ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramadurga: ರಾಮದುರ್ಗಃ ವಿಜೃಂಬಣೆಯಿಂದ ಜರುಗಿದ ಬಸವೇಶ್ವರ ಸಂಸ್ಥೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಮೆರವಣಿಗೆ

Ramadurga: ರಾಮದುರ್ಗಃ ವಿಜೃಂಬಣೆಯಿಂದ ಜರುಗಿದ ಬಸವೇಶ್ವರ ಸಂಸ್ಥೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಮೆರವಣಿಗೆ

ರಾಮದುರ್ಗ: ಬಾಗಲಕೋಟ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಬಿವಿವಿಎಸ್ ಸಂಭ್ರಮ ರಾಮದುರ್ಗ ಹಬ್ಬ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ಶಾಲಾ ಕಾಲೇಜು ವಿದ್ಯಾರ್ಥಿಗಳ ಭವ್ಯ ಸಾಂಸ್ಕೃತಿಕ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ವಿಜೃಂಬಣೆಯಿಂದ ಜರುಗಿತು.
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಶ್ರೀಬೀಳೂರು ಗುರುಬಸವ ಸ್ವಾಮೀಜಿ ಅವರ ಭಾವ ಚಿತ್ರದ ಮೆರವಣಿಗೆ ವಿದ್ಯಾರ್ಥಿಗಳ ಸುಮಾರು ಕಿಲೋ ಮೀಟರ್‌ಗೂ ಅಧಿಕವಾಗಿ ಸರತಿ ಸಾಂಸ್ಕೃತಿಕ ವೈಭಗಳ ಸಾಲು ಪ್ರೇಕ್ಷಕರ ಗಮನ ಸೆಳೆಯಿತು.
ಪಟ್ಟಣದ ಬಿವಿವಿಎಸ್ ಮೈದಾನದಿಂದ ಆರಂಭವಾಗಿ ಮೆರವಣಿಗೆ ಹುತಾತ್ಮ ವೃತ್ತ. ಜುನಿಪೇಟೆ, ನವಿಪೇಟೆ, ಮಾರ್ಗ ವಾಗಿ ಸಂಚರಿಸಿ ಸಮಾರಂಭದ ಮುಖ್ಯ ವೇದಿಕೆಗೆ ಆಗಮಿಸಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಕುಂಭ ಮೆರವಣಿಗೆ, ಡೊಳ್ಳು ಕುಣಿತ, ಕರಡಿ ಮಜಲು, ಶ್ರೀಶಾಖಾಂಬರಿ ಡೊಳ್ಳು ಮತ್ತು ಬೊಂಬೆ ಕುಣಿತ ತಂಡ, ಝಾಂಜ್ ಮೇಳ, ವಿದ್ಯಾರ್ಥಿಗಳ ಲಂಬಾಣಿ ವೇಶಭೂಷಣ, ಹಾಗೂ ನೇಕಾರಿಕೆ ವೃತ್ತಿ ಕೌಶಲ್ಯ ಬಿಂಬಿಸುವ ರೂಪಕ ವಾಹಣ ಸೇರಿದಂತೆ ಪುರಾತನ ಗತ ವೈಭವ ಸಾರುವ ಸಾಧಕರ ವೇಶಭೂಷಣ ರಾಮದುರ್ಗ ಹಬ್ಬದ ವೈಶಿಷ್ಠ್ಯತೆಯನ್ನು ಸಾರಿತು.