ಬೆಂಗಳೂರು: ರಾಜ್ಯದ ಜನರಿಗೆ ಸಾಲುಸಾಲಾಗಿ ರಾಜ್ಯ ಸರಕಾರ ಬೆಲೆಯೇರಿಕೆಯ ಆಘಾತಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಹಾಲಿನ ಬೆಲೆ 8 ರು., ನಂತರ ಸಾರಿಗೆ ಬೆಲೆಯನ್ನು ವಿಪರೀತ ಏರಿಸಿ, ಆಘಾತ ಮೂಡಿಸಿದ್ದ ಸರಕಾರ, ಇದೀಗ ತುಪ್ಪ, ಬೆಣ್ಣೆ, ಪನೀರ್ ಬೆಲೆಗಳನ್ನೂ ಏರಿಸಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಪರಿಷ್ಕೃತ ದರಗಳನ್ನು ಪ್ರಕಟಿಸಿದೆ. 12 ತಿಂಗಳ ಅವಧಿಯಲ್ಲಿ ನಂದಿನಿ ತುಪ್ಪದ ಬೆಲೆ ಮೂರನೇ ಬಾರಿಗೆ ಹೆಚ್ಚಳವಾಗಿದೆ. ಕೆಎಂಎಫ್ ಪರಿಷ್ಕರಿಸಿರುವ ದರಗಳ ಪ್ರಕಾರ, ನಂದಿನಿ ತುಪ್ಪದ ಒಂದು ಲೀಟರ್ ಪ್ಯಾಕೆಟ್ ಬೆಲೆ 715 ರು.ಗಳಿದ 850 ರು.ಗೆ ಏರಿಕೆಯಾಗಿದೆ. ಇನ್ನು ನಂದಿನಿ ಬೆಣ್ಣೆಯ 1 ಕೆಜಿ ಪ್ಯಾಕ್ ಬೆಲೆ 700 ರು.ಗಳಿಂದ 780 ರು.ವರೆಗೆ ಹೆಚ್ಚಿಸಲಾಗಿದೆ. ಪನೀರ್ ಬೆಲೆ 1 ಕೆಜಿ ಪ್ಯಾಕ್ 408 ರು.ನಿಂದ 485 ರು.ಗೇರಿದೆ.
ಬೆಣೆ ದೋಸೆ ತುಟ್ಟಿ
ತುಪ್ಪ, ಬೆಣ್ಣೆ ಬೆಲೆಯೇರಿಕೆ ಗೊತ್ತಾಗುತ್ತಿದ್ದಂತೆ ಬೆಣ್ಣೆ ದೋಸೆ ಹೋಟೆಲ್ ಗಳಲ್ಲಿ ಬೆಲೆಯೇರಿಕೆ ಮಾಡಲಾಗಿದೆ ಎಂದು ಬೋರ್ಡ್ ನೇತು ಹಾಕಲಾ ಗಿದೆ. ಅಲ್ಲಿಗೆ ಕೆಎಂಎಫ್ʼನ ಜೊತೆಗೆ ಹೋಟೆಲ್ಗಳೂ ಜನರಿಗೆ ಆಘಾತ ನೀಡಿವೆ
ಏರಿದ ಅಮುಲ್
ದೇಶದ ಪ್ರಸಿದ್ಧ ಡೇರಿ ಬ್ರ್ಯಾಂಡ್ ‘ಅಮುಲ್’ ತನ್ನ ತುಪ್ಪ ಮತ್ತು ಬೆಣ್ಣೆ ಉತ್ಪನ್ನಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ತುಪ್ಪದ ದರ ಲೀಟರ್ಗೆ 50 ರು. ಹಾಗೂ 500 ಗ್ರಾಮ್ ಬೆಣ್ಣೆ ಪ್ಯಾಕ್ ಬೆಲೆ 15ರಷ್ಟು ಹೆಚ್ಚಳ ಮಾಡಲಾಗಿದೆ