ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶ್ವದ ನಂಬರ್‌ 1 ಚೆಸ್‌ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್‌ ಆಡಿದ 25 ಯುವ ಪ್ರತಿಭೆ

13ರಿಂದ 19 ವರ್ಷದೊಳಗಿನ ಬೆಂಗಳೂರು ಮತ್ತು ಚೆನ್ನೈನ ಯುವ ಆಟಗಾರರು ವಿಶ್ವ ನಂ.1 ಹಾಗೂ ಐದು ಬಾರಿ ವಿಶ್ವ ಚಾಂಪಿ ಯನ್ ಮ್ಯಾಗ್ನಸ್ ಕಾರ್ಲ್ಸನ್(Magnus Carlsen), ಭಾರತದ ಚೆಸ್ ಐಕಾನ್ ಕೋನೇರು ಹಂಪಿ(Koneru Hampi), ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ(Vidit Gujrati) ಮತ್ತು ಪ್ರವೀಣ್ ಮಹದೇವ್ ಥಿಪ್ಸೆ(Praveen Mahadev Thipsay) ಅವರ ಎದುರು ಆಡುವ ಅಪರೂಪದ ಅವಕಾಶ ಪಡೆದರು.

ಬೆಂಗಳೂರು: ಯುವ ಚೆಸ್ ಆಟಗಾರರ ಕನಸಿಗೆ ವೇದಿಕೆಯಾಗಿದ್ದ “ಚೆಕ್‌ಮೇಟ್ ಚಾಲೆಂಜ್‌”ನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ 25 ಯುವ ಚೆಸ್ ಪ್ರತಿಭೆಗಳು ವಿಶ್ವದ ಪ್ರಮುಖ ಚೆಸ್ ಆಟಗಾರರೊಂದಿಗೆ ಚೆಸ್‌ ಆಡುವ ಸುವರ್ಣ ಅವಕಾಶ ದೊರೆಯಿತು.

ಬೆಂಗಳೂರಿನ ಐಟಿಸಿ ವಿಂಡ್ಸರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 13ರಿಂದ 19 ವರ್ಷದೊಳಗಿನ ಬೆಂಗಳೂರು ಮತ್ತು ಚೆನ್ನೈನ ಯುವ ಆಟಗಾರರು ವಿಶ್ವ ನಂ.1 ಹಾಗೂ ಐದು ಬಾರಿ ವಿಶ್ವ ಚಾಂಪಿ ಯನ್ ಮ್ಯಾಗ್ನಸ್ ಕಾರ್ಲ್ಸನ್(Magnus Carlsen), ಭಾರತದ ಚೆಸ್ ಐಕಾನ್ ಕೋನೇರು ಹಂಪಿ(Koneru Hampi), ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ(Vidit Gujrati) ಮತ್ತು ಪ್ರವೀಣ್ ಮಹದೇವ್ ಥಿಪ್ಸೆ(Praveen Mahadev Thipsay) ಅವರ ಎದುರು ಆಡುವ ಅಪರೂಪದ ಅವಕಾಶ ಪಡೆದರು.

ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡದ ಕೋಚ್ ಗ್ರ್ಯಾಂಡ್‌ಮಾಸ್ಟರ್ ಪ್ರವೀಣ್ ಥಿಪ್ಸೆ ಅವರು, ಮೂರು ಗ್ರ್ಯಾಂಡ್‌ಮಾಸ್ಟರ್‌ಗಳ ವಿರುದ್ಧ ಬಲವಾದ ಬೋರ್ಡ್ ಸ್ಥಿತಿಯನ್ನು ಕಾಯ್ದುಕೊಂಡ ವಿವಾನ್ ಸಚ್‌ದೇವ್ ಅವರನ್ನು ಚೆಕ್‌ಮೇಟ್ ಚಾಲೆಂಜ್‌ನ ಅತ್ಯುತ್ತಮ ಆಟಗಾರರಾಗಿ ಆಯ್ಕೆ ಮಾಡಿದರು.

ಇದನ್ನೂ ಓದಿ: Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

ಈ ಕಾರ್ಯಕ್ರಮ ಯುವ ಆಟಗಾರರಿಗೆ ಕೇವಲ ಆಟವಲ್ಲ, ಒತ್ತಡದ ಸಂದರ್ಭದಲ್ಲೂ ಶಾಂತತೆ ಯಿಂದ ನಿರ್ಧಾರ ತೆಗೆದುಕೊಳ್ಳುವ, ತಮ್ಮ ಕೌಶಲ್ಯ ಪರೀಕ್ಷಿಸಿಕೊಳ್ಳುವ ಮತ್ತು ಜಾಗತಿಕ ಚೆಸ್ ತಾರೆಯರ ಎದುರು ಆತ್ಮವಿಶ್ವಾಸದಿಂದ ಆಡಿದ ವಿಶೇಷ ಅನುಭವವಾಯಿತು. ಮಕ್ಕಳ ಸಾಧನೆ ಯನ್ನು ನೋಡಿದ ಪೋಷಕರು ಮತ್ತು ತರಬೇತುದಾರರಿಗೂ ಇದು ಹೆಮ್ಮೆಯ ಕ್ಷಣವಾಗಿತ್ತು.

ಈ ಕುರಿತು ಮ್ಯಾಗ್ನಸ್ ಕಾರ್ಲ್ಸನ್ ಮಾತನಾಡಿ, ಯುವ ಆಟಗಾರರ ಉತ್ಸಾಹ, ಶಕ್ತಿ ಮತ್ತು ಪರಿಶ್ರಮ ಮೆಚ್ಚುವಂತಿತ್ತು ಎಂದು ಹೇಳಿದರು. ಫುಡ್ಸ್ ವಿಭಾಗದ ಸ್ನ್ಯಾಕ್ಸ್ ಮತ್ತು ನೂಡಲ್ಸ್ ಮಾರ್ಕೆಟಿಂಗ್ ಮುಖ್ಯಸ್ಥ ಅತುಲ್ ಪೂಜಾರ್, ಭಾರತದ ಯುವ ಮನಸ್ಸುಗಳನ್ನು ಪ್ರೇರೇಪಿಸುವುದು ಯಿಪ್ಪೀ!ಯ ನಿರಂತರ ಪ್ರಯತ್ನವಾಗಿದೆ ಎಂದರು.

ಆಗಸ್ಟ್ 26ರಿಂದ ಸೆಪ್ಟೆಂಬರ್ 2ರವರೆಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ ಸ್ಪರ್ಧೆಯಿಂದ 25 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಉಪಕ್ರಮವು #BeyondTheMove ಅಭಿಯಾನದ ಭಾಗವಾಗಿದೆ.