ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Iran-Israel War: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್‌

ದುಬೈ ಪ್ರವಾಸಕ್ಕೆ ತೆರಳಿ ಅಲ್ಲಿನ ಮುನುಕುಲ್ ನಗರದಲ್ಲಿ ವಿಮಾನಯಾನ ಸೇವೆ ರದ್ದಾಗಿ ಬಳ್ಳಾರಿ ಜಿಲ್ಲೆಯ 32 ಜನ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಬಳ್ಳಾರಿ ಪ್ರವಾಸಿಗರು ಸೇರಿ 50 ಮಂದಿ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕನ್ನಡಿಗರನ್ನು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹಾಗೂ ಜಗಳೂರು ಶಾಸಕ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಸ್ವಾಗತಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದುಬೈನಿಂದ ಬಂದ ಕನ್ನಡಿಗರನ್ನು ಶಾಸಕ ಬಿ.ನಾಗೇಂದ್ರ ಸ್ವಾಗತಿಸಿದರು.

ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ (Iran-Israel War) ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗ 15 ಮಂದಿ ಸೇರಿ 246 ಕನ್ನಡಿಗರು ಮಾ.4 ರಂದು ಶಾರ್ಜಾದಿಂದ ಕೊಚ್ಚಿಗೆ ಬಂದಿಳಿದಿದ್ದರು. ಅದರಲ್ಲಿ 50 ಮಂದಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಕೊಚ್ಚಿಯಿಂದ ಬೆಂಗಳೂರಿಗೆ ಬಂದಿಳಿದ ಕನ್ನಡಿಗರನ್ನು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹಾಗೂ ಜಗಳೂರು ಶಾಸಕ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರು ಬರಮಾಡಿಕೊಂಡಿದ್ದಾರೆ. ಈ ವೇಳೆ ಶಾಸಕರು ಹಾಗೂ ರಾಜ್ಯ ಸರ್ಕಾರದ ಸಹಾಯವನ್ನು ಸ್ಮರಿಸಿ ಕನ್ನಡಿಗರು ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.



ದುಬೈ ಪ್ರವಾಸಕ್ಕೆ ತೆರಳಿ ಅಲ್ಲಿನ ಮುನುಕುಲ್ ನಗರದಲ್ಲಿ ವಿಮಾನಯಾನ ಸೇವೆ ರದ್ದಾಗಿ ಬಳ್ಳಾರಿ ಜಿಲ್ಲೆಯ 32 ಜನ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಅವರೆಲ್ಲಾ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ.

US-Israel-Iran War: ಇರಾನ್‌ ಸುಪ್ರೀಂ ಲೀಡರ್‌ ಯಾರೇ ಆದ್ರೂ ಟಾರ್ಗೆಟ್:‌ ಇಸ್ರೇಲ್‌ ಎಚ್ಚರಿಕೆ

ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ (Iran–Israel war) ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳ ಜನರು ಅರಬ್‌ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಹಿಂತಿರುಗಲು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕನ್ನಡಿಗರನ್ನು ಸುರಕ್ಷಿತಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದೀಗ ಗಲ್ಫ್‌ ರಾಷ್ಟ್ರಗಳಲ್ಲಿ ಭಾರತೀಯರ ನೆರವಿಗಾಗಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಂದ ಸಹಾಯವಾಣಿ ಸಂಖ್ಯೆ (Helpline Numbers) ಆರಂಭಿಸಲಾಗಿದೆ.

ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು, ಈ ಕೆಳಕಂಡ ದೇಶಗಳ ಭಾರತ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು.

ಸಹಾಯವಾಣಿ ಸಂಖ್ಯೆಗಳು

ಇಸ್ರೇಲ್: +972-54-7520711

ಇರಾನ್: +98 9128109115, +98912 810 9109, +98 912 8109102, +98993 217 9359

ಸೌದಿ ಅರೇಬಿಯಾ:

ರಿಯಾಧ್‌: 00-966-11-4884697 | 00-966-542126748 (WhatsApp) 800 247 1234 (Toll-Free)

ಜೆಡ್ಡಾ: WhatsApp: +966536209704, Landline: 00966 126648660/00966122614093, Mobile: +966 556122301 | Toll-Free: 800 244 0003

ಯುಎಇ: Toll-Free: 800-46342 | WhatsApp: +9715430 90571

ಕತಾರ್: 00974-55647502

ಬಹ್ರೇನ್: 00973-39418071

ಜೋರ್ಡಾನ್: 00962-770 422 276

ಒಮಾನ್: Toll-Free: 8007 1234 | WhatsApp: +9689828 2270

ಇರಾಕ್‌: +964 771 651 1185 (English & Hindi), +964 770 444 4899 (Arabic)

ಕುವೈತ್: +96565501946

ಪ್ಯಾಲೆಸ್ತೀನ್: +970 592916418