BBK 12: ರಕ್ಷಿತಾ ಜಗಳ ಮಾಡ್ತಾರೆ ಅನ್ಸಲ್ಲ, ಡ್ಯಾನ್ಸ್ ಮಾಡಿಕೊಂಡೇ ಮಾತಾಡ್ತಾರೆ! ಕಿಚ್ಚನ ಮುಂದೆ ಅಶ್ವಿನಿ ಗೌಡ ನೇರ ಮಾತು
ಇನ್ನು ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಮನೆಯಲ್ಲಿ ಇವರ ನಡವಳಿಕೆಯನ್ನು ಇಷ್ಟಪಟ್ಟಿದ್ದರು. ತಮ್ಮ ನೇರ ಮಾತುಗಳಿಂದಲೇ ವೀಕ್ಷಕರಿಗೆ ಇಷ್ಟವಾಗುತ್ತಿದ್ದಾರೆ. ಅಶ್ವಿನಿ ಗೌಡ, ರಾಶಿಕಾ, ಜಾನ್ವಿ, ಕಾಕ್ರೋಚ್ ಸುಧಿ ಅವರು ಕಳೆದು ಕೆಲವು ವಾರಗಳಿಂದ ರಕ್ಷಿತಾ ಅವರನ್ನು ಸದಾ ಟಾರ್ಗೆಟ್ ಮಾಡುತ್ತ ಬಂದರು.
-
Yashaswi Devadiga
Nov 1, 2025 6:18 PM
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಹೊಸ ಪ್ರೋಮೋ ಔಟ್ ಆಗಿದೆ. ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ (kichcha Sudeep) ಅವರ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿರುತ್ತಾರೆ. ಇದೀಗ ರಕ್ಷಿತಾ (Rakshita Shetty) ಅಸಲಿನಾ? ನಕಲಿನಾ? ಎನ್ನುವ ಪ್ರಶ್ನೆ ಸ್ಪರ್ಧಿಗಳಿಗೆ ಎದುರಾಗಿದೆ. ಅವರ ಕೊಟ್ಟ ಉತ್ತರವೇನು? ಕಿಚ್ಚ ಹೇಳಿದ್ದೇನು?
ಎಲ್ಲ ಕಡೆ ಮೂಗು ತೂರಿಸುತ್ತಾರಾ ರಕ್ಷಿತಾ?
ರಕ್ಷಿತಾ ಅವರ ಎಲ್ಲ ಕಡೆ ಮೂಗು ತೂರಿಸುತ್ತಾರೆ ಅನ್ನೋ ಸ್ಟೇಟ್‌ಮೆಂಟ್‌ಗೆ ಅನೇಕ ಸ್ಪರ್ಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ. ರಕ್ಷಿತಾ ಅವರು ಫೇಕ್ ಅಂತ ಕೂಡ ಹೇಳಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ ಅವರು ಸುದೀಪ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ.
ʻರಕ್ಷಿತಾ ಅವರು ಜಗಳ ಮಾಡ್ತಾರೆ ಅನ್ಸಲ್ಲ. ಅವರು ಡ್ಯಾನ್ಸ್ ಮಾಡಿಕೊಂಡೇ ಆಟ ಆಡ್ತಾರೆʼ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದರು ಅಶ್ವಿನಿ. ಅದರಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಿಷಾ ಕೂಡ, ʻ15 ನಿಮಿಷ ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಶನಿವಾರ ಭಾನುವಾರ ಬಂತು ಅಂದರೆ ಅದು ಇದು ಅಂತ ಶುರುವಾಗತ್ತೆ. ನನ್ನ ಪ್ರಕಾರ ಅವರ ಸ್ಟ್ರಾಟಜಿ ಬಳಕೆ ಮಾಡ್ತಿದ್ದಾರೆʼ ಎಂದಿದ್ದಾರೆ. ಕಾಕ್ರೋಚ್ ಸುಧಿ ಕೂಡ ʻರಕ್ಷಿತಾ ತುಂಬಾ ಫೇಕ್ʼ ಎಂದಿದ್ದಾರೆ.
ಇದಕ್ಕೆ ಸುದೀಪ್ ಅವರು ಕೊನೆಯಲ್ಲಿ ಕೆಲವು ವ್ಯಕ್ತಿಗಳು ಇರ್ತಾರೆ. ಕೆಲವರು ನಮಗೆ ಸೂಟ್ ಆದರೆ ಇನ್ನೂ ಕೆಲವರು ಸೂಟ್ ಆಗಲ್ಲ ಅಷ್ಟೇ ಸತ್ಯ ಎಂದಿದ್ದಾರೆ. ರಕ್ಷಿತಾ ಶೆಟ್ಟಿ ಪರ ವಹಿಸಿಕೊಂಡು ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Bigg Boss : ಎಲಿಮಿನೇಶನ್ ರೌಂಡ್‌ಗೂ ಮೊದಲೇ ಈ ಸ್ಪರ್ಧಿ ಮನೆಯಿಂದ ಹೊರಗೆ? ಔಟ್ ಆಗಿದ್ಯಾರು?
ಫ್ಯಾನ್ಸ್ ಸಮರ್ಥನೆ
ಇನ್ನು ಈ ಪ್ರೋಮೋ ಔಟ್ ಆಗ್ತಿದ್ದಂತೆ ಕಮೆಂಟ್‌ನಲ್ಲಿ ವೀಕ್ಷಕರು ರಕ್ಷಿತಾ ಅವರನ್ನೇ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಇಷ್ಟೇ ನಿಮ್ಮೆಲ್ಲ ಜೊತೆ ಸ್ಪಷ್ಟ ವಾಗಿ ಮಾತಾಡುತ್ತಲೇ ಅಂದ್ರೆ ನಿಮ್ಮ ನಡುವೆ ಅವ್ಳಿಗೆ comfertness ಬಂದಿದೆ. ಅದೆ ಸುದೀಪ್ sir ಮುಂದೆ ಅವ್ಳು ನರ್ವಸ್ ಆಗುತ್ತಾಳೆ ಆಗ ಕನ್ನಡ ತೊದಲುತ್ತೆ ಅಷ್ಟೇ ಎಂದು ನೆಟ್ಟಿಗರು ಸಮರ್ಥಿಸಿಕೊಂಡಿದ್ದಾರೆ. ಅದರಲ್ಲೂ ಅನೇಕರು ಅಶ್ವಿನಿ ಗೌಡ ಅವರೇ ಫೇಕ್ ಎಂದು ಕಮೆಂಟ್ ಮಾಡಿದ್ದಾರೆ.
ನೇರ ಮಾತುಗಳಿಂದಲೇ ವೀಕ್ಷಕರಿಗೆ ಹತ್ತಿರ
ಇನ್ನು ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಮನೆಯಲ್ಲಿ ಇವರ ನಡವಳಿಕೆಯನ್ನು ಇಷ್ಟಪಟ್ಟಿದ್ದರು. ತಮ್ಮ ನೇರ ಮಾತುಗಳಿಂದಲೇ ವೀಕ್ಷಕರಿಗೆ ಇಷ್ಟವಾಗುತ್ತಿದ್ದಾರೆ. ಅಶ್ವಿನಿ ಗೌಡ, ರಾಶಿಕಾ, ಜಾನ್ವಿ, ಕಾಕ್ರೋಚ್ ಸುಧಿ ಅವರು ಕಳೆದು ಕೆಲವು ವಾರಗಳಿಂದ ರಕ್ಷಿತಾ ಅವರನ್ನು ಸದಾ ಟಾರ್ಗೆಟ್ ಮಾಡುತ್ತ ಬಂದರು. ಅನವಶ್ಯಕವಾಗಿ ರಕ್ಷಿತಾ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದರು.
ಇದನ್ನೂ ಓದಿ: Bigg Boss 12: ಈ ಎಲ್ಲ ವಿಷಯಗಳು ಚರ್ಚೆ ಆಗಲೇಬೇಕು! ಕಿಚ್ಚನಿಗೆ ವೀಕ್ಷಕರಿಂದ ಒತ್ತಾಯ
ಚಿಕ್ಕ ಹುಡುಗಿ ಎಂದು ಟೆಲಿಕಾಸ್ಟ್ ಮಾಡಲಾಗದಂತಹ ಪದ ಬಳಕೆ ಮಾಡಿದರು. ಇಷ್ಟೆಲ್ಲ ಆದರು ರಕ್ಷಿತಾ ಕುಗ್ಗದೆ ಎದುರಾಳಿಗರನ್ನು ಸಮರ್ಥವಾಗಿ ಎದುರಿಸಿದ್ದರು. ವೀಕ್ಷಕರಿಗೆ ರಕ್ಷಿತಾ ಮೇಲೆ ಈಗ ಒಂದು ಸಾಫ್ಟ್ ಕಾರ್ನರ್ ಹುಟ್ಟುಕೊಂಡಿದೆ. ಇದೇ ಅವರಿಗೆ ಒಂದು ಪ್ಲಸ್ ಪಾಯಿಂಟ್ ಆಗಿದೆ.