Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತ; ಅಪಾಯದಿಂದ ಪಾರು
Laxman Savadi: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಗೋಕಾಕ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಾವಿಯ ದರೂರ್ ಬಳಿ ಅವರ ಕಾರಿಗ ಗೂಡ್ಸ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಳಗಾವಿ: ಅಥಣಿ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ (Laxman Savadi) ಬೆಳಗಾವಿಯ ದರೂರ್ ಬಳಿ ಸೋಮವಾರ ಸಂಜೆ ನಡೆದಿದೆ. ಗೂಡ್ಸ್ ವಾಹನಕ್ಕೆ ಕಾರು ಡಿಕ್ಕಿಯಾಗಿದ್ದು (Car accident), ಈ ಅಪಘಾತದಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ತಿಳಿದುಬಂದಿದೆ. ಲಕ್ಷ್ಮಣ್ ಸವದಿ ಅವರು ಗೋಕಾಕ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಾವಿಯ ದರೂರ್ ಬಳಿ ಅವರ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಅವರ ಕಾರು ಜಖಂಗೊಂಡಿದ್ದು, ಅಲ್ಲಿಂದ ಬೇರೆ ವಾಹನದಲ್ಲಿ ಮಾಜಿ ಡಿಸಿಎಂ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಜಮುದ್ದೀನ್ ಕೊಲೆ ಪ್ರಕರಣ; 24 ಗಂಟೆಯಲ್ಲೇ ಆರು ಆರೋಪಿಗಳ ಹೆಡೆಮುರಿಕಟ್ಟಿದ ಖಾಕಿ
ಕಲಬುರಗಿ: ಕಲಬುರಗಿಯ ಮಿಲ್ಲತ್ ನಗರದ ನಜಮುದ್ದೀನ್ ಅಬ್ದುಲ್ ಸತ್ತಾರ್ (44) ಕೊಲೆ ಪ್ರಕರಣವನ್ನು (Kalaburagi Murder Case) ಫರತಾಬಾದ್ ಠಾಣೆಯ ಪೋಲಿಸರು 24 ಗಂಟೆಗಳಲ್ಲಿ ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ ನಜಮುದ್ದೀನ್‌ನನ್ನು ನಗರದ ಹೊರವಲಯದ ಕೂಡಿ ದರ್ಗಾದ ಸಮೀಪ ಕೊಲೆ ಮಾಡಲಾಗಿತ್ತು. ಹತ್ಯೆಯಾದ ನಜಮುದ್ದೀನ್, ಕೆಲವು ತಿಂಗಳ ಹಿಂದಷ್ಟೇ ರೌಡಿಶೀಟರ್ ಆಗಿದ್ದ ಖಲೀಲ್ ಎಂಬಾತನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ 4ನೇ ಆರೋಪಿಯಾಗಿ ಜೈಲು ಸೇರಿದ್ದ. ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನಜಮುದ್ದೀನ್ ಹತ್ಯೆಯಾಗಿದ್ದ. ಈ ಕುರಿತು ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಲೀಲ್ ತಮ್ಮಂದಿರರಾದ ಸದ್ದಾಂ, ಶಕೀಲ್ ಹಾಗೂ ಖಲೀಲ್‌ನ ಸಹಚರರಾದ ಗಜಾನನ, ಸಮೀರ್, ಅಖೀಲ್, ರಸೀದ್, ಆರ್ಯ, ಉಮರ್ ಹಾಗೂ ಕೊಲೆಯಲ್ಲಿ ಭಾಗಿಯಾದ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಹೋದರ ನಿಜಾಮುದ್ದೀನ್, ತಂದೆ ಅಬ್ದುಲ್ ಸತ್ತಾರ್ ಸೊಲ್ಲಾಪೂರಿ ನೀಡಿದ ದೂರಿನ ಮೇರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ದೂರಿನನ್ವಯ ಸಬ್ ಅರ್ಬನ್ ಉಪ ಪೊಲೀಸ್ ಆಯುಕ್ತ ಡಿ.ಜಿ. ರಾಜಣ್ಣ ಅವರ ನೇತೃತ್ವದಲ್ಲಿ ಫರತಾಬಾದ್ ಪೋಲಿಸ್ ಠಾಣೆಯ ಪಿಐ ಮಲ್ಲಿಕಾರ್ಜುನ್ ಇಕ್ಕಳಕಿ, ಪಿಎಸ್‌ಐ ಸುರೇಶ್ ಮಲಘಾಣ್, ಎಎಸ್‌ಐ ಅಶೋಕ್, ಸಿಬ್ಬಂದಿಗಳಾದ ಗಡ್ಡೆಪ್ಪ ಕೊರೆ, ಸಾಜೀದ್, ಲಕ್ಷ್ಮೀಕಾಂತ್, ಆನಂದ್, ಮೆಹಬೂಬ್, ಲಿಂಗರಾಜ್, ಶಾಂತಮ್ಮ, ಮಂಜುನಾಥ್ ಅವರು ಕಾರ್ಯಾಚರಣೆ ಕೈಗೊಂಡು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Tumkur News: ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್ ಕುಟುಂಬಕ್ಕೆ ಮತ್ತೊಂದು ಆಘಾತ; ಮೊಮ್ಮಗನ ಅಗಲಿಕೆ ನೋವಲ್ಲಿ ಅಜ್ಜಿಯೂ ಸಾವು!