Bengaluru News: ಬೆಂಗಳೂರಿನಲ್ಲಿ ಮಾ.22ರಂದು ʼಮರೆಯಲಾಗದ ಮಹನೀಯರುʼ ಕಾರ್ಯಕ್ರಮ
Bengaluru News: ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು ನಗರದ ಬೆಂಗಳೂರು ವಿಹಾರ ಕೇಂದ್ರ ಬಳಿಯಿರುವ ಆರ್. ಅಶೋಕ್ ಶಾಸಕರ ಕಛೇರಿ ಆವರಣದಲ್ಲಿ ಮಾ.22ರಂದು ಶನಿವಾರ ಸಂಜೆ 5.30 ಕ್ಕೆ ʼಮರೆಯಲಾಗದ ಮಹನೀಯರುʼ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು (Bengaluru News) ನಗರದ ಬೆಂಗಳೂರು ವಿಹಾರ ಕೇಂದ್ರ ಬಳಿಯಿರುವ ಆರ್. ಅಶೋಕ್ ಶಾಸಕರ ಕಚೇರಿ ಆವರಣದಲ್ಲಿ ಮಾ.22ರಂದು ಶನಿವಾರ ಸಂಜೆ 5.30 ಕ್ಕೆ ʼಮರೆಯಲಾಗದ ಮಹನೀಯರುʼ ಕಾರ್ಯಕ್ರಮ ಏರ್ಪಡಿಸಲಾಗಿದೆ. ವೈ.ಕೆ. ಮುದ್ದುಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂತ ಶಿಶುನಾಳ ಶರೀಫರು ಕುರಿತು ಸಾಹಿತಿ ಸತ್ಯೇಶ್ ಬೆಳ್ಳೂರ್ ಅವರಿಂದ ನುಡಿನಮನ. ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ ಕುರಿತು ಸಾಹಿತಿ ನಾ. ದಾಮೋದರ ಶೆಟ್ಟಿ ಅವರಿಂದ ನುಡಿನಮನ, ಡಿ.ವಿ. ಗುಂಡಪ್ಪ ಅವರ ಕುರಿತು ಸಾಹಿತಿ ಡಾ.ಪುತ್ತುರಾಯರು ಅವರಿಂದ ನುಡಿನಮನ, ಪು.ತಿ. ನರಸಿಂಹಾಚಾರ್ ಅವರ ಕುರಿತು ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ನುಡಿನಮನ ಸಲ್ಲಿಸುವರು.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ.ಮುದ್ದುಮೋಹನ್, ಮುಖ್ಯ ಎಂಜಿನಿಯರ್ ಮುನಿಕೃಷ್ಣ ಉಪಸ್ಥಿತರಿರುವರು. ಗಾಯನ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್, ರವಿ ಕೃಷ್ಣಮೂರ್ತಿ, ಪ್ರವೀಣ್-ಪ್ರದೀಪ್, ಮಂಗಳಾ ರವಿ, ಅಪರ್ಣಾ ನರೇಂದ್ರ, ಮುರಳೀಧರ ನಾವಡ, ಶ್ರೀರಕ್ಷಾ ಅರವಿಂದ್, ಚಾಂದಿನಿ ಗರ್ತಿಕೆರೆ ಪಾಲ್ಗೊಳ್ಳುವರು. ಸೃಷ್ಟಿ ಉಮೇಶ್, ರವಿಕಿರಣ್ ರಾಜಾರಾಂ, ಸೃಷ್ಟಿ ಶ್ರೀನಿವಾಸ್, ವೀರೇಂದ್ರ ಟಿ.ಎನ್. ವಾದ್ಯ ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | SSLC Exam 2025: ಮಾರ್ಚ್ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಈ ನಿಯಮಗಳ ಪಾಲನೆ ಕಡ್ಡಾಯ