ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Green Glass Bangle manufacturing unit: ಹಸಿರು ಗಾಜಿನ ಬಳೆ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ

ಮಹಿಳೆಯರ ಸಿಂಗಾರಕ್ಕೆ ಅವಿಭಾಜ್ಯವಾಗಿರುವ ಅಖಂಡ ಹಸಿರು ಬಳೆಗಳ ಉತ್ಪಾದನೆಯಲ್ಲಿ ಮುರಗೋಡ ಗ್ರಾಮವು ವಿಶೇಷ ಸ್ಥಾನ ಹೊಂದಿದೆ. ಆದರೆ ಕಟ್ಟಿಗೆ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದ ಈ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆ ಸುಮಾರು 9.95 ಕೋಟಿ ರು. ವೆಚ್ಚ ದಲ್ಲಿ ‘ಮುರಗೋಡ ಬಳೆ ತಯಾರಿಕಾ ಫೌಂಡೇಷನ್’ ಮೂಲಕ ಅತ್ಯಾಧುನಿಕ ಗ್ಯಾಸ್ ಆಧಾರಿತ ಬಳೆ ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಹಸಿರು ಗಾಜಿನ ಬಳೆ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ

-

Ashok Nayak
Ashok Nayak Feb 19, 2026 3:54 PM

ಶರೀಫ ನದಾಫ ಬೈಲಹೊಂಗಲ

ಮುರಗೋಡ ಗ್ರಾಮದಲ್ಲಿ ರಾಜ್ಯ ಸರಕಾರದಿಂದ 5 ಎಕರೆ ಜಮೀನು

ಯೋಜನಾ ವೆಚ್ಚದಲ್ಲಿ ಶೇ.15ರಷ್ಟು ಅನುದಾನ ಮಂಜೂರು

ಹಸಿರು ಗಾಜಿನ ಬಳೆಗಳಿಗಾಗಿ ಹೆಸರಾಗಿರುವ ಬೈಲಹೊಂಗಲ ಮತಕ್ಷೇತ್ರದ ಮುರಗೋಡ ಗ್ರಾಮದಲ್ಲಿ ಶತಮಾನಗಳ ಪುರಾತನ ಬಳೆ ತಯಾರಿಕಾ ಉದ್ಯಮಕ್ಕೆ ಆಧುನಿಕ ರೂಪ ನೀಡುವ ಮಹತ್ವದ ಹೆಜ್ಜೆ ಇಡಲಾಗಿದೆ.

ಮಹಿಳೆಯರ ಸಿಂಗಾರಕ್ಕೆ ಅವಿಭಾಜ್ಯವಾಗಿರುವ ಅಖಂಡ ಹಸಿರು ಬಳೆಗಳ ಉತ್ಪಾದನೆ ಯಲ್ಲಿ ಮುರಗೋಡ ಗ್ರಾಮವು ವಿಶೇಷ ಸ್ಥಾನ ಹೊಂದಿದೆ. ಆದರೆ ಕಟ್ಟಿಗೆ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದ ಈ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆ ಸುಮಾರು 9.95 ಕೋಟಿ ರು. ವೆಚ್ಚದಲ್ಲಿ ‘ಮುರಗೋಡ ಬಳೆ ತಯಾರಿಕಾ ಫೌಂಡೇಷನ್’ ಮೂಲಕ ಅತ್ಯಾಧುನಿಕ ಗ್ಯಾಸ್ ಆಧಾರಿತ ಬಳೆ ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ರಾಜ್ಯ ಸರಕಾರ ಮುರಗೋಡ ಗ್ರಾಮದ ಹೊರವಲಯದಲ್ಲಿ 5 ಎಕರೆ ಜಮೀನನ್ನು ಉಚಿತವಾಗಿ ನೀಡಿದ್ದು, ಯೋಜನಾ ವೆಚ್ಚದಲ್ಲಿ ಶೇ.15ರಷ್ಟು ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಈ ಘಟಕ ದಕ್ಷಿಣ ಭಾರತದ ಮೊದಲ ಹಾಗೂ ದೇಶದ ಎರಡನೇ ಗ್ಯಾಸ್ ಮೂಲಕ ಕಾರ್ಯನಿರ್ವಹಿಸುವ ಬಳೆ ತಯಾರಿಕಾ ಘಟಕವಾಗಲಿದೆ. ಗ್ಯಾಸ್ ಬಳಕೆಯಿಂದ ತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಗುಣಮಟ್ಟದ ಬಳೆಗಳನ್ನು ತಯಾರಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ: Belagavi Assembly Session: ಇಂದು ರೈತರ ಜೊತೆಗೆ ಬೆಳಗಾವಿ ಸುವರ್ಣ ಸೌಧಕ್ಕೆ ಬಿಜೆಪಿ ಮುತ್ತಿಗೆ

ಸದ್ಯ ಒಂದು ಬಳೆಗೆ 70 ಪೈಸೆ ವೆಚ್ಚವಾಗುತ್ತಿದ್ದು, ಹೊಸ ತಂತ್ರಜ್ಞಾನದಿಂದ 50 ಪೈಸೆಗೆ ಇಳಿಯಲಿದೆ. ಮುರಗೋಡ ಗ್ರಾಮದಲ್ಲಿ ಈಗಾಗಲೇ 30 ಭಟ್ಟಿಗಳಿದ್ದು, ಸುಮಾರು 400 ಕಾರ್ಮಿಕರು ನೇರವಾಗಿ ಹಾಗೂ 1500 ಜನ ಪರೋಕ್ಷವಾಗಿ ಈ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ.

ಹೊಸ ಘಟಕ ಆರಂಭವಾದ ಬಳಿಕ ಬಳೆ ಜೊತೆಗೆ ಗಾಜಿನ ಅಲಂಕಾರಿಕ ವಸ್ತುಗಳ ತಯಾ ರಿಕೆಗೆ ಅವಕಾಶ ಸಿಗಲಿದ್ದು, ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಸಾಮಾನ್ಯವಾಗಿ ಬಳೆಗಳನ್ನು ತುಣಕುಗಳನ್ನು ಜೋಡಿಸಿ ತಯಾರಿಸಲಾಗುತ್ತದೆ.

ಆದರೆ, ಮುರಗೋಡ ಬಳೆಗಳು ಯಾವುದೇ ತುಣಕು ಹೊಂದಿರುವುದಿಲ್ಲ. ಅಖಂಡ ಬಳೆ ಗಳಾಗಿದ್ದು, ಮದುವೆ ಮತ್ತು ಧಾರ್ಮಿಕ ಸಮಾರಂಭಗಳಿಗೆ ಈ ಹಸಿರು ಬಳೆಗಳು ಇರಲೇ ಬೇಕು. ಮಹಾರಾಷ್ಟ್ರದ ಮುಂಬೈ, ಪುಣೆ, ಕರಾಡ, ಕೊಲ್ಹಾಪುರ, ಮೀರಜ, ಸಾಂಗ್ಲಿ, ಸಾತಾರಾ, ಬೀಡ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ರಾಣೆಬೆನ್ನೂರ, ಕೊಪ್ಪಳ, ಬಾಗಲಕೋಟೆ, ಕಲಬುರ್ಗಿ,ಬೀದರ್‌ಸೇರಿ ಮತ್ತಿತರ ಕಡೆ ಇಲ್ಲಿಂದ ಬಳೆಗಳು ಹೋಗುತ್ತವೆ.

ಪತ್ರಿಕೆ ಜೊತೆಗೆ ಮಾತನಾಡಿದ ಫೌಂಡೇಷನ್ ನಿರ್ದೇಶಕ ಮಂಜುನಾಥ ಕಾಜಗಾರ, ಇದು ನಮ್ಮ ತಲೆ ತಲಾಂತರದಿಂದ ಬಂದ ಕಾಯಕ. ಇದಕ್ಕೆ ಆಧುನಿಕ ತಂತ್ರಜ್ಞಾನ ಸ್ವರೂಪ ಕೊಡುವ ಉದ್ದೇಶದಿಂದ ನಾವು ೨೦೧೮ರಲ್ಲಿ ಫೀರೋಜಾಬಾದ್ ಗೆ ಹೋಗಿದ್ದೇವು.

ಅಲ್ಲಿ ಯಾವ ರೀತಿ ಗ್ಯಾಸ್ ಮೂಲಕ ಬಳೆ ತಯಾರಿಸಲಾಗುತ್ತದೆ ಎಂಬುದನ್ನು ತಿಳಿದು ಕೊಂಡೇವು. ಅಲ್ಲಿಂದ ಬಂದ ಮೇಲೆ ಒಂದು ಕ್ರಿಯಾ ಯೋಜನೆ ಸಿದ್ಧಪಡಿಸಿ ಶಾಸಕ ಮಹಾಂತೇಶ ಕೌಜಲಗಿ ಅವರ ಮೂಲಕ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಲ್ಲಿಸಿದ್ದೇವು.

ಅಲ್ಲಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಈಗ ಅದಕ್ಕೆ ಅನುಮೋದನೆ ಸಿಕ್ಕಿರುವುದು ಹರ್ಷ ತಂದಿದೆ. ನಮ್ಮ ಕಾಯಕವನ್ನು ಗುರುತಿಸಿದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು. ಒಟ್ಟಾರೆ, ನಶಿಸಿ ಹೋಗುತ್ತಿದ್ದ ಪರಂಪರೆಯ ಬಳೆ ತಯಾರಿಕಾ ಕಲೆ ಉಳಿಸುವ ಜೊತೆಗೆ, ಮುರಗೋಡ ಗ್ರಾಮ ಹಾಗೂ ಬೆಳಗಾವಿ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಹೊಸ ಶಕ್ತಿ ತುಂಬಲಿದೆ

ಹೊಸ ಘಟಕದಿಂದ ಅಲಂಕಾರಿಕ ವಸ್ತುಗಳ ತಯಾರಿಕೆ

ಮುರಗೋಡ ಗ್ರಾಮದಲ್ಲಿ ಈಗಾಗಲೇ 30 ಭಟ್ಟಿಗಳಿದ್ದು, ಸುಮಾರು 400 ಕಾರ್ಮಿಕರು ನೇರವಾಗಿ ಹಾಗೂ 1500 ಜನ ಪರೋಕ್ಷವಾಗಿ ಈ ಉದ್ಯಮದ ಮೇಲೆ ಅವಲಂಬಿತ ರಾಗಿದ್ದಾರೆ. ಹೊಸ ಘಟಕ ಆರಂಭವಾದ ಬಳಿಕ ಬಳೆ ಜೊತೆಗೆ ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಅವಕಾಶ ಸಿಗಲಿದ್ದು, ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ.