Ramadurga News: 2025ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಅಭ್ಯರ್ಥಿಗಳು ಚುನಾವಣೆ ಹಾಗೂ ಅವಿರೋಧ ಆಯ್ಕೆ
ಸಾಮಾನ್ಯ ವರ್ಗದಲ್ಲಿ 9 ಆಯ್ಕೆ ಯಾಗಬೇಕಿದ್ದು. ಇದರಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ಬಸಪ್ಪ ಪುಂ. ಕಠಾರಿ 495, ವಿಶ್ವನಾಥ ಮಾ. ದಾಟ್ನಾಳ 400, ಶಿವಾನಂದ ಈ. ಮುದಗಲ್ಲ 398, ನೂರಂದ ಸೋ. ಕೊಂಗಿ 396, ಶಿವಾನಂದ ತು. ಕೀಲಿಪುಟ್ಟಿ 379, ತುಕಾರಾಮ ಗಂ. ಗೊಣಬಾಳ 369, ದುರ್ವಾಸಪ್ಪ ಸಂ. ನಡಮನಿ 369, ಮಂಜುನಾಥ ತು. ಹಳ್ಳಿಕೇರಿ 348, ಪಿತಾಂಬ್ರಪ್ಪ ತಿ. ಹಾಲೋಳ್ಳಿ 308 ಮತಗಳನ್ನು ಪಡೆದರು

ಸುರೇಬಾನ: ಸ್ಥಳೀಯ ದಿ.ರಾಮದುರ್ಗ ತಾಲೂಕಾ ರೂರಲ್ ಇಂಡಸ್ಟ್ರೀಯಲ್ ಕೋ-ಆಫ್ ಸೊಸೈಟಿ ಲಿ, ಮನಿಹಾಳ-ಸುರೇಬಾನ ಇದರ ಆಡಳಿತ ಮಂಡಳಿ ಚುನಾವಣೆ ನಡೆಯಿತು. ಅಭ್ಯರ್ಥಿಗಳು ಜಯಬೇರಿ ಆದಂತೆ ಗುಲಾಲು,ಪಟಾಕಿ, ಸಿಹಿ ಹಂಚಿ ಸಂಭ್ರಮಿಸಿದರು.

ಸುರೇಬಾನ: ಸ್ಥಳೀಯ ದಿ.ರಾಮದುರ್ಗ ತಾಲೂಕಾ ರೂರಲ್ ಇಂಡಸ್ಟ್ರೀಯಲ್ ಕೋ-ಆಫ್ ಸೊಸೈಟಿ ಲಿ, ಮನಿಹಾಳ-ಸುರೇಬಾನ ಇದರ ಆಡಳಿತ ಮಂಡಳಿ ಚುನಾವಣೆ ಭಾನುವಾರ 25 ರಂದು ನಡೆಯಿತು.
2025ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಅಭ್ಯರ್ಥಿಗಳು ಚುನಾವಣೆ ಹಾಗೂ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ 16 ಜನ ಕಣದಲ್ಲಿದ್ದರು, ಅ ವರ್ಗಕ್ಕೆ 2 ಜನ, ಮಹಿಳಾ ವರ್ಗಕ್ಕೆ 3 ಜನ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ಸಾಮಾನ್ಯ ವರ್ಗದಲ್ಲಿ 9 ಆಯ್ಕೆ ಯಾಗಬೇಕಿದ್ದು. ಇದರಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ಬಸಪ್ಪ ಪುಂ. ಕಠಾರಿ 495, ವಿಶ್ವನಾಥ ಮಾ. ದಾಟ್ನಾಳ 400, ಶಿವಾನಂದ ಈ. ಮುದಗಲ್ಲ 398, ನೂರಂದ ಸೋ. ಕೊಂಗಿ 396, ಶಿವಾನಂದ ತು. ಕೀಲಿಪುಟ್ಟಿ 379, ತುಕಾರಾಮ ಗಂ. ಗೊಣಬಾಳ 369, ದುರ್ವಾಸಪ್ಪ ಸಂ. ನಡಮನಿ 369, ಮಂಜುನಾಥ ತು. ಹಳ್ಳಿಕೇರಿ 348, ಪಿತಾಂಬ್ರಪ್ಪ ತಿ. ಹಾಲೋಳ್ಳಿ 308 ಮತಗಳನ್ನು ಪಡೆದರು.
ಹಿಂದುಳಿದ ಅ ವರ್ಗಕ್ಕೆ ಶ್ರೀಧರ ಶಂ. ಪಾತಾಳಿ 416 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಇವರ ಪ್ರತಿ ಸ್ಪರ್ಧಿ ವಿಠ್ಠಲ ಸಂ. ಮುರುಡಿ 277 ಮತ ಪಡೆದು ಪರಾಭವಗೊಂಡರು.
ಮಹಿಳಾ ವರ್ಗಕ್ಕೆ ಮೂರು ಜನ ಸ್ಪರ್ಧೆಯಲ್ಲಿದ್ದರು ಅದರಲ್ಲಿ ಇಬ್ಬರು ಆಯ್ಕೆಯಾಗಬೇಕಿದ್ದು ಅತೀ ಹೆಚ್ಚು ಮತಗಳನ್ನು ಪಡೆದ ತಿಪ್ಪವ್ವ ಚಿ. ಸಂದರಕಿ 489, ಲಕ್ಷ್ಮವ್ವಾ ನಾ. ಗಂಜಿ 460 ಮತಗಳನ್ನು ಪಡೆದು ಆಯ್ಕೆಯಾದರು.ಇವರ ಪ್ರತಿ ಸ್ಪರ್ಧಿ ಕಾಶವ್ವ ಹ. ಕಿಂಡ್ರಿ 289 ಮತಗಳನ್ನು ಪಡೆದು ಪರಾಭವಗೊಂಡರು.
ಅವಿರೋಧವಾಗಿ ಆಯ್ಕೆಯಾದ ಹಿಂದುಳಿದ ಬ ವರ್ಗದ ಬಸವರಾಜ ಬ. ಹಿರೇರಡ್ಡಿ ಹಾಗೂ ಪರಿ ಶಿಷ್ಟ ಜಾತಿಗೆ ಬಸವರಾಜ ರಾ. ಕೊರವರ, ಪರಿಶಿಷ್ಟ ಪಂಗಡದ ಅಭ್ಯರ್ಥಿ ಮಾರುತಿ ತಿ. ಪ್ಯಾಟಿ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.