ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ತಮ್ಮ ಮುಂದಿನ ನಡೆಯ ಗುಟ್ಟನ್ನು ಬಿಟ್ಟುಕೊಡದ ಸಿದ್ದರಾಮಯ್ಯ(Siddaramaiah), ಭಾನುವಾರದ ಅಹಿಂದ ಸಮಾವೇಶ ದಲ್ಲಿ ಯಾವುದಾದರೂ ಘೋಷಣೆ ಮಾಡಬಹುದೇ ಎನ್ನುವ ಕುತೂಹಲ ಶುರುವಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದ ನೆಪದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿದೆ. ಈ ಕಾರ್ಯಕ್ರಮ ಕೇವಲ ಒಬಿಸಿ ಸಮಾವೇಶವಾಗಿರದೇ, ಅಹಿಂದ ಸಮಾವೇಶವಾಗುವುದು ನಿಶ್ಚಿತವಾಗಿರುವುದರಿಂದ ಸಿದ್ದರಾಮಯ್ಯ ಈ ಸಮಾವೇಶದಲ್ಲಿ ತಮ್ಮ ಮೌನ ಮುರಿಯುವ ಅಥವಾ ಮುಂದಿನ ಆಲೋಚನೆ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸೆಪ್ಟಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಅಹಿಂದ ಸಂಘಟನೆಗೆ ಸಿದ್ದರಾಮಯ್ಯ ಅವರು ಎಂಟ್ರಿಯಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಹಿಂದ ಸಂಘಟನೆಯ ಮೂಲಕ ಕಾಂಗ್ರೆಸ್‌ನಲ್ಲಿ ತಾವಿನ್ನೂ ಶಕ್ತಿಶಾಲಿ ಎನ್ನುವ ಸಂದೇಶವನ್ನು ರಾಜ್ಯದ ಜನರಿಗೆ ಹಾಗೂ ದೆಹಲಿ ನಾಯಕರಿಗೆ ರವಾನಿಸುವ ಆಲೋಚನೆಯಲ್ಲಿದ್ದಾರೆ. ಈ ಎಲ್ಲ ಆಲೋಚನೆಗಳಿಗೆ ಭಾನುವಾರದ ಸಮಾವೇಶ ನಾಂದಿ ಹಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: Sathish to lead Ahinda: ಅಹಿಂದ ಹೋರಾಟಕ್ಕೆ ಸತೀಶ್ ನೇತೃತ್ವ ?
ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶದ ಜತೆಜತೆಗೆ ರಾಜ್ಯದಲ್ಲಿ ಸುದೀರ್ಘ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯರವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಯಾವೆಲ್ಲ ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವಹಿಸಲಿzರೆ ಎನ್ನುವುದರ ಮೇಲೆ ಮುಂದಿನ ಕಾಂಗ್ರೆಸ್ ಲೆಕ್ಕಾಚಾರಗಳು ನಿಂತಿವೆ.
ಜಾತಿ ಗಣತಿಗೆ ಆಗ್ರಹ: ಇನ್ನು ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಧು ಸೂಧನ್ ನಾಯಕ್ರವರ ಅಧ್ಯಕ್ಷತೆಯಲ್ಲಿ ನಡೆಸಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ-2025ರ ವರದಿಯನ್ನು ಜಾರಿಗೊಳಿಸಬೇಕು ಎನ್ನುವ ಒತ್ತಡ ಹೇರುವ ನಿರ್ಣಯ ಕೈಗೊಳ್ಳ ಲುವುದಾಗಿ ಈಗಾಗಲೇ ಸಂಘಟನೆ ಹೇಳಿದೆ. ಮಧುಸೂದನ್ ನಾಯಕ್ ಶಿಫಾರಸು ಮಾಡಿರುವ ಅಂಶಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎನ್ನುವ ಒತ್ತಡ ಹೇರುವ ಮೂಲಕ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವ ಆಲೋಚ ನೆಯಲ್ಲಿದ್ದಾರೆ. ಏಕೆಂದರೆ, ಜಾತಿ ಗಣತಿ ಜಾರಿಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸಾಹ ತೋರುತ್ತಿಲ್ಲ.
ಆದರೆ ರಾಹುಲ್ ಗಾಂಧಿ ಜಾತಿ ಗಣತಿ ಮಂಡಿಸುವಂತೆ ಈ ಹಿಂದೆಯೇ ಸೂಚನೆ ನೀಡಿದ್ದರು. ಇದೀಗ ಜಾತಿ ಗಣತಿ ಮಂಡಿಸಲು ಒತ್ತಾಯಿಸುವ ಮೂಲಕ ಸಂಪುಟವನ್ನು ಇಕ್ಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರದಲ್ಲಿ ಅಹಿಂದ ನಾಯಕರಿದ್ದಾರೆ ಎನ್ನಲಾಗಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಮೌನ ವಹಿಸಿರುವ ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶಕ್ಕೆ ಹಿಂದಿನ ದಿನ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಮಾತನಾಡಿರುವುದು ಇನ್ನಷ್ಟು ಕುತೂಹಲ ಕ್ಕೆ ಕಾರಣವಾಗಿದೆ.
ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ರಾಜೀನಾಮೆ ನೀಡಲು ಹೇಳಿದರೆ ನೀಡುತ್ತೇನೆ ಎನ್ನುವ ಮಾತನ್ನು ಹಿಂದೆಯೇ ಹೇಳಿದ್ದೆ. ರಾಹುಲ್ ಗಾಂಧಿ ರಾಜೀನಾಮೆ ನೀಡುವಂತೆ ಕೇಳಿದ್ದರಿಂದ ಕೊಟ್ಟೆ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯ ವಿಲ್ಲ ಎನ್ನುವ ಮೂಲಕ ಹೈಕ ಮಾಂಡ್ ಸೂಚನೆ ನೀಡಿದ್ದಕ್ಕೆ ರಾಜೀನಾಮೆ ನೀಡಿದೆ ಎನ್ನುವ ಸಂದೇಶ ರವಾನಿಸಿದರು. ಕೊಟ್ಟ ಮಾತಿನಂತೆ ನಡೆದ ಸರಕಾರ ಯಾವುದಾ ದರೂ ಇದ್ದರೆ ಅದು ಸಿದ್ದರಾಮಯ್ಯ ಅವರ ಸರಕಾರ ಎಂದರು.