ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Street Dog Attack: ಅಟ್ಟಿಸಿಕೊಂಡು ಬಂದ ಬೀದಿ ನಾಯಿಗೆ ಬೈಕ್‌ ಸವಾರ ಬಲಿ

ಬೈಕ್ ಅಪಘಾತ ಎಂದು ಭಾವಿಸಿ ಪೊಲೀಸರು ಸುಮ್ಮನಾಗಿದ್ದರು. ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ನೋಡಿದಾಗ ಸಾವಿನ ರಹಸ್ಯ ಬಯಲಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬೀದಿ ನಾಯಿಯೊಂದು ವಿಶ್ವನಾಥರನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಅದರಿಂದ ತಪ್ಪಿಸಿಕೊಳ್ಳಲು ವಿಶ್ವನಾಥ್ ವೇಗವಾಗಿ ಬೈಕ್‌ ಓಡಿಸಿದ್ದಾರೆ. ಈ ವೇಳೆ ಮನೆಯ ಗೋಡೆಗೆ ಸ್ಕೂಟಿ ಡಿಕ್ಕಿ ಹೊಡೆದು ಸ್ಥಳದಲ್ಲೇ ವಿಶ್ವನಾಥ್ ಸಾವನಪ್ಪಿದ್ದಾರೆ.

ಅಟ್ಟಿಸಿಕೊಂಡು ಬಂದ ಬೀದಿ ನಾಯಿಗೆ ಬೈಕ್‌ ಸವಾರ ಬಲಿ

ಮೃತ ವಿಶ್ವನಾಥ ಶಿರೋಳ -

ಹರೀಶ್‌ ಕೇರ
ಹರೀಶ್‌ ಕೇರ Jan 17, 2026 12:35 PM

ಬೆಳಗಾವಿ, ಜ.17 : ಬೆಳಗಾವಿಯಲ್ಲಿ (Belagavi news) ಬೀದಿ ನಾಯಿಗೆ ಹೆದರಿ (Street dog attack) ಬೈಕ್ ಸವಾರ ಒಬ್ಬರು ಸಾವನ್ನಪ್ಪಿರುವ ವಿಚಿತ್ರ ಘಟನೆ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕುಂಬಾರ ಗಲ್ಲಿಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದ್ದು, ವಿಶ್ವನಾಥ ಶಿರೋಳ ಎಂಬ ಬೈಕ್ ಸವಾರ ಸಾವನಪ್ಪಿದ್ದಾರೆ. ಜನವರಿ 15ರಂದು ಈ ಘಟನೆ ನಡೆದಿದೆ.

ಬೈಕ್ ಅಪಘಾತ ಎಂದು ಭಾವಿಸಿ ಪೊಲೀಸರು ಸುಮ್ಮನಾಗಿದ್ದರು. ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ನೋಡಿದಾಗ ಸಾವಿನ ರಹಸ್ಯ ಬಯಲಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬೀದಿ ನಾಯಿಯೊಂದು ವಿಶ್ವನಾಥರನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಅದರಿಂದ ತಪ್ಪಿಸಿಕೊಳ್ಳಲು ವಿಶ್ವನಾಥ್ ವೇಗವಾಗಿ ಬೈಕ್‌ ಓಡಿಸಿದ್ದಾರೆ. ಈ ವೇಳೆ ಮನೆಯ ಗೋಡೆಗೆ ಸ್ಕೂಟಿ ಡಿಕ್ಕಿ ಹೊಡೆದು ಸ್ಥಳದಲ್ಲೇ ವಿಶ್ವನಾಥ್ ಸಾವನಪ್ಪಿದ್ದಾರೆ.

ತವರು ಮನೆಗೆ ಹೋಗುತ್ತಾಳೆಂದು ಪತ್ನಿಯ ಕೊಂದ ಪತಿ

ಹಾನಗಲ್: ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮೇಲೆ ಪತಿ ಹಲ್ಲೆ ಎಸಗಿ ಕೊಲೆ ಮಾಡಿರುವ ಘಟನೆ ಹಾನಗಲ್‌ ತಾಲೂಕಿನ ಮುಡೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಸಾಲೇಹಾ ಚಮನಸಾಬ ಗಣಜೂರ ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ಮುಡೂರು ಗ್ರಾಮದ ಗೌಸ್ ಬಿ ಮಕಬುಲ್ ಅಹ್ಮದ್ ಹಿರೇಹಳ್ಳಿ (44) ಕೊಲೆ ಆರೋಪಿಯಾಗಿದ್ದಾನೆ.

ಈ ಘಟನೆಗೆ ಸಂಬಂಧಿಸಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಹಾನಗಲ್‌ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.

ದೇವಸ್ಥಾನಕ್ಕೆ 16 ಲಕ್ಷ ರುಪಾಯಿಯ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿಯ ಭೀಕರ ಕೊಲೆ; ಆಸ್ತಿಗಾಗಿ ಸಂಬಂಧಿಕರಿಂದಲೇ ಕೃತ್ಯ