ಕಲ್ಯಾಣ ಕರ್ನಾಟಕ, ಉ.ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಒತ್ತು
ನಾಗೇಂದ್ರ ಪ್ರಕರಣ, ಬರಗಾಲ ಸೇರಿ ಹಲವು ವಿಷಯಗಳ ಪ್ರಸ್ತಾಪ
ಬೆಂಗಳೂರು: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನ ರಾಜ್ಯ ಬಿಜೆಪಿ ಈ ಹಿಂದೆ ಪ್ರಕಟಿಸಿದಂತೆ ಇಂದಿ ನಿಂದ ಸೆ.10ರವರೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಳ್ಳಾರಿ ವರೆಗೆ 10 ದಿನ ಪಾದಯಾತ್ರೆ ಆರಂಭಿಸುತ್ತಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ವಿಚಾರ ಮುಂದಿಟ್ಟುಕೊಂಡೇ ಮುಂಬರುವ ಚುನಾವಣೆ ಸಿದ್ದತೆ ನಡೆಸಿದೆ.
ಬಳ್ಳಾರಿಗೆ ಪಾದಯಾತ್ರೆ ಮಾಡಿದರೆ ಆಡಳಿತ ಹಿಡಿಯ ಬಹುದು ಎಂಬ ದೂರಾಲೋಚನೆಯೂ ಇದರ ಹಿಂದಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುತ್ತಿದ್ದು, ಪಾದಯಾತ್ರೆ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಸರಕಾ ರದ ವಿರುದ್ಧ ಹೋರಾಟಕ್ಕೆ ಕಹಳೆ ಮೊಳಗಿಸಿದೆ. ಅಲ್ಲದೆ, ದಲಿತ ವಿರೋಧಿ ನೀತಿಯ ಕಾಂಗ್ರೆಸ್ ಹಾಗೂ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದಿಕ್ಕು ಬದಲಾಯಿಸದಲ್ಲೇ ವಿಚಾರ ಬದಲಾಯಿಸಿಕೊಂಡು ಯಾತ್ರೆ ಮುಂದುವರೆಸಿದೆ.
ನಾಗೇಂದ್ರ ರಾಜೀನಾಮೆಯ ಬಳಿಕ ಪಾದಯಾತ್ರೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಆದ್ದರಿಂದ ಇದೀಗ ಪಾದ ಯಾತ್ರೆಯ ಸ್ವರೂಪದಲ್ಲಿ ವಿಸ್ತಾರಗೊಂಡಿದ್ದು, ದಲಿತರ ಅಭಿವೃದ್ಧಿ ನಿಧಿಯ ಬಳಕೆ, ಬರಗಾಲ, ಉತ್ತರ ಕರ್ನಾಟಕದ ಅಭಿವೃದ್ಧಿ, ನಿರುದ್ಯೋಗ, ಮೀಸಲಾತಿ, ಸರಕಾರಿ ನೇಮಕಾತಿ ಹಾಗೂ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಸೇರಿದಂತೆ ಹಲವು ವಿಚಾರ ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.
ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಎಸ್‌ಸಿ, ಟಿಎಸ್‌ಪಿ ನಿಧಿಯ ಬಳಕೆ ಪ್ರಮುಖ ರಾಜಕೀಯ ಅಸ್ತ್ರವಾಗಲಿದೆ. ದಲಿತ ಮತ್ತು ಪರಿಶಿಷ್ಟ ಪಂಗಡ ಗಳ ಅಭಿವೃದ್ಧಿ ನಿಧಿಯ ದುರ್ಬಳಕೆಯ ಆರೋಪಗಳ ಜತೆಗೆ ವಾಲ್ಮೀಕಿ ನಿಗಮದ ಹಣದ ಅಕ್ರಮದ ವಿಚಾರ ಜನರ ಮುಂದಿಡುವುದು ಪಕ್ಷದ ತಂತ್ರವಾಗಿದೆ. ಇದರೊಂದಿಗೆ ರೈತರ ಸಂಕಷ್ಟ, ಬರಗಾಲ, ನೀರಾವರಿ ಸಮಸ್ಯೆ, ಉದ್ಯೋಗ ಸೃಷ್ಟಿಯ ಕೊರತೆ, ಸರಕಾರಿ ನೇಮಕಾತಿಯಲ್ಲಿನ ಅಕ್ರಮದ ಆರೋಪ, ಮೀಸಲಾತಿ ವಿಚಾರ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ನಿರ್ಲಕ್ಷ್ಯ ವನ್ನು ಪಾದಯಾತ್ರೆಯ ಸಂದರ್ಭದಲ್ಲಿ ಪ್ರಮುಖವಾಗಿ ಬಿಜೆಪಿ ಪ್ರಸ್ತಾಪಿಸಲಿದೆ.
ಈ ಮೂಲಕ ವಾಲ್ಮೀಕಿ ನಿಗಮದ ಅಕ್ರಮದ ವಿಚಾರ ಮಾತ್ರ ಸೀಮಿತಗೊಳಿಸದೆ, ಉತ್ತರ ಕರ್ನಾಟಕದ ಹಲವು ಸಮಸ್ಯೆ ಕಾಂಗ್ರೆಸ್ ಸರಕಾರದ ವಿರುದ್ಧದ ರಾಜಕೀಯ ಸಮರ ಸಾರಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮದ ಆರೋಪ ಸಂಬಂಧ ಬಿ.ನಾಗೇಂದ್ರ ರಾಜೀನಾಮೆ ನೀಡುವವರೆಗೂ ಸದನದ ಹೊರಗೆ ಹಾಗೂ ಒಳಗೂ ಹೋರಾಟ ನಡೆಸಿದ್ದ ಬಿಜೆಪಿ ಪಾದಯಾತ್ರೆ ಪ್ರಕಟಿಸಿತ್ತು.
ಇದೇ ಹಿನ್ನೆಲೆಯಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಒತ್ತಡ ಹೇರಿತ್ತು. ಆ.28ರಂದು ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಿಜೆಪಿಯ ಹೋರಾಟಕ್ಕೆ ದೊರೆತ ಮೊದಲ ರಾಜಕೀಯ ಫಲಿತಾಂಶ ಎಂಬ ಸಂದೇಶವನ್ನು ಜನರಿಗೆ ನೀಡಲು ಪಕ್ಷಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ನಾಗೇಂದ್ರ ರಾಜೀನಾಮೆಯೊಂದಿಗೆ ಹೋರಾಟ ಮುಗಿಯುವುದಿಲ್ಲ.
ಅಕ್ರಮದಲ್ಲಿ ಭಾಗಿಯಾಗಿರುವ ದೊಡ್ಡವರ ಪಾತ್ರವೂ ಬಹಿರಂಗವಾಗಬೇಕು ಎಂಬ ನಿಲುವನ್ನು ಬಿಜೆಪಿ ನಾಯಕತ್ವ ಮುಂದಿಟ್ಟಿದೆ. ಅಲ್ಲದೆ, ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡುವ ರಾಜಕೀಯ ಅಭಿಯಾನವಾಗಲಿದೆ ಎಂದು ಪಕ್ಷ ಹೇಳಿದೆ. ಸುಮಾರು 185ರಿಂದ 190 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಲಿರುವ ಪಾದಯಾತ್ರೆ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಲಿಂಗಸುಗೂರಿನಿಂದ ಆರಂಭವಾಗಿ ಮಸ್ಕಿ, ಸಿಂಧನೂರು, ಹಂಚನಾಳ ಕ್ಯಾಂಪ್, ಕನಕಗಿರಿ, ಗಂಗಾವತಿ, ಕಂಪ್ಲಿ, ಸಂಡೂರು ಹಾಗೂ ಬಳ್ಳಾರಿ ಗ್ರಾಮೀಣ ಮಾರ್ಗವಾಗಿ ಸಾಗುವ ಯಾತ್ರೆ ಬಳ್ಳಾರಿ ನಗರದಲ್ಲಿ ಅಂತ್ಯಗೊಳ್ಳಲಿದೆ.
ಒಟ್ಟಾರೆ, ಬಿಜೆಪಿ ಪಾದಯಾತ್ರೆ ಸಾಮಾನ್ಯ ಪ್ರತಿಭಟನಾ ಕಾರ್ಯಕ್ರಮಕ್ಕಿಂತಲೂ ಕಾಂಗ್ರೆಸ್ ಸರಕಾರದ ವಿರುದ್ಧ ಉತ್ತರ ಕರ್ನಾಟಕದಲ್ಲಿ ರಾಜಕೀಯ ನೆಲೆ ಗಟ್ಟಿಗೊಳಿಸುವ ಹಾಗೂ 2028ರ ವಿಧಾನಸಭಾ ಚುನಾವಣೆಗೆ ಪಕ್ಷದ ಸಂಘಟನೆಯನ್ನು ಮತ್ತಷ್ಟು ಹೆಚ್ಚಿಸಲು ಈಗಿನಿಂದಲೇ ಸಜ್ಜು ಗೊಳಿಸುವ ಕಾರ್ಯತಂತ್ರವಾಗಿದೆ.
ಬಳ್ಳಾರಿಯೇ ಶಕ್ತಿ ಕೇಂದ್ರ?
ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ತೋಳು ತಟ್ಟಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ರೆಡ್ಡಿ ಸಹೋದರರ ವಿರುದ್ಧ ಪಾದಯಾತ್ರೆ ನಡೆಸಿದ್ದರು. ಅಲ್ಲದೆ, ಇದೇ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಏರಿತ್ತು. ಇದೀಗ ಸರಿಸುಮಾರು ಒಂದು ದಶಕದ ಬಳಿಕ ರಾಜ್ಯದಲ್ಲಿ ಆಡಳಿತಾ ರೂಢ ಸರಕಾರದ ವಿರುದ್ಧ ಪ್ರತಿಪಕ್ಷ ವೊಂದು ಪಾದಯಾತ್ರೆ ನಡೆಸುತ್ತಿರು ವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಅಂದು ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ನಡೆಸಿದ್ದರೆ, ಇದೀಗ ಅದೇ ಬಳ್ಳಾರಿಯನ್ನು ಕೇಂದ್ರವಾಗಿಟ್ಟು ಕೊಂಡು ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸಲು ಮುಂದಾಗಿದೆ.
ಜಾಥಾಗೆ ದೋಸ್ತಿ ಸಾಥ್
ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಕೇವಲ ಬಿಜೆಪಿ ಸಂಘಟನಾ ಕಾರ್ಯಕ್ರಮ ವಾಗದೆ, ಕಾಂಗ್ರೆಸ್ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟಿನ ವೇದಿಕೆಯಾಗುವ ಸಾಧ್ಯತೆಯೂ ಇದೆ. ಈ ಪಾದಯಾತ್ರೆಯಲ್ಲಿ ಜೆಡಿಎಸ್ ಕೂಡ ಪಾಲ್ಗೊಳ್ಳುತ್ತಿರುವುದು ರಾಜಕೀಯ ದಿಕ್ಸೂಚಿ ಅಲ್ಲದೆ, ಮುಂಬರುವ ಚುನಾವಣೆಗೆ ಮೈತ್ರಿ ಮತ್ತಷ್ಟು ಬಲಪಡಿಸುವ ಯೋಜನೆಯೂ ಇದರ ಹಿಂದಿದೆ.
![]()
ಪಾದಯಾತ್ರೆ ಸಂಬಂಧ ನಾನೇ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಇದ್ದಾಗ ಒಟ್ಟಾಗಿ ಮಾತನಾಡಿದ್ದೇವೆ. ಗೊಂದಲಕ್ಕೆ ಅವಕಾಶವೇ ಇಲ್ಲ. 10 ಹಲವು ವಿಚಾರ ಇಟ್ಟುಕೊಂಡು ಪಾದಯಾತ್ರೆ ನಡೆಯಲಿದೆ.
ಬಿ. ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ