ಬೆಂಗಳೂರು: ಮಾರುಕಟ್ಟೆಯಿಂದ ಖರೀದಿಸುವ ಗೋದಿಹಿಟ್ಟು ಸಂಪೂರ್ಣವಾಗಿ ಗೋದಿ ಯಿಂದಲೇ ತಯಾರಾಗಿರುತ್ತದೆಯೇ ಎಂಬುದರ ಬಗ್ಗೆ ನಮಗೆ ಯಾವುದೇ ಖಾತರಿ ಇರುವುದಿಲ್ಲ. ಆದರೆ, ಐಟಿಸಿ ಆಶೀರ್ವಾದ್ ಇದೀಗ ತನ್ನ ಅಟ್ಟಾ(ಗೋದಿ ಹಿಟ್ಟು)ಗೆ “ಗುಣಮಟ್ಟದ ಪ್ರಮಾಣಪತ್ರ ವನ್ನು ಖರೀದಿ ಮಾಡುವ ಪ್ಯಾಕ್‌ನ ಮೇಲೆಯೇ ಮುದ್ರಿಸುವ ಮೂಲಕ ಆಶೀರ್ವಾದ್ ಅಟ್ಟ ಹೆಚ್ಚು ಸುರಕ್ಷಿತ ಎಂಬುದನ್ನು ತಿಳಿಸುತ್ತಿದೆ.
ಇದರ ರಾಯಭಾರಿಯಾಗಿರುವ ನಟಿ ಸ್ನೇಹ, ಈ ಗುಣಮಟ್ಟದ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿದರು. ಈ ಕುರಿತು ಮಾತನಾಡಿದ ಐಟಿಸಿ ಫುಡ್ಸ್‌ನ ದಿನಸಿ ಮತ್ತು ಅಡ್ಜಸೆನ್ಸೀಸ್ ವಿಭಾಗದ ಸಿಒಒ ಅನುಜ್ ಕುಮಾರ್ ರುಸ್ತೋಗಿ ಸಾಮಾನ್ಯವಾಗಿ ಗೋದಿ ಹಿಟ್ಟು ಖರೀದಿಸುವ ಜನರಿಗೆ ಇದು ಸಂಪೂರ್ಣ ಗೋದಿ ಹಿಟ್ಟೇ ಅಂತ ಅನುಮಾನ ಇದ್ದೇ ಇರುತ್ತದೆ, ಕಂಪನಿಗಳು ಎಷ್ಟೇ ಬಾಯಿ ಮಾತಿನ ಭರವಸೆ ನೀಡಬಹುದು, ಆದರೆ, ಲಿಖಿತವಾಗಿ ಯಾವುದೂ ಇರುವುದಿಲ್ಲ. ಆದರೆ ನಮ್ಮ ಆಶೀರ್ವಾದ್ ಅಟ್ಟಾ ಇದೀಗ ಗುಣಮಟ್ಟದ ಪ್ರಮಾಣಪತ್ರದೊಂದಿಗೆ ನಿಮಗೆ ಲಭ್ಯವಾಗುತ್ತಿದೆ.
ಇದನ್ನೂ ಓದಿ: IPL 2025 Revenue: ಐಪಿಎಲ್ 2025ರಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು?
ಹೌದು, ಶೇ.100ರಷ್ಟು ಗೋದಿ ಹಿಟ್ಟಿನಿಂದಲೇ ಮಾಡಲಾಗಿದ್ದು, ಶೇ.0 ಮೈದಾ ಎಂಬ ಪ್ರಮಾಣ ಪತ್ರದೊಂದಿಗೆ ಜನರ ಮುಂದೆ ಬಂದಿದೆ. ಇದರೊಂದಿಗೆ ಜನರು ಯಾವುದೇ ಅನುಮಾನವಿಲ್ಲದೇ ಅಸಲಿ ಗೋದಿಹಿಟ್ಟನ್ನು ಖರೀದಿಸಬಹುದು. ಈ ಪ್ರಮಾಣಪತ್ರವು ಪ್ಯಾಕ್‌ನ ಮೇಲೆಯೇ ಸ್ಕಾನರ್ ಕೋಡ್‌ನಲ್ಲಿ ಲಭ್ಯವಿರಲಿದ್ದು, ಯಾರು ಬೇಕಾದರೂ ಅದನ್ನು ಸ್ಕ್ಯಾನ್ ಮಾಡಿ, ಪ್ರಮಾಣಪತ್ರ ವನ್ನು ನೋಡಬಹುದು.
ಇದಷ್ಟೇ ಅಲ್ಲದೆ, ಪೋಷಕಾಂಶ ಮೌಲ್ಯಗಳು – ನಾರಿನಂಶ ಮತ್ತು ಪ್ರೊಟೀನ್ ಹಾಗೂ ರೊಟ್ಟಿ ಮೃದುತ್ವದ ಬಗ್ಗೆಯೂ ಪ್ರಮಾಣಪತ್ರದಲ್ಲಿ ಮುದ್ರಿಸಲಾಗಿದೆ ಎಂದು ಹೇಳಿದರು.