್ಡಿ ಮನೆಯ ದಾರಿ ಬಂದ್ ಮಾಡಿ, ಯಾರನ್ನೂ ಒಳಗೆ ಬಿಡದೇ ಪರಿಶೀಲನೆ ಮಾಡಲಾಗುತ್ತಿದೆ.
ಸತೀಶ್ ರೆಡ್ಡಿಯ ಗನ್‌ಮ್ಯಾನ್ ಬಂಧನ, ಎಲ್ಲ ಆರೋಪಿಗಳು ಬೆಂಗಳೂರಿಗೆ ಶಿಫ್ಟ್
ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಭೆ (Ballari firing) ತನಿಖೆಗೆ ಸ್ಫೋಟಕ ತಿರುವು ಸಿಕ್ಕಿದೆ. ಮಾರಾಮಾರಿ ವೇಳೆ ಬುಲೆಟ್ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ (congress worker) ರಾಜಶೇಖರ್ ದೇಹ ಹೊಕ್ಕ ಗುಂಡು ಯಾರದ್ದು ಎಂದು ಗೊತ್ತಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ 26 ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಶಾಸಕ ಭರತ್ ರೆಡ್ಡಿ (Bharath Reddy) ಅತ್ಯಾಪ್ತ ಸತೀಶ್ ರೆಡ್ಡಿಯ ಗನ್‌ಮ್ಯಾನ್ ಗುರುಚರಣ್ ಸಿಂಗ್ ಫೈರ್ ಮಾಡಿದ್ದ ಬಂದೂಕಿನ ಬುಲೆಟ್ ತಗುಲಿಯೇ ರಾಜಶೇಖರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. 12 ಎಂಎಂ ಬುಲೆಟ್ ಅನ್ನು ರಾಜಶೇಖರ್ ದೇಹದಿಂದ ಪೋಸ್ಟ್ ಮಾರ್ಟಮ್ ವೇಳೆ ಹೊರ ತೆಗೆಯಲಾಗಿದೆ. ಹೊರ ತೆಗೆದ ಬುಲೆಟ್ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.
ಬಳ್ಳಾರಿ ಫೈರಿಂಗ್ ಕೇಸ್ ಸಿಐಡಿ ತನಿಖೆಗೆ? ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಜಶೇಖರ್ ಮೃತನ ದೇಹ ಹೊಕ್ಕಿದ್ದು 12 ಎಂಎಂ ಸಿಂಗಲ್‌ಬೋರ್ ಬುಲೆಟ್ ಎಂದು ಖಚಿತವಾಗಿದೆ. ಪ್ರಕರಣ ಸಂಬಂಧ ಪೊಲೀಸರು (Ballari Police) 5 ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಸಂಬಂಧ ಪಂಜಾಬ್ ಮೂಲದ ಗುರುಚರಣ್ ಸಿಂಗ್ ಜತೆಗೆ ಬಲ್ಜಿತ್ ಸಿಂಗ್, ಮಹೇಂದ್ರ ಸಿಂಗ್ ಅನ್ನೋ ಗನ್‌ಮ್ಯಾನ್‌ಗಳನ್ನು ಪೊಲೀಸರು ಬಂಧನ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ಬಿಜೆಪಿಯ 13 ಜನ ಸೇರಿ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿ, ಮೆಡಿಕಲ್ ಟೆಸ್ಟ್ ನಡೆಸಿದ್ದಾರೆ.