ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಯಶಸ್ವಿ "ಹೃದಯ ಕಸಿ"

9 ವರ್ಷದ ರಿಯಾಂಶ್‌ ರಾವಲ್‌ ಎಂಬ ಬಾಲಕ ಹುಟ್ಟಿನಿಂದಲೇ ತೀವ್ರತರದ ಹೃದಯ ಸಮಸ್ಯೆ ಯಿಂದ ಬಳಲುತ್ತಿದ್ದ. ಕ್ರಮೇಣ ಈ ಸಮಸ್ಯೆ ಬಾಲಕನಿಗೆ ಉಸಿರಾಡಲು ಸಹ ಕಷ್ಟಪಡು ವಂತಹ ಸ್ಥಿತಿ ನಿರ್ಮಾಣ ವಾಗಿತ್ತು. ಬಾಲಕ ಬೆಳೆದಂತೆ ಹೃದಯ ಸಮಸ್ಯೆಯೂ ದೊಡ್ಡದಾಗುತ್ತಾ, ಹೃದಯ ವೈಫಲ್ಯ ದವರೆಗೂ ತಲುಪಿತ್ತು

9 ವರ್ಷದ ಬಾಲಕನಿಗೆ ಯಶಸ್ವಿ "ಹೃದಯ ಕಸಿ"

Profile Ashok Nayak Mar 26, 2025 11:51 PM

ಬೆಂಗಳೂರು: ಹೃದಯ ವೈಫಲ್ಯಕ್ಕೆ ಒಳಗಾಗುವ ಸ್ಥಿತಿಗೆ ತಲುಪಿದ್ದ 9 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡುವ ಮೂಲಕ ಬಾಲಕನಿಗೆ ಮರುಹುಟ್ಟು ನೀಡಲಾ ಗಿದೆ. ಯಶವಂತಪುರ ಸ್ಪರ್ಶ್‌ ಆಸ್ಪತ್ರೆಯ ಹೃದಯ ಕಸಿತಜ್ಞ, ಹೃದಯ ರಕ್ತನಾಳಗಳ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್‌ ಶೆಟ್ಟಿ.ಕೆ. ಅವರ ವೈದ್ಯ ತಂಡ ಈ ಯಶಸ್ವಿ ಹೃದಯ ಕಸಿ ನಡೆಸಿದೆ.

ಈ ಕುರಿತು ಮಾತನಾಡಿದ ಡಾ.ರವಿಶಂಕರ್‌ ಶೆಟ್ಟಿ.ಕೆ, 9 ವರ್ಷದ ರಿಯಾಂಶ್‌ ರಾವಲ್‌ ಎಂಬ ಬಾಲಕ ಹುಟ್ಟಿನಿಂದಲೇ ತೀವ್ರತರದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಕ್ರಮೇ ಣ ಈ ಸಮಸ್ಯೆ ಬಾಲಕನಿಗೆ ಉಸಿರಾಡಲು ಸಹ ಕಷ್ಟಪಡುವಂತಹ ಸ್ಥಿತಿ ನಿರ್ಮಾಣ ವಾಗಿತ್ತು. ಬಾಲಕ ಬೆಳೆದಂತೆ ಹೃದಯ ಸಮಸ್ಯೆಯೂ ದೊಡ್ಡದಾಗುತ್ತಾ, ಹೃದಯ ವೈಫಲ್ಯ ದವರೆಗೂ ತಲುಪಿತ್ತು. ಹೃದಯದ ಕಸಿ ಮಾಡುವುದೊಂದೇ ಬಾಲಕನನ್ನು ಬದುಕುಳಿಸುವ ಮಾರ್ಗವಾಗಿತ್ತು. ಆದರೆ, ಸೂಕ್ತ ಸಮಯಕ್ಕೆ ಹೃದಯ ದೊರೆಯುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ನೋಂದಣಿ ಮಾಡುತ್ತಾ ಕಾಯುತ್ತಿದ್ದರು. ಸೂಕ್ತ ಸಮಯಕ್ಕೆ ರಿಯಾಂಶ್‌ಗೆ ಹೊಂದಾಣಿಕೆಯಾಗುವ ಹೃದಯವು ಕರ್ನಾಟಕ ಅಂಗ ಮತ್ತು ಅಂಗಾಂಶ ಗಳ ಕಸಿ ಸಂಸ್ಥೆ (SOTTO Karnataka)ಯ ಸಕ್ರಿಯ ಮತ್ತು ಸಕಾಲಿಕ ಪ್ರಯತ್ನದೊಂದಿಗೆ ದೊರೆಯಿತು.

ಇದನ್ನೂ ಓದಿ: Bangalore News: ಪ್ಲಾಸ್ಟಿಕ್‌ ಮರುಬಳಕೆ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ: ಸರ್ಕಾರಿ ಶಾಲೆಗೆ ಮರುಬಳಕೆ

ನಮ್ಮ ಅರಿವಳಿಕೆ ತಜ್ಞರು, ತುರ್ತು ಚಿಕಿತ್ಸಾ ವಿಭಾಗದ ನುರಿತರ ನಿರಂತರ ನಿಗಾ, ದಾದಿ ಯರು ಹಾಗೂ ಹೃದಯ ಕಸಿ ನಂತರದ ಚಿಕಿತ್ಸಾ ವಿಭಾಗದ ತಜ್ಞರಿಂದ ಹೃದಯವೂ ಸೇರಿ ದಂತೆ ಉಳಿದ ಅಂಗಾಂಗಗಳಿಗೆ ಸೂಕ್ತವಾದ ರಕ್ತ ಸಂಚಲನ ಪ್ರಕ್ರಿಯೆ ನಡೆಸುವ ತಂಡದ ಆರೈಕೆಯಿಂದಾಗಿ ರಿಯಾಂಶ್‌ಗೆ ಯಶಸ್ವಿಯಾಗಿ ಹೃದಯ ಕಸಿ ನೆರವೇರಿದ್ದು, ರಿಯಾಂಶ್‌ ಇದೀಗ ಎಲ್ಲಾ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.