ಬೆಳಗಾವಿ: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ವ್ಯಕ್ತಿಗೆ ಪೋಸ್ಕೊ (POCSO) ಕಾಯ್ದೆಯಡಿ ನ್ಯಾಯಾಲಯ (POCSO Court Orders) ಮರಣ ದಂಡನೆ (Death Penalty) ವಿಧಿಸಿದೆ. 2019ರ ಅಕ್ಟೋಬರ್‌ನಲ್ಲಿ ಬೆಳಗಾವಿಯ (Belagavi) ರಾಯ್‌ಬಾಗ್ (Raibagh) ತಾಲೂಕಿನ ಭರತೇಶ್ ರಾವ್ ಸಾಬ್ ಮಿರ್ಜಿ (28) ಎಂಬಾತ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಬಾಲಕಿ ಮನೆಗೆ ಹಿಂತಿರುಗುತ್ತಿದ್ದಾಗ ಅಪರಾಧಿಯು ಆಕೆಯನ್ನು ಅಪಹರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಭರತೇಶ್ ರಾವ್ ಸಾಬ್ ಮಿರ್ಜಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದನು. ಬಳಿಕ ಆಕೆಯ ಶವವನ್ನು ಕಲ್ಲಿನಲ್ಲಿ ಕಟ್ಟಿ ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿ ಮನೆಗೆ ಹಿಂತಿರುಗದ ಕಾರಣ ಆಕೆಯ ತಂದೆ ಕುಡುಚಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆಯ ವೇಳೆ ಬಾಲಕಿಯನ್ನು ಪತ್ತೆಹಚ್ಚಲು ಸ್ನಿಫರ್ ನಾಯಿಗಳನ್ನು ಬಳಸಿಕೊಳ್ಳಲಾಗಿದೆ. ಅವು ಬಾವಿಯ ಕಡೆಗೆ ತೋರಿಸಿದವು. ಅನಂತರ ಬಾವಿಯಿಂದ ಶವವನ್ನು ಹೊರಕ್ಕೆ ತೆಗೆಯಲಾಗಿದೆ.
ತನಿಖೆಯ ಬಳಿಕ ಭರತೇಶ್ ರಾವ್ ಸಾಬ್ ಮಿರ್ಜಿ ಅನ್ನು ಬಂಧಿಸಲಾಗಿದ್ದು, ಸೆಪ್ಟೆಂಬರ್ 26ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ನ್ಯಾಯಾಲಯವು ಅವನನ್ನು ತಪ್ಪಿತಸ್ಥನೆಂದು ಘೋಷಿಸಿತು. ನ್ಯಾಯಾಲಯವು ಆರೋಪಿಗೆ 45,000 ರೂ. ದಂಡವನ್ನು ಸಹ ವಿಧಿಸಿದೆ.
ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಣೆ
ಮತ್ತೊಂದು ಘಟನೆಯಲ್ಲಿ ಕರ್ನಾಟಕ ಹೈಕೋರ್ಟ್ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಮಹಿಳೆಯರನ್ನು ಗೌರವಿಸುವ ಬಗ್ಗೆ ಮನುಸ್ಮೃತಿಯ ಶ್ಲೋಕ ಮತ್ತು ಮಹಿಳೆಯರ ಘನತೆಯನ್ನು ಕಾಪಾಡುವ ಅಗತ್ಯದ ಕುರಿತು ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.
ಬಿಹಾರದ ಬಂಕಾದ 19 ವರ್ಷದ ಪರಿಶಿಷ್ಟ ಪಂಗಡದ ಮಹಿಳೆಯ ಪೋಷಕರು ಕೇರಳದ ಏಲಕ್ಕಿ ಎಸ್ಟೇಟ್‌ನಲ್ಲಿ ಉದ್ಯೋಗದಲ್ಲಿದ್ದರು. ಏಪ್ರಿಲ್ 2ರಂದು ಅವರು ಕೇರಳದಿಂದ ಬೆಳಗ್ಗೆ 1.30ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಬಂದಿದ್ದರು.
ಯುವತಿಯು ತನ್ನ ಸೋದರಸಂಬಂಧಿಯೊಂದಿಗೆ ಊಟಕ್ಕೆ ಮಹದೇವಪುರಕ್ಕೆ ಹೋಗುತ್ತಿದ್ದಾಗ ನಿಲ್ದಾಣದ ಬಳಿ ಇಬ್ಬರು ಪುರುಷರು ಅವಳನ್ನು ಅಡ್ಡಗಟ್ಟಿ ಏಕಾಂತ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.
ಇದನ್ನೂ ಓದಿ: I Love Muhammad: ಮಹಾರಾಷ್ಟ್ರದಲ್ಲೂ ಭುಗಿಲೆದ್ದ 'ಐ ಲವ್ ಮುಹಮ್ಮದ್' ವಿವಾದ; ಭಾರೀ ಘರ್ಷಣೆ- 30 ಜನರ ಬಂಧನ
ಆರೋಪಿಗಳಿಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ನಿಬಂಧನೆಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.