ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramdurg Crime News: ಜೇನುಹುಳು ದಾಳಿಗೆ ವ್ಯಕ್ತಿ ಬಲಿ

ಮರ ಕಡಿಯುವ ಸಂದರ್ಭದಲ್ಲಿ ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಬಲಿಯಾದ ಘಟನೆ ತಾಲೂಕಿನ ಚೆನ್ನಾ ಪೂರ ಗ್ರಾಮದ ತೋಟದಲ್ಲಿ ನಡೆದಿದೆ. ಘಟನೆಯಲ್ಲಿ ಬಾಗಲಕೋಟ ಜಿಲ್ಲೆ ಲೋಕಾಪೂರ ಗ್ರಾಮದ ನಿವಾಸಿ ಶರೀಫ ಮೈಬುಸಾಬ ಅತ್ತಾರ (47) ಮೃತ ದುರ್ದೈವಿಯಾಗಿದ್ದು, ಮರ ಕಡಿಯುವ ಸಂದರ್ಭ ದಲ್ಲಿ ಹೆಜ್ಜೇನು ಗೂಡು ಕಾಣಿಸಿದೆ.

Profile Ashok Nayak Mar 20, 2025 10:20 PM

ರಾಮದುರ್ಗ: ಮರ ಕಡಿಯುವ ಸಂದರ್ಭದಲ್ಲಿ ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಬಲಿಯಾದ ಘಟನೆ ತಾಲೂಕಿನ ಚೆನ್ನಾಪೂರ ಗ್ರಾಮದ ತೋಟದಲ್ಲಿ ನಡೆದಿದೆ. ಘಟನೆಯಲ್ಲಿ ಬಾಗಲಕೋಟ ಜಿಲ್ಲೆ ಲೋಕಾಪೂರ ಗ್ರಾಮದ ನಿವಾಸಿ ಶರೀಫ ಮೈಬುಸಾಬ ಅತ್ತಾರ (47) ಮೃತ ದುರ್ದೈವಿಯಾಗಿದ್ದು, ಮರ ಕಡಿಯುವ ಸಂದರ್ಭದಲ್ಲಿ ಹೆಜ್ಜೇನು ಗೂಡು ಕಾಣಿಸಿದೆ. ಅದನ್ನು ಬಿಡಿಸಲು ಮುಂದಾದ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ಹೆಜ್ಜೇನು ಹುಳುಗಳು ಹುತ್ತದಿಂದ ಹೊರಬಂದು ವ್ಯಕ್ತಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿವೆ. ಹುಳುಗಳ ಕಾಟದಿಂದ ರಕ್ಷಿಸಿ ಕೊಳ್ಳಲು ಪರದಾಡುವ ಸಮಯ ದಲ್ಲಿ ಮರದಿಂದ ಕೆಳಗೆ ಜಗಿದು ಹತ್ತಿರದಲ್ಲಿದ್ದ ತೋಟದ ಭಾವಿಗೆ ಹಾರಿ ಅಸು ನೀಗಿದ್ದಾನೆ.

ಇದನ್ನೂ ಓದಿ: Belagavi Accident: ಕಾಂಕ್ರೀಟ್ ಮಿಕ್ಸರ್ ವಾಹನ ಉರುಳಿ ಕಾರು ಅಪ್ಪಚ್ಚಿ; ಪವಾಡಸದೃಶವಾಗಿ ಇಬ್ಬರು ಪಾರು

ಮೃತ ವ್ಯಕ್ತಿಯ ತಂಡದಲ್ಲಿರುವ ಇತರರು ಜೇನು ಹುಳುಗಳ ರಕ್ಷಣೆಗೆ ಓಡಿ ಹೋಗಿದ್ದಾರೆ. ನಂತರ ವ್ಯಕ್ತಿಯ ರಕ್ಷಣೆಗೆ ಮುಂದಾಗುಷ್ಟರಲ್ಲಿ ವ್ಯಕ್ತಿ ಈಜು ಬಾರದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ರಾಮದುರ್ಗ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹ ಹೊರತೆಗೆದಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.