ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLC Marathirao Mule: ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ವಧು–ವರ ಮೆಳವಿಗೆ ಭರ್ಜರಿ ಪ್ರತಿಕ್ರಿಯೆ

ಪ್ರತಿಯೊಬ್ಬರ ಜೀವನದಲ್ಲೂ ವಧು–ವರ ಆಯ್ಕೆ ಅತ್ಯಂತ ಮಹತ್ವದ ಹಂತವಾಗಿರುತ್ತದೆ. ಕಾಲಾನು ಸಾರ ಮಾನವನ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಉನ್ನತ ಶಿಕ್ಷಣದ ಮೂಲಕ ಯುವಕ–ಯುವತಿಯರು ತಮ್ಮ ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಕನಸುಗಳನ್ನು ಕಟ್ಟಿ ಕೊಂಡಿದ್ದಾರೆ.

ಬೆಳಗಾವಿ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜೀವನಶೈಲಿಯಲ್ಲಿಯೂ ಮೂಲಭೂತ ಬದಲಾವಣೆಗಳು ಕಂಡುಬರುತ್ತಿವೆ. ಶಿಕ್ಷಣದ ಜೊತೆಗೆ ಯುವಕ–ಯುವತಿಯರ ಭವಿಷ್ಯದ ಜೀವನದ ಕುರಿತ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ಸಮಯಕ್ಕೆ ಸರಿಯಾಗಿ ವಿವಾಹಗಳನ್ನು ಜೋಡಿಸುವುದು ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭ ಗಳಲ್ಲಿ ವಧು–ವರ ಮೆಳವಿಗಳು ಮತ್ತು ಸಾಮೂಹಿಕ ವಿವಾಹ ಸಮಾರಂಭಗಳು ಪವಿತ್ರ ಹಾಗೂ ಪುಣ್ಯಕರ ಕಾರ್ಯಗಳಾಗಿವೆ ಎಂದು ಕರ್ಣಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಾಸಕ ಮಾರುತ್ತಿರಾವ್ ಮುಳೆ (Legislative Council member MLA Marathirao Mule) ಅಭಿಪ್ರಾಯಪಟ್ಟರು.

In saree

ಭಾನುವಾರ ಧಾರವಾಡ ರಸ್ತೆಯ ರೂಪಾಲಿ ಕನ್ವೆನ್ಷನ್ ಹಾಲ್‌ನಲ್ಲಿ ರಾಜಮಾತಾ ಜಿಜಾವು ಸಾಂಸ್ಕೃ ತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಮರಾಠಾ ಸಮಾಜದ ವಧು–ವರ ಮೆಳವಿಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಮಾರುತ್ತಿರಾವ್ ಮುಳೆ ಅವರಿಂದ ರಾಜಮಾತಾ ಜಿಜಾವು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ವಧು–ವರ ಮೆಳವಿಯ ಮುಖ್ಯ ಆಯೋಜಕಿ ಡಾ. ಸೋನಾಲಿ ಸರ್ನೋಬತ್ ಅವರು ಶಾಸಕ ಮಾರುತ್ತಿರಾವ್ ಮುಳೆ ಅವರನ್ನು ಸನ್ಮಾನಿಸಿದರು.

ಮುಂದುವರಿದು ಮಾತನಾಡಿದ ಶಾಸಕ ಮುಳೆ ಅವರು, ಪ್ರತಿಯೊಬ್ಬರ ಜೀವನದಲ್ಲೂ ವಧು–ವರ ಆಯ್ಕೆ ಅತ್ಯಂತ ಮಹತ್ವದ ಹಂತವಾಗಿರುತ್ತದೆ. ಕಾಲಾನುಸಾರ ಮಾನವನ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಉನ್ನತ ಶಿಕ್ಷಣದ ಮೂಲಕ ಯುವಕ–ಯುವತಿಯರು ತಮ್ಮ ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಅವರ ನಿರೀಕ್ಷೆಗಳು ಹೆಚ್ಚಾಗಿದ್ದು, ವಿವಾಹ ಜೋಡಿಸುವ ಸಂದರ್ಭದಲ್ಲಿ ಪಾಲಕರಿಗೆ ಹಲವಾರು ಅಡಚಣೆಗಳು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Belagavi Assembly Session: ಇಂದು ರೈತರ ಜೊತೆಗೆ ಬೆಳಗಾವಿ ಸುವರ್ಣ ಸೌಧಕ್ಕೆ ಬಿಜೆಪಿ ಮುತ್ತಿಗೆ

ಮಕ್ಕಳ ವಿವಾಹವನ್ನು ಸಮಯಕ್ಕೆ ಸರಿಯಾಗಿ ನೆರವೇರಿಸುವುದು ಇಂದು ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ರಾಜ್ಯಾದ್ಯಂತ ಮರಾಠಾ ಸಮಾಜ ಎದುರಿಸುತ್ತಿರುವ ಈ ಪರಿಸ್ಥಿತಿಯ ಬಗ್ಗೆ ನಮಗೆ ಸ್ಪಷ್ಟ ಅರಿವು ಇದೆ. ಇಂತಹ ಸಂದರ್ಭಗಳಲ್ಲಿ ವಧು–ವರ ಮೆಳವಿಗಳು ಮತ್ತು ಸಾಮೂಹಿಕ ವಿವಾಹ ಸಮಾರಂಭಗಳು ಸಮಾಜಕ್ಕೆ ಮಾರ್ಗದರ್ಶಕವಾಗುವ ಪವಿತ್ರ ಕಾರ್ಯ ಗಳಾಗಿವೆ. ಈ ರೀತಿಯ ಸಾಮಾಜಿಕ ಉಪಕ್ರಮಗಳಿಂದ ಸಮಾಜ ಒಗ್ಗೂಡುತ್ತಿದ್ದು, ಸಮಾಜದಲ್ಲಿ ಜಾಗೃತಿ, ಚಿಂತನೆ ಮತ್ತು ಮಂಥನ ನಡೆಯುವುದು ಅತ್ಯಂತ ಅಗತ್ಯವಾಗಿದೆ. ಈ ದಿಸೆಯಲ್ಲಿ ಡಾ. ಸೋನಾಲಿ ಸರ್ನೋಬತ್ ಅವರು ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಭಾಷಣದಲ್ಲಿ ಡಾ. ಸೋನಾಲಿ ಸರ್ನೋಬತ್ ಅವರು ಮಾತನಾಡಿ, ವಧು–ವರ ಮೆಳವಿ ಸಮಾಜಹಿತದ ಮಹತ್ವದ ಉಪಕ್ರಮವಾಗಿದೆ. ಈ ವೇದಿಕೆಯ ಮೂಲಕ ಚದುರಿಕೊಂಡಿರುವ ಸಮಾಜವನ್ನು ಒಂದೇ ಮಂಟಪದಡಿ ತರುವ ಕಾರ್ಯ ನಡೆಯುತ್ತಿದೆ. ವಿವಾಹ ಸಂಬಂಧವಾಗಿ ಯುವಕ–ಯುವತಿಯರ ನಿರೀಕ್ಷೆಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಅದರ ಪರಿಣಾಮವಾಗಿ ಪಾಲಕರ ಮತ್ತು ಮಕ್ಕಳ ನಡುವೆ ಉಂಟಾಗುತ್ತಿರುವ ಮನೋಭಾರವು ಚಿಂತಾಜನಕವಾಗಿದೆ ಎಂದು ಹೇಳಿದರು. ಈ ವಿಷಯದ ಗಂಭೀರತೆಯನ್ನು ಮನಗಂಡು ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ವಧು–ವರ ಮೆಳವಿಗಳನ್ನು ನಿರಂತರವಾಗಿ ಆಯೋಜಿಸ ಲಾಗುತ್ತಿದೆ ಎಂದರು.

ನಿಯತಿ ಫೌಂಡೇಶನ್ ಮೂಲಕ ಇದಕ್ಕೂ ಮುನ್ನ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಅನೇಕ ಸಾಮಾಜಿಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಾಲಿನಲ್ಲಿ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸುವ ಉದ್ದೇಶವಿದ್ದು, ಈ ಕಾರ್ಯಗಳಿಗೆ ಕರ್ಣಾಟಕ ರಾಜ್ಯ ಕ್ಷತ್ರಿಯ ಮರಾಠಾ ಪರಿಷತ್ತಿನ ಬೆಂಬಲವೂ ದೊರಕುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇಂದಿನ ವಧು–ವರ ಮೆಳವಿಗೆ ಮರಾಠಾ ಸಮಾಜದ ಸುಮಾರು 400ಕ್ಕೂ ಹೆಚ್ಚು ಆಸಕ್ತ ವಧು–ವರರು ನೋಂದಣಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಪಾಲಕರೂ ಕೂಡ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಮೆಳವಿಗೆ ಉತ್ಸಾಹಭರಿತ ಪ್ರತಿಕ್ರಿಯೆ ನೀಡಿದರು.