ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿನ್ನೆ ಸುರಿದ ಮಳೆಗೆ ಬೆಂಗಳೂರಿನಲ್ಲಿ 10 ಬಲಿ; ಇಂದೂ ಅಬ್ಬರಿಸಲಿದ್ದಾನೆ ವರುಣ

ಕರೆಂಟ್ ಶಾಕ್‌ನಿಂದ ಪ್ರಾಣ ಬಿಟ್ಟಿದ್ದಾನೆ. ಕೆಜಿ ಹಳ್ಳಿಯ ವೆಂಕಟೇಶ್ ಪುರಂ ನಿವಾಸಿ ಸೈಯದ್ ತನ್ನ ತಾಯಿ ಜೊತೆ ಖುಷಿಯಿಂದ ಬಟ್ಟೆ ಖರೀದಿಗೆ ಬಂದಿದ್ದ. ತಾಯಿ ಜೊತೆ ಬಂದಾತ ಪಾರ್ಕ್ ಮಾಡಲು ಹೋದಾಗ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಕರೆಂಟ್ ಶಾಕ್‌ನಿಂದ ಪ್ರಾಣ ಬಿಟ್ಟಿದ್ದಾನೆ. ಕೆಜಿ ಹಳ್ಳಿಯ ವೆಂಕಟೇಶ್ ಪುರಂ ನಿವಾಸಿ ಸೈಯದ್ ತನ್ನ ತಾಯಿ ಜೊತೆ ಖುಷಿಯಿಂದ (Rain Alert) ಬಟ್ಟೆ ಖರೀದಿಗೆ ಬಂದಿದ್ದ. ತಾಯಿ ಜೊತೆ ಬಂದಾತ ಪಾರ್ಕ್ ಮಾಡಲು ಹೋದಾಗ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದಿದೆ. ಇದೇ ವೇಳೆ ದೂರದ ಬೆಸ್ಕಾಂ ಕಂಬಕ್ಕೆ ಹಾನಿಯಾಗಿ ವೈಯರ್ ಕಟ್ ಆಗಿದ್ದು, ಪಾರ್ಕ್ ಮಾಡುತ್ತಿದ್ದ ಸೈಯದ್‌ಗೆ ವಿದ್ಯುತ್ ತಂತಿ ತಗುಲಿ ಶಾಕ್‌ನಿಂದ ತಾಯಿ ಮುಂದೆಯೇ ಸೈಯದ್ ಪ್ರಾಣ ಬಿಟ್ಟಿದ್ದಾನೆ. ತನ್ನ ಕಣ್ಣ ಮುಂದೆಯೇ ನಡೆದ ದುರಂತ ಕಂಡ ತಾಯಿ ಕೂಡ ಮಗನ ಸಾವಿನಿಂದ ಶಾಕ್‌ಗೆ ಒಳಗಾಗಿ ಐಸಿಯು ಸೇರಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗೋಡೋನ್ ಶೀಟ್‌ಗಳು ಬಿದ್ದು ವ್ಯಕ್ತಿ ದುರಂತ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆ ಕಸ್ತೂರಿ ಬಾಯಿನಗರ ಅಶ್ವಥ್ ಕಟ್ಟೆ ರಸ್ತೆಯ ಮನೆಯಲ್ಲಿದ್ದ 35 ವರ್ಷದ ಮಂಜು ಮೇಲೆ ಸಿಮೆಂಟ್ ಶೀಟ್ ಬಿದ್ದಿದೆ. ಕುಟುಂಬದ ಜೊತೆ ಮನೆ ಒಳಗೆ ಇದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬಿರುಗಾಳಿ ಮಳೆಗೆ ಗೋಡೌನ್ ಶೀಟ್‌ಗಳು ಹಾರಿ ಮನೆಗಳ ಮೇಲೆ ಬಿದ್ದು, ಹಲವು ಮನೆಗಳು, ಗೋಡೌನ್‌ಗಳಿಗೆ ಹಾನಿಯಾಗಿದೆ.

ಮತ್ತೊಂದೆಡೆ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ನಗರದ ಮಿನಿ ಫಾರೆಸ್ಟ್, 15ನೇ ಕ್ರಾಸ್ ಬಳಿ ಮಳೆಗೆ ಮತ್ತೊಂದು ಬಲಿಯಾಗಿದೆ. 35 ವರ್ಷದ ರಘು ಸಾವನ್ನಪ್ಪಿರುವ ದುರ್ದೈವಿ. ಸಾರಕ್ಕಿ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬದ ಬಳಿ ನಿಂತಿದ್ದಾಗ, ಜೆಡಿ ಮಾರಾ ಸ್ಲಂ ನಿವಾಸಿ ರಘು ವಿದ್ಯುತ್ ಸ್ಪರ್ಶಿಸಿ ಸಾವುನ್ನಪ್ಪಿದ್ದಾರೆ.

Bengaluru Rains: ಬೆಂಗಳೂರಿನಲ್ಲಿ ಮಳೆ ಅವಾಂತರ; ಧರೆಗುರುಳಿದ 50ಕ್ಕೂ ಹೆಚ್ಚು ಮರ, ರಸ್ತೆಗಳು ಜಲಾವೃತವಾಗಿ ಹಲವೆಡೆ ಟ್ರಾಫಿಕ್‌ ಜಾಮ್‌!

ಬೆಂಗಳೂರು ಸೇರಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಏ.30ರಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆ ಅಥವಾ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

Vishakha Bhat Heggar

View all posts by this author