ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Athani News: ವಿಶಿಷ್ಠ ಸಂಪ್ರದಾಯಕ್ಕೆ ಸಾಕ್ಷಿಯಾದ ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ: 18 ವರ್ಷಗಳ ನಂತರ ಗುರು, ಶಿಷ್ಯರ ಸಮಾಗಮ

ಅಂದು ಶಾಲೆಗೆ ಬರುವಾಗ ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾಲಘಟ್ಟದಲ್ಲಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡು ತ್ತಿದ್ದೆವು. ಪಾಠ, ಪ್ರವಚನಗಳಿಗೆ ಮಾತ್ರ ಶಿಕ್ಷಕರು ಸೀಮಿತವಾಗದೆ ಮಕ್ಕಳಿಗೆ ಜೀವನದ ನಂದಾದೀಪವಾಗಿ ಬೆಳಗಬೇಕು. ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಕಲೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ

ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಭಾನುವಾರ ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು.

ಅಥಣಿ: ಪ್ರಕೃತಿ ಉಳಿಸುವ ಧ್ಯೇಯದೊಂದಿಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನೆಯುವ ವಿಶಿಷ್ಟ ಸಂಪ್ರದಾಯಕ್ಕೆ ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಸಾಕ್ಷಿಯಾಗಿದೆ. ಶಿಕ್ಷಕರ ಸವಿನೆನಪಿಗಾಗಿ 200 ಸಸಿ ನೆಟ್ಟು ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿರುವ 2008 ರ ಬ್ಯಾಚಿನ ಸ್ನೇಹ ಬಳಗ ನಮ್ಮ ಗ್ರಾಮದ ಶಕ್ತಿ ಎಂದು ನದಿ ಇಂಗಳಗಾಂವಿಯ ಗುರುಲಿಂಗದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2008ರ ಬ್ಯಾಚಿನ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ವಿವಿಧ ರಂಗಗಳಲ್ಲಿ ತಮ್ಮ ಕೌಶಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ಬದುಕು ಕಟ್ಟಿಕೊಳ್ಳು ವಲ್ಲಿ ಅಂದು ಜ್ಞಾನಾರ್ಜನೆ ಮಾಡಿದ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Bengaluru to Belagavi Train: ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಿಹಿ ಸುದ್ದಿ; ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲುಗಳ ಸಂಚಾರ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಜಿ.ಆರ್ ಆಸಂಗಿ, ಅಂದು ಶಾಲೆಗೆ ಬರುವಾಗ ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾಲಘಟ್ಟದಲ್ಲಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡು ತ್ತಿದ್ದೆವು. ಪಾಠ, ಪ್ರವಚನಗಳಿಗೆ ಮಾತ್ರ ಶಿಕ್ಷಕರು ಸೀಮಿತವಾಗದೆ ಮಕ್ಕಳಿಗೆ ಜೀವನದ ನಂದಾದೀಪವಾಗಿ ಬೆಳಗಬೇಕು. ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಕಲೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕ ಚಂದ್ರಶೇಖರ ಲಮಾಣಿ, ಕೋವಿಡ್ ಹೆಮ್ಮಾರಿ ಬದುಕಿಗೆ ಪರಿಸರ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯದ ಪಾಠ ಮಾಡಿದ್ದು ಅದರಂತೆ ಕಾರ್ಯಕ್ರಮ ಪೂರ್ವದಲ್ಲಿ ಸಸಿ ನೆಟ್ಟಿದ್ದು ಸಂತಸ ತಂದಿದೆ. ಶೈಕ್ಷಣಿಕ ಮೌಲ್ಯಗಳ ಜೊತೆಗೆ ಬದುಕಿನ ಪಾಠ ಮಾಡಿದ್ದರ ಪರಿಣಾಮ ಇಂದು ನಮ್ಮ ಶಿಷ್ಯ ಬಳಗದಿಂದ ಇಷ್ಟೊಂದು ಪ್ರೀತಿ ಸಿಗಲು ಕಾರಣವಾಗಿದೆ. ನಾವು ಕಲಿಸಿದ ಮಕ್ಕಳು ಯಾವುದೇ ಹುದ್ದೆಯಲ್ಲಿ ಇರಲಿ ಅವರು ಸಂಸ್ಕಾರ ಯುತವಾಗಿ ಬದುಕು ಸಾಗಿಸಲಿ ಎಂಬುವುದು ನಮ್ಮ ಆಶಯ ಎಂದರು.

Athani 1

ಶಿಕ್ಷಕ ಚಂದ್ರಶೇಖರ ಗಸ್ತಿ ಅವರು ಮಾತನಾಡಿ. ಈ ಮಣ್ಣಿನ ನೆಲದಲ್ಲಿ ಸಂಸ್ಕಾರ, ಸಂಸ್ಕೃತಿ ಇದೆ. ಅದರಂತೆ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಪ್ರೀತಿಯನ್ನು ವರ್ಣನೆ ಮಾಡಲು ಸಾಧ್ಯ ವಿಲ್ಲ. ಅಥಣಿ ಶಿವಯೋಗಿಗಳು ಜನಿಸಿದ ಪುಣ್ಯ ಭೂಮಿಯಲ್ಲಿ 17 ವರ್ಷ ವರ್ಷ ಸೇವೆ ಸಲ್ಲಿಸಿದ್ದು ವೃತ್ತಿ ಬದುಕಿನ ಅಮೂಲ್ಯ ಕ್ಷಣಗಳಲ್ಲಿ ಒಂದು ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ‌ ಸಂಸ್ಥೆ ಉಪನ್ಯಾಸಕರಾದ ಸಲೀಂ ನಧಾಪ್ ಅವರು ಮಾತನಾಡಿ ಕೇವಲ 23 ವಯಸ್ಸಿನಲ್ಲಿ ನದಿ ಇಂಗಳಗಾಂವ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭವಾಯಿತು. ಈ ವೇಳೆ ಮಕ್ಕಳಿಗೆ ಪಾಠ ಮಾಡುವ ಸಂದರ್ಭದಲ್ಲಿ ಹೊಡೆದಾಗ ಮನೆಗೆ ಹೋಗಿ ಕಣ್ಣೀರು ಹಾಕುತ್ತಿದ್ದೇ. ಇಲ್ಲಿನ ಮಕ್ಕಳು ಹಾಗೂ ಪಾಲಕರಲ್ಲಿ ಇರುವ ಭಕ್ತಿ ಹಾಗೂ ಸಂಸ್ಕೃತಿ ಬೇರೆ ಎಲ್ಲಿಯೂ ಬರಲು ಸಾಧ್ಯವಿಲ್ಲ ಎಂದರು. ಈ ವೇಳೆ ದ ಡವ್ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

Athani 2

ಈ ಸಂದರ್ಭದಲ್ಲಿ ಶಿಕ್ಷಕಿ ಗೀತಾ ಪಾಟೀಲ್, ಶಿಕ್ಷಕರರಾದ ಅಣ್ಣಾಸಾಹೇಬ್ ಕಾಂಬಳೆ, ಸಂತರಾಮ ಹೆಬ್ಬಾಳೆ, ನರಸಿಂಹ ಉಗಾರೆ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ನಿವೃತ ಸಿಪಾಯಿ ಭರತೇಶ ಸನದಿ ಹಾಗೂ ಶಿಕ್ಷಕರ ಕುಟುಂಬದವರು, 2008 ರ ಬ್ಯಾಚಿನ ಸ್ನೇಹ ಬಳಗ, ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ‌

ಪ್ರಕೃತಿ ಪ್ರೀತಿಸುವವರೇ ನಿಜವಾದ ಸಂಸ್ಕಾರವಂತರು : ಗೀತಾ ಪಾಟೀಲ್

ಪ್ರಕೃತಿ ಪ್ರೀತಿಸುವ 2008ರ ಬ್ಯಾಚಿನ ವಿದ್ಯಾರ್ಥಿಗಳು ಸಂಸ್ಕಾರವಂತರು ಎಂಬುವುದರಲ್ಲಿ ಎರಡು ಮಾತಿಲ್ಲ. ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದ ಸವಿನೆನಪಿನಲ್ಲಿ 200 ಸಸಿ ನೆಟ್ಟಿರುವ ಕಾರ್ಯ ಶ್ಲಾಘನೀಯವಾದದ್ದು. ದುಶ್ಚಟಗಳಿಂದ ದೂರ ಇದ್ದು ಆರೋಗ್ಯಕರ ಬದುಕು ಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕೆಂದು ಶಿಕ್ಷಕಿ ಗೀತಾ ಪಾಟೀಲ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅಗಲಿದ ಜೀವಗಳಿಗೆ ಸಂತಾಪ: ನದಿ, ಇಂಗಳಗಾಂವಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿದ್ದ ನೀಲಕಂಠ ಮನವಾಡೆ ಅವರು 2009 ರಲ್ಲಿ ಚಿಕ್ಕ ವಯಸ್ಸಿನಲ್ಲಿ ನಿಧನ ರಾಗಿದ್ದರು. ಜೊತೆಗೆ 2008 ರ ಎಸ್ ಎಸ್ ಎಲ್ ಸಿ ಬ್ಯಾಚಿನ ವಿದ್ಯಾರ್ಥಿನಿ ಯಲ್ಲವ್ವ ಶಾಬಣ್ಣವರ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಮೃತರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.