ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಟೆಕ್ಕಿ ಯುವತಿಗೆ ಗಾಳ; ಮದುವೆಯಾಗೋದಾಗಿ 1.75 ಕೋಟಿ ವಂಚನೆ!

ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಟೆಕ್ಕಿ ಯುವತಿಗೆ ಗಾಳ; ಮದುವೆಯಾಗೋದಾಗಿ 1.75 ಕೋಟಿ ವಂಚನೆ!. ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಟೆಕ್ಕಿ ಯುವತಿಗೆ ಗಾಳ; ಮದುವೆಯಾಗೋದಾಗಿ 1.75 ಕೋಟಿ ವಂಚನೆ!. ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿ ಟೆಕ್ಕಿ ಯುವತಿಗೆ ಗಾಳ; ಮದುವೆಯಾಗೋದಾಗಿ 1.75 ಕೋಟಿ ವಂಚನೆ!

ಮದುವೆಯಾಗೋದಾಗಿ ಟೆಕ್ಕಿ ಯುವತಿಗೆ ಗಾಳ; 1.75 ಕೋಟಿ ವಂಚನೆ!

ಆರೋಪಿ ಮತ್ತು ಸಂತ್ರಸತ ಯುವತಿ. -

Prabhakara R
Prabhakara R Jan 18, 2026 5:11 PM

ಬೆಂಗಳೂರು, ಜ.18: ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಟಿಕ್ಕಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಿವಾಹಿತ ಯುವಕನೊಬ್ಬ ಬರೋಬ್ಬರಿ 1.75 ಕೋಟಿ ಹಣ ವಂಚಿಸಿರುವ ಘಟನೆ (Cheating Case) ನಗರದಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿ ಯುವಕ ಸೇರಿ ಒಂದೇ ಕುಟುಂಬದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ವೈಟ್ ಫೀಲ್ಡ್ ಮೂಲದ ಯುವತಿಗೆ ವಂಚನೆಗೊಳಗಾಗಿದ್ದು, ಈಕೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾಳೆ. ವಂಚನೆ ಆರೋಪದಲ್ಲಿ ವಿಜಯ್ ರಾಜ್ ಗೌಡ, ಬೋರೆಗೌಡ, ಸೌಮ್ಯ ಎಂಬುವರ ವಿರುದ್ಧ ಕೇಸ್‌ ದಾಖಲಾಗಿದೆ.

ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ!

2024 ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿಯಲ್ಲಿ ಇಬ್ಬರಿಗೂ ಪರಿಚಯವಾಗಿದೆ. ತಾನು ದೊಡ್ಡ ಉದ್ಯಮಿ, 715 ಕೋಟಿ ಆಸ್ತಿ ಇದೆ ಎಂದು ಯುವಕ ಪರಿಚಯ ಮಾಡಿಕೊಂಡಿದ್ದ. ಈ ಮೊದಲೇ ಮದುವೆಯಾಗಿದ್ದರೂ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದ. ಕೆಂಗೇರಿ ಬಳಿ ಯುವತಿಯನ್ನು ಕರೆಸಿ ಮನೆಯವರಿಗೆ ಪರಿಚಯ ಮಾಡುವ ವೇಳೆ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ.

ಪರಿಚಯವಾದ ಬಳಿಕ ನನ್ನ ವಿರುದ್ಧ ಆಸ್ತಿ ಸಂಬಂಧ ಇಡಿ ಕೇಸ್ ದಾಖಲಾಗಿದೆ. ಅಕೌಂಟ್ ಪ್ರಾಬ್ಲಂ ಆಗಿದೆ ಎಂದಿದ್ದ ಆಸಾಮಿ, ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು, ಕೋರ್ಟ್ ಪ್ರತಿಗಳನ್ನು ತೋರಿಸಿದ್ದ. ಈ ಮೂಲಕ ಹಣದ ಅವಶ್ಯಕತೆ ಇದೆ ಎಂದು 15 ಸಾವಿರ ಹಣ ಪಡೆದಿದ್ದ. ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಅಂತ ಹೇಳಿ ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದ. ಜತೆಗೆ ಯುವತಿ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದ.

ಹಂತಹಂತವಾಗಿ 1.75 ಕೋಟಿ ಹಣ ಪಡೆದಿದ್ದ!

ಇದಾದ ಬಳಿಕ ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಕಥೆ ಕಟ್ಟಿದ ಖದೀಮ, ಪುನಃ ಯುವತಿ ಸ್ನೇಹಿತರಿಗೆ ಬ್ಯುಸಿನೆಸ್ ಮಾಡಲು ಪ್ರೇರೇಪಿಸಿ ಲಕ್ಷ ಲಕ್ಷ ಸಾಲ ಪಡೆದಿದ್ದ. ಹೀಗೆ ಹಂತಹಂತವಾಗಿ ಯುವತಿ ಸಂಬಂಧಿಗಳು, ಸ್ನೇಹಿತರಿಂದ 1.75 ಕೋಟಿ ಹಣ ಪಡೆದಿದ್ದ. ಪುನಃ ಬ್ಯಾಂಕ್ ಖಾತೆಗಳು ಫ್ರೀಜ್ ಆಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇದೆ ಅಂತ ನಂಬಿಸಿದ್ದ. 22 ಲಕ್ಷ ಹಣ ವಾಪಸ್ ಕೊಟ್ಟು ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ.

ಭಟ್ಕಳದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

ಇನ್ನು ಹಣ ವಾಪಸ್ ಕೇಳಲು ಹೋದಾಗ ಅಸಲಿ ಸಿಕ್ರೇಟ್ ಬಯಲಾಗಿದೆ. ಹಣ ಕೇಳಿದ ಯುವತಿ ಹಾಗೂ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾನೆ. ಮದುವೆಯಾಗಿ ಮಗು ಇದ್ದರೂ ಯುವತಿಗೆ ಮದುವೆ ಆಮಿಷ ಒಡ್ಡಿರುವುದು ಬಯಲಾಗಿದೆ. ಹೀಗಾಗಿ ಮೋಸ ಹೋದ ವಿಚಾರ ತಿಳಿದು ವೈಟ್ ಫೀಲ್ಡ್ ಠಾಣೆಗೆ ಟೆಕ್ಕಿ ಯುವತಿ ದೂರು ನೀಡಿದ್ದಾಳೆ. ಬಳಿಕ ಪ್ರಕರಣ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.