ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾರ್ಟಿ ವೇಳೆ ಹೆಚ್ಚು ಚಿಕನ್‌ ಪೀಸ್‌ ಸೇವಿಸಿದನೆಂದ ಸಹೋದ್ಯೋಗಿ ಎದೆಗೆ ಚೂರಿ ಇರಿದು ಕೊಲೆ ಮಾಡಿದ ಪಾಪಿ; ಬೆಳಗಾವಿಯಲ್ಲಿ ಅಮಾನುಷ ಘಟನೆ

Belagavi News: ಪಾರ್ಟಿಯಲ್ಲಿ ಹೆಚ್ಚು ಚಿಕನ್ ಪೀಸ್ ತಿಂದಿದ್ದಾನೆ ಎನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಸೀತಾರಾಮ್ ಚಂದ್ರದೇವ್ ಎಂದು ಗುರುತಿಸಲಾಗಿದೆ.

ಚಾಟ್‌ಜಿಪಿಟಿ ರಚಿತ ಚಿತ್ರ

ಬೆಳಗಾವಿ, ಆ. 31: ಪಾರ್ಟಿ ವೇಳೆ ಚಿಕನ್ ಪೀಸ್ ವಿಚಾರಕ್ಕಾಗಿ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ಹೋಗಿ, ಜತೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯ ಹತ್ಯೆಗೆ ಕಾರಣವಾದ ವಿಚಿತ್ರ ಪ್ರಸಂಗ ನಡೆದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶ ಮೂಲದ ಸೀತಾರಾಮ್ ಚಂದ್ರದೇವ್ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಅರುಣ್‌ ಕುಮಾರ್ ಬಲಿಷ್ಠರ್ ಚೌಹಾಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸೀತಾರಾಮ್ ಹಾಗೂ ಅರುಣ್‌ ಕುಮಾರ್‌ ಇಬ್ಬರೂ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಒಂದೇ ಗ್ರಾಮದವರಾಗಿದ್ದು, ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿರುವ ಪ್ರಸಿದ್ಧ ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಶೆಡ್‌ನಲ್ಲಿ ಇತರ 4-5 ಸಹೋದ್ಯೋಗಿಗಳೊಂದಿಗೆ ವಾಸವಾಗಿದ್ದರು. ರಜಾದಿನವಾಗಿದ್ದರಿಂದ ಭಾನುವಾರ ಎಲ್ಲರೂ ಸೇರಿ ಶೆಡ್‌ನಲ್ಲಿ ಚಿಕನ್ ಅಡುಗೆ ಮಾಡಿ ಮದ್ಯಪಾನ ಸೇವಿಸುತ್ತಿದ್ದರು. ಈ ವೇಳೆ ಸತೀರಾಮ್ ಹೆಚ್ಚು ಚಿಕನ್ ಪೀಸ್‌ಗಳನ್ನು ತಿಂದಿದ್ದಾನೆ ಎಂಬ ವಿಚಾರಕ್ಕೆ ಅರುಣ್‌ ಕುಮಾರ್‌ ಕಿರಿಕ್‌ ಮಾಡಿದ್ದು, ಮಾತಿನ ಚಕಾಮಕಿ ಆರಂಭವಾಗಿದೆ.

ಚಲಿಸುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ, ಕಂಡಕ್ಟರ್ ಬಂಧನ

ಮಾತಿಗೆ ಮಾತು ಬೆಳೆದು, ಅತಿಯಾದ ಮದ್ಯದ ಅಮಲಿನಲ್ಲಿದ್ದ ಅರುಣ್‌ ಕುಮಾರ್ ಅಲ್ಲೇ ಪಕ್ಕದಲ್ಲಿದ್ದ ತರಕಾರಿ ಕತ್ತರಿಸುವ ಚಾಕುವನ್ನು ತೆಗೆದುಕೊಂಡು ಸೀತಾರಾಮ್ ಎದೆಗೆ ಇರಿದಿದ್ದಾನೆ. ಗಾಯಗೊಂಡ ಸೀತಾರಮ್‌ನನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ತೀವ್ರ ರಕ್ತಾಸ್ರಾವವಾಗಿ ಸೀತಾರಾಮ್ ಸ್ಥಳದಲ್ಲೇ ಅಸುನಿಗಿದ್ದಾರೆ.

ನಾಟಕವಾಡಿ ಸಿಕ್ಕಿಬಿದ್ದ ಆರೋಪಿ

ಕೊಲೆ ಮಾಡಿದ ನಂತರ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪಿ ಅರುಣ್‌ ಕುಮಾರ್, ಸೀತಾರಾಮ್ ಶವವನ್ನು ಗೋಕಾಕ್‌ನ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ವೆಲ್ಡಿಂಗ್‌ ಕೆಲಸ ಮಾಡುವಾಗ ಎತ್ತರದಿಂದ ಬಿದ್ದು ಗಾಯಗೊಂಡಿದ್ದಾನೆಂದು ವೈದ್ಯರ ಬಳಿ ಸುಳ್ಳು ಕಥೆ ಹೇಳಿ ನಂಬಿಸಲು ಯತ್ನಿಸಿದ್ದಾನೆ. ಆದರೆ ಮೃತನ ಎದೆಯ ಮೇಲಿದ್ದ ಆಳವಾದ ಚಾಕು ಇರಿತದ ಗಾಯವನ್ನು ಕಂಡು ಅನುಮಾನಗೊಂಡ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ತನಿಖೆ ಮಾಡಿದಾಗ ಇದು ಬಿದ್ದ ಗಾಯವಲ್ಲ ಕೊಲೆ ಎಂಬುವುದು ಗೊತ್ತಾಗಿದೆ.

ರೈಲು ಸೀಟ್‌ನ ಕೆಳಗೆ ಮಹಿಳೆಯ ಮೃತದೇಹ ಪತ್ತೆ; ನಿಗೂಢ ಸಾವಿನಿಂದ ಬೆಚ್ಚಿಬಿದ್ದ ಧಾರವಾಡ

ಘಟಪ್ರಭಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಚಿಕನ್ ಪೀಸ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೆ ಬಳಿಸಿದ್ದ ಚಾಕುವನ್ನು ವಶಪಡಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author