ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪೂರ್ವ ಬೆಂಗಳೂರಿನ ವಸತಿ ಪ್ರದೇಶಕ್ಕೆ ಹೊಸ ಮಾನದಂಡ: ವಿಶೇಷತೆಗಳೊಂದಿಗೆ ‘ಮನ ಪ್ರಾಜೆಕ್ಟ್ಸ್’

ಬೆಂಗಳೂರಿನ ಅತಿವೇಗದಲ್ಲಿ ವಿಸ್ತರಣೆಗೊಳ್ಳುತ್ತಿರುವ ಭಾಗದಲ್ಲಿ ಹಸಿರು ಪ್ರದೇಶ, ಯೋಗಕ್ಷೇಮ ಸೌಲಭ್ಯ ಹಾಗೂ ಚಾಣಾಕ್ಷ್ಯ ವಿನ್ಯಾಸದೊಂದಿಗೆ ಮನ ವಿಸ್ತಾ ಸುಸ್ಥಿರ, ಸಮುದಾಯ ಕೇಂದ್ರಿತ ಜೀವಶೈಲಿಯತ್ತ ಬೆಳೆಯುತ್ತಿರುವ ನಗರ ನಿವಾಸ ಆಕಾಂಕ್ಷೆಗಳನ್ನು ಈ ಯೋಜನೆ ಪ್ರತಿಬಿಂಬಿಸು ತ್ತದೆ. ಹಲವು ವಿಶೇಷತೆಗಳೊಂದಿಗೆ ಬೆಂಗಳೂರಿನಲ್ಲಿ ಮನ ವಿಸ್ತಾ ನಿವಾಸಿಗಳ ಆಧುನಿಕ ಬೇಡಿಕೆಗಳನ್ನು ಪೂರೈಸಲಿದೆ.

-ಹಸಿರು ಪ್ರದೇಶ, ಗೌಪ್ಯತೆ ಹಾಗೂ ಅತ್ಯುತ್ತಮ ಸಂಪರ್ಕ ವ್ಯವಸ್ಥೆಯೊಂದಿಗೆ ಆಧುನಿಕ ಜೀವನಶೈಲಿಗೆ ತಕ್ಕಂತೆ ವಿನ್ಯಾಸ-

ಬೆಂಗಳೂರು: ಬೆಂಗಳೂರಿನ ವಿಶ್ವಾಸಾರ್ಹ ರಿಯಲ್‌ಎಸ್ಟೇಟ್‌ ಸಂಸ್ಥೆ ಮನ ಪ್ರಾಜೆಕ್ಟ್ಸ್‌ ಸರ್ಜಾಪುರ ರಸ್ತೆಯ ಗಟ್ಟಹಳ್ಳಿ ಬಳಿ 6 ಎಕರೆ ಪಾರ್ಕ್‌ ಕೇಂದ್ರಿತ ರೆಸಿಡೆನ್ಶಿಯಲ್‌ ಎನ್‌ಕ್ಲೇವ್‌ ‘ ಮನ ವಿಸ್ತಾ’ ನಿರ್ಮಾಣವನ್ನು ಘೋಷಿಸಿದೆ.

ಬೆಂಗಳೂರಿನ ಅತಿವೇಗದಲ್ಲಿ ವಿಸ್ತರಣೆಗೊಳ್ಳುತ್ತಿರುವ ಭಾಗದಲ್ಲಿ ಹಸಿರು ಪ್ರದೇಶ, ಯೋಗಕ್ಷೇಮ ಸೌಲಭ್ಯ ಹಾಗೂ ಚಾಣಾಕ್ಷ್ಯ ವಿನ್ಯಾಸದೊಂದಿಗೆ ಮನ ವಿಸ್ತಾ ಸುಸ್ಥಿರ, ಸಮುದಾಯ ಕೇಂದ್ರಿತ ಜೀವಶೈಲಿಯತ್ತ ಬೆಳೆಯುತ್ತಿರುವ ನಗರ ನಿವಾಸ ಆಕಾಂಕ್ಷೆಗಳನ್ನು ಈ ಯೋಜನೆ ಪ್ರತಿಬಿಂಬಿಸು ತ್ತದೆ. ಹಲವು ವಿಶೇಷತೆಗಳೊಂದಿಗೆ ಬೆಂಗಳೂರಿನಲ್ಲಿ ಮನ ವಿಸ್ತಾ ನಿವಾಸಿಗಳ ಆಧುನಿಕ ಬೇಡಿಕೆಗಳನ್ನು ಪೂರೈಸಲಿದೆ.

ಉತ್ತಮ ವಿನ್ಯಾಸಗಳ ಜತೆ ಪಾರ್ಕ್‌ ಕೇಂದ್ರಿತ ನಿವಾಸ

ಮನ ವಿಸ್ತಾ 3 ಟವರ್‌ ಗಳಲ್ಲಿ 2.5 ಮತ್ತು 3 ಬಿಹೆಚ್‌ಕೆ ಯ 440 ಮನೆಗಳನ್ನು ಹೊಂದಿದ್ದು , ಪ್ರತಿ ಟವರ್‌ ನಲ್ಲಿ 14 ಮಹಡಿಗಳನ್ನು ಹೊಂದಿದೆ. ಈ ಪ್ರಾಜೆಕ್ಟ್‌ ಗೌಪ್ಯತೆಗೆ ಆದ್ಯತೆ ನೀಡಿದ್ದು ಪ್ರತಿ ಮನೆಗೂ ಪ್ರತ್ಯೇಕ ಗೋಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜತೆಗೆ ಬಹುತೇಕ ಮನೆಗಳಿಗೆ 180 ಡಿಗ್ರಿ ಲೇಕ್‌ವ್ಯೂವ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಮುದಾಯ ಮಧ್ಯದಲ್ಲಿ ಗ್ಯ್ರಾಂಡ್‌ ಪಾರ್ಕ್‌ ನಿರ್ಮಿಸಲಾಗಿದ್ದು , ಉತ್ತಮ ನೆರಳು ಪಡೆಯುವ ವಾಕ್‌ವೇ, ಚಟುವಟಿಕೆ ಪ್ರದೇಶ ಹಾಗೂ ಸಾಮಾಜಿಕ ಸಂವಹನ ಮತ್ತು ಆರಾಮಕ್ಕೆ ತಕ್ಕಂತಹ ವಾತಾವರಣವನ್ನೂ ಸೃಷ್ಟಿಸಲಾಗಿದೆ. ಈ ಪ್ರದೇಶದಲ್ಲಿ ನೈಸರ್ಗಿಕ ವಸ್ತುಗಳು ಮತ್ತು ವಾಸ್ತುಶಿಲ್ಪ ರಚನೆಯನ್ನು ಸಮವಾಗಿ ಹೊಂದಿಸ ಲಾಗಿದ್ದು ನೆಮ್ಮದಿಯಾದ ಮತ್ತು ಆರೋಗ್ಯಕರವಾದ ಜೀವನಕ್ಕೆ ಕೊಡುಗೆ ನೀಡುವಂತೆ ರಚಿಸಲಾಗಿದೆ.

ಮನ ವಿಸ್ತಾ ಯೋಜನೆ ಬಗ್ಗೆ ಮಾತನಾಡಿದ ಮನ ಪ್ರಾಜೆಕ್ಟ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಡಿ. ಕಿಶೋರ್‍ ರೆಡ್ಡಿ, “ಮನ ವಿಸ್ತಾವನ್ನು ನಾವು ರೆಸಿಡೆನ್ಶಿಯಲ್‌ ಪ್ರಾಜೆಕ್ಟ್‌ಗೂ ಮೀರಿ ವಿನ್ಯಾಸಗೊಳಿಸಿದ್ದೇವೆ – ಇದೊಂದು ಪ್ರಕೃತಿ ಮತ್ತು ಸ್ಮಾರ್ಟ್‌ ವಿನ್ಯಾಸ ಜೊತೆಯಾಗಿ ನಿತ್ಯದ ಜೀವನವನ್ನು ಉತ್ತಮಗೊಳಿಸಿದ ಪ್ರದೇಶ. ನಮ್ಮ ಪಾರ್ಕ್‌ ಕೇಂದ್ರಿತ ಯೋಜನೆ ಗ್ರೀನ್‌ ಜೋನ್‌ ಮತ್ತು ವೆಲ್‌ನೆಸ್‌ ( ಯೋಜಕ್ಷೇಮ) ಸೌಲಭ್ಯವನ್ನು ಒಂದುಗೂಡಿಸುತ್ತದೆ. ನಮ್ಮ ಗಮನವು ಜಾಗದ ಸದ್ಬಳಕೆ, ನಿವಾಸಿಗಳಿಗೆ ಹೆಚ್ಚಿನ ಆರಾಮ, ಗೌಪ್ಯತೆ ಹಾಗೂ ಅಧಿಕ ಸೌಲಭ್ಯಗಳನ್ನು ಕಲ್ಪಿಸುವತ್ತ ಕೇಂದ್ರೀಕರಿಸಿದೆ. ಮನ ವಿಸ್ತಾ ಪೂರ್ವ ಬೆಂಗಳೂರಿನಲ್ಲಿ ಸಮತೋಲಿತ ಜೀವನಕ್ಕೆ ನೆರವಾಗುವ ಸಾಮರಸ್ಯದ , ಭವಿಷ್ಯದ ಮನೆ ನಿರ್ಮಾಣ ಮಾಡುವ ನಮ್ಮ ಬದ್ದತೆಯನ್ನು ಪ್ರತಿನಿಧಿಸುತ್ತದೆ” ಎಂದರು.

ಸೌಲಭ್ಯಗಳು ಮತ್ತು ಪ್ರಯೋಜನಗಳು

ಯುವ ವೃತ್ತಿಪರರು , ಕುಟುಂಬಸ್ಥರು ಹಾಗೂ ಹಿರಿಯ ನಾಗರಿಕರು ಸೇರಿ ಎಲ್ಲಾ ಸಮುದಾಯಗಳಿಗೆ ದೈನಂದಿನ ಜೀವನವನ್ನು ಉತ್ತಮಗೊಳಿಸುವ ಸೌಲಭ್ಯಗಳನ್ನು ಸಾಕಷ್ಟು ಚಿಂತಿಸಿ ನಿರ್ಮಸ ಲಾಗಿದೆ. ಬಹುಮುಖ್ಯವಾಗಿ ಸೂಪರ್‍ ಮಾರ್ಕೆಟ್, ಡೇ ಕೇರ್‍, ಸಲೂನ್‌ ಮತ್ತು ಸ್ಪಾ, ಜಿಮ್‌, ಬಾಡ್‌ಮಿಂಟನ್‌, ಬಿಲ್ಲಿಯಾರ್ಡ್ಸ್‌, ಟೇಬಲ್‌ ಟೆನ್ನಿಸ್‌, ಬಹುಪಯೋಗಿ ಹಾಲ್‌ ಮತ್ತು ರೂಫ್‌ಟಾಪ್‌ ಸ್ವಿಮ್ಮಿಂಗ್‌ ಪೂಲ್‌ ಹೊಂದಿರುವ 25 ಸಾವಿರ ಚದರ್‍ ಅಡಿ ಯಲ್ಲಿ ಬಹು ಮಹಡಿ ಕ್ಲಬ್‌ ಹೌಸ್‌ ನಿರ್ಮಾಣ. ಈ ಪ್ರದೇಶದಲ್ಲಿ ವಾಹನ ರಹಿತ ವಲಯ, ಮಕ್ಕಳು ಮತ್ತು ಹಿರಿಯರಿಗೆ ಸುರಕ್ಷಿತವಾದ ಪಾದಚಾರಿ ಮಾರ್ಗ ಕೂಡ ಅಳವಡಿಸಲಾಗಿದೆ. ಸುಸ್ಥಿರ ವ್ಯವಸ್ಥೆಗಳಾದ ಆಧುನಿಕ ಮಳೆ ನೀರು ಶೇಖರಣೆ , ಉತ್ತಮವಾದ ನೀರು ಸಂಸ್ಕರಣಾ ಘಟಕ, ಇವಿ ಚಾರ್ಜಿಂಗ್‌ ವ್ಯವಸ್ಥೆ ಮತ್ತು ವಿವಿಧ ಮೂಲಗಳಿಂದ ಅವಲಂಬಿಸಬಹುದಾದ ನೀರು ಸರಬರಾಜು ವ್ಯವಸ್ಥೆ ಕೂಡ ನಿರ್ಮಿಸಲಾಗಿದೆ. ಇದು ಜವಬ್ದಾರಿಯುತ ಜೀವನದೆಡೆಗಿನ ಬದ್ದತೆಯನ್ನು ತಿಳಿಸುತ್ತದೆ.

ಸಂಪರ್ಕ ಮತ್ತು ಬೆಳವಣಿಗೆ ಸಾಮರ್ಥ್ಯ

ಸರ್ಜಾಪುರ ರಸ್ತೆಯ ಗಟ್ಟಹಳ್ಳಿ ಬಳಿಯ ಮನ ವಿಸ್ತಾ ಪ್ರಮುಖ ಪ್ರದೇಶಗಳಾದ ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ ಮತ್ತು ಹೊರ ವರ್ತುಲ ರಸ್ತೆಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಸರ್ಜಾಪುರ ರಸ್ತೆ ಮೂಲಸೌಕರ್ಯ, ರೆಸಿಡೆನ್ಶಿಯಲ್‌ ಮತ್ತು ಕಮರ್ಶಿಯಲ್‌ ಅಭಿವೃದ್ದಿ ಹಾಗೂ ಮುಂಬರಲಿರುವ ಹೆಬ್ಬಾಳ- ಸರ್ಜಾಪುರ ಮೆಟ್ರೊ ವಿಸ್ತರಣೆಯಿಂದ ಅತಿವೇಗದಲ್ಲಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಈ ಬೆಳವಣಿಗೆ, ಶಿಕ್ಷಣ ಸಂಸ್ಥೆ ಮತ್ತು ಆರೋಗ್ಯ ಸೇವೆ ಸೌಕರ್ಯಗಳ ಜೊತೆ ಸೇರಿ ಆ ಭಾಗದಲ್ಲಿ ಆಸ್ತಿ ಮೌಲ್ಯ , ಬಾಡಿಗೆ ನಿವಾಸಗಳ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಇವೆಲ್ಲ ಕಾರಣಗಳಿಂದ ಮನ ವಿಸ್ತಾ ಆಧುನಿಕ ನಗರ ಕುಟುಂಬಗಳಿಗೆ ಅನುಕೂಲಕರ, ದೀರ್ಘಕಾಲೀನ ಮೌಲ್ಯಯುಳ್ಳ ಭವಿಷ್ಯ ಸಿದ್ಧ ಜೀವನಕ್ಕೆ ನೆರವಾಗುವ ನಿವಾಸಗಳಿಗೆ ಉತ್ತಮ ಆಯ್ಕೆಯಾಗಿ ಮಹತ್ವ ಪಡೆದುಕೊಂಡಿದೆ.