ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Belagavi News: ಭೂಮಿಕಾ ಮರೆಪ್ಪಗೋಳ ಅವರಿಗೆ ಸರ್ಕಾರದ ಎಂಬಿಬಿಎಸ್ ಸೀಟ್

ಬೆಳಗಾವಿಯ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಇತಿಹಾಸದಲ್ಲಿ ಮಹತ್ವದ ಸಾಧನೆ ದಾಖಲಾಗಿದೆ. ನಮ್ಮ ಮೊದಲ ಬ್ಯಾಚಿನ ಪ್ರತಿಭಾವಂತ ವಿದ್ಯಾರ್ಥಿನಿ ಕು. ಭೂಮಿಕಾ ಮರೆಪ್ಪಗೋಳ ಅವರು ಸರ್ಕಾರದ ಎಂಬಿಬಿಎಸ್ ಸೀಟ್ ಪಡೆದು ಕಾಲೇಜಿನ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಎತ್ತಿದ್ದಾರೆ.

ಭೂಮಿಕಾ ಮರೆಪ್ಪಗೋಳ ಅವರಿಗೆ ಸರ್ಕಾರದ ಎಂಬಿಬಿಎಸ್ ಸೀಟ್

-

Ashok Nayak Ashok Nayak Sep 27, 2025 9:13 PM

ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಳಗಾವಿ – ನಮ್ಮ ಹೆಮ್ಮೆ!

ಬೆಳಗಾವಿಯ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಇತಿಹಾಸದಲ್ಲಿ ಮಹತ್ವದ ಸಾಧನೆ ದಾಖಲಾಗಿದೆ. ನಮ್ಮ ಮೊದಲ ಬ್ಯಾಚಿನ ಪ್ರತಿಭಾವಂತ ವಿದ್ಯಾರ್ಥಿನಿ ಕು. ಭೂಮಿಕಾ ಮರೆಪ್ಪಗೋಳ ಅವರು ಸರ್ಕಾರದ ಎಂಬಿಬಿಎಸ್ ಸೀಟ್ ಪಡೆದು ಕಾಲೇಜಿನ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಎತ್ತಿದ್ದಾರೆ.

ಈ ಸಾಧನೆ ಭೂಮಿಕಾಳ ಪರಿಶ್ರಮ, ನಿರಂತರ ಅಧ್ಯಯನ ಹಾಗೂ ಗುರಿ ಸಾಧನೆಗೆ ತೋರಿದ ದೃಢ ನಂಬಿಕೆಯ ಫಲವಾಗಿದೆ. ಜೊತೆಗೆ, ಅನುಭವಿಗಳಾದ ಅಧ್ಯಾಪಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಕೂಡ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: Belagavi News: ನಿಯತಿ ಸಹಕಾರಿ ಸೊಸೈಟಿ ಲಿಮಿಟೆಡ್ ನ 5ನೇ ವಾರ್ಷಿಕ ಸಾಮಾನ್ಯ ಸಭೆ

ಕಾಲೇಜು ಆಡಳಿತ ಮಂಡಳಿಯ ಪರವಾಗಿ, ಕು. ಭೂಮಿಕಾ ಮರೆಪ್ಪಗೋಳ ಹಾಗೂ ಅವರ ಕುಟುಂಬದವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಅನೇಕರ ಕನಸುಗಳನ್ನು ನನಸಾಗಿಸಲು ದಾರಿ ತೋರಲಿದೆ ಎಂಬ ವಿಶ್ವಾಸವಿದೆ.

ಇದು ಎಕ್ಸ್‌ಪರ್ಟ್ ಪಿಯು ಕಾಲೇಜಿನ ಅನೇಕ ಯಶಸ್ಸುಗಳ ಮೊದಲ ಅಧ್ಯಾಯ.