ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kapil Sharma: ನಟ ಕಪಿಲ್ ಶರ್ಮಾಗೆ ಬೆದರಿಕೆ: ಪಶ್ಚಿಮ ಬಂಗಾಳದ ವ್ಯಕ್ತಿಯ ಬಂಧನ

ಖ್ಯಾತ ಹಾಸ್ಯ ನಟ ಕಪಿಲ್ ಶರ್ಮಾಗೆ ಕೋಟಿ ರೂ.ಗೂ ಹೆಚ್ಚು ಸುಲಿಗೆ ಬೆದರಿಕೆಯೊಡ್ಡಿದ ಕೋಲ್ಕತಾದ ವ್ಯಕ್ತಿಯೊಬ್ಬನನ್ನು ಮುಂಬೈ ಅಪರಾಧ ವಿಭಾಗ ಬಂಧಿಸಿದೆ. ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗದ್ರಾ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿರುವ ಆರೋಪಿಯು ಇ-ಮೇಲ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಹಾಸ್ಯನಟ ಕಪಿಲ್ ಶರ್ಮಾಗೆ ಬೆದರಿಕೆ

-

ಕೋಲ್ಕತಾ: ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ (Comedian Kapil Sharma) ಅವರಿಂದ 1 ಕೋಟಿ ರೂ.ಗೂ ಹೆಚ್ಚು ಬೇಡಿಕೆ ಇಟ್ಟು ಬೆದರಿಕೆ (Threat) ಹಾಕಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಮುಂಬೈ ಅಪರಾಧ ವಿಭಾಗದ (Mumbai Crime Branch) ಪೊಲೀಸರು ಬಂಧಿಸಿದೆ. ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗದ್ರಾ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿರುವ ದಿಲೀಪ್ ಚೌಧರಿ ಎಂಬಾತ ಕಪಿಲ್ ಶರ್ಮಾಗೆ ಬೆದರಿಕೆ ಹಾಕಿದ್ದಾನೆ. ಈತ ಇ- ಮೇಲ್ ಮೂಲಕ ಸಂದೇಶ ಕಳುಹಿಸಿದ್ದು, 1 ಕೋಟಿ ರೂ. ಗೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಪ್ರಸಿದ್ಧ ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಇಮೇಲ್‌ ಕಳುಹಿಸಿರುವ ದಿಲೀಪ್ ಚೌಧರಿ ಎಂಬಾತ ತಾನು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗದ್ರಾ ಗ್ಯಾಂಗ್‌ನ ಸದಸ್ಯ ಎಂದು ಹೇಳಿದ್ದಾನೆ. ಕುಖ್ಯಾತ ಕ್ರಿಮಿನಲ್ ಜಾಲದ ಸಂಪರ್ಕವನ್ನು ಉಲ್ಲೇಖಿಸಿ ತನಗೆ 1 ಕೋಟಿ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.



ಈ ಬಗ್ಗೆ ದೂರು ಬಂದ ಬಳಿಕ ಪ್ರಕರಣ ದಾಖಲಿಸಿರುವ ಮುಂಬೈ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಪಶ್ಚಿಮ ಬಂಗಾಳದಲ್ಲಿರುವ ದಿಲೀಪ್ ಚೌಧರಿ ಸ್ಥಳವನ್ನು ಪತ್ತೆಹಚ್ಚಿದರು. ಬಳಿಕ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದರು.

ಇದನ್ನೂ ಓದಿ: Guest Teachers: ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿ; ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷೆ ರಿಹಾನಾ ಶೇಖ್ ಆಗ್ರಹ

ದಿಲೀಪ್ ಚೌಧರಿಗೆ ನಿಜವಾಗಿಯೂ ಗೋಲ್ಡಿ ಬ್ರಾರ್ ಅಥವಾ ರೋಹಿತ್ ಗದ್ರಾ ಜತೆ ಸಂಪರ್ಕವಿದೆಯೇ ಅಥವಾ ಅವರ ಹೆಸರನ್ನು ವಂಚನೆ ಮಾಡಲು ಬಳಸಿದ್ದಾನೆಯೇ ಎನ್ನುವ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ದಿಲೀಪ್ ಚೌಧರಿಯನ್ನು ವಿಚಾರಣೆಗಾಗಿ ಮುಂಬೈಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.