ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಿರಿಯ ನಾಗರಿಕರ ಆರೈಕೆಗೆ ಅನ್ವಯ ಹೊಸ ಹೆಜ್ಜೆ: 10ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮೂರು ಹೊಸ ಸೇವೆಗಳು ಬಿಡುಗಡೆ

ಕಳೆದ ದಶಕದಿಂದ ದೇಶದ 38ಕ್ಕೂ ಹೆಚ್ಚು ನಗರಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು, ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಹಿರಿಯ ನಾಗರಿಕರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಕ್ಯುರಾಪಾಡ್, 3000 ಬಿಸಿ ಥೆರಾಪ್ಯೂಟಿಕ್ಸ್ ಮತ್ತು ಪುಣ್ಯಕ ಎಂಬ ಹೊಸ ಸೇವೆಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ದೇಶದ ಹಿರಿಯ ನಾಗರಿಕರ ಆರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅನ್ವಯ ಕಿನ್ ಕೇರ್ ಸಂಸ್ಥೆಯು ತನ್ನ ಯಶಸ್ವಿ 10ನೇ ವಾರ್ಷಿಕೋತ್ಸವದ ಸಂಭ್ರಮದ ನೆನಪಿಗಾಗಿ ಕೃತಜ್ಞ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಿರುವ ಮೂರು ಹೊಸ ಪ್ರಮುಖ ಸೇವೆಗಳನ್ನು ಲೋಕಾರ್ಪಣೆಗೊಳಿಸಿದೆ.

ಕಳೆದ ದಶಕದಿಂದ ದೇಶದ 38ಕ್ಕೂ ಹೆಚ್ಚು ನಗರಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು, ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಹಿರಿಯ ನಾಗರಿಕರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಕ್ಯುರಾಪಾಡ್, 3000 ಬಿಸಿ ಥೆರಾಪ್ಯೂಟಿಕ್ಸ್ ಮತ್ತು ಪುಣ್ಯಕ ಎಂಬ ಹೊಸ ಸೇವೆಗಳನ್ನು ಬಿಡುಗಡೆ ಮಾಡಿದೆ.

ವಿಶೇಷವಾಗಿ ಈ ಸಂದರ್ಭದಲ್ಲಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶೌರ್ಯ ಪ್ರಶಸ್ತಿ (ಪರಮ ವೀರ ಚಕ್ರ, ವೀರ ಚಕ್ರ, ಸೇನಾ ಪದಕ) ಹಾಗೂ ಪದ್ಮಶ್ರೀ ಪುರಸ್ಕೃತರ ಕುಟುಂಬಗಳಿಗೆ ಅನ್ವಯ ಸಂಸ್ಥೆಯು ಜೀವಮಾನದ ಉಚಿತ ತುರ್ತು ಸ್ಪಂದನ ವ್ಯವಸ್ಥೆ ಹಾಗೂ ಹಿರಿಯ ನಾಗರಿಕರ ಸ್ಮಾರ್ಟ್‌ ವಾಚ್ ಸೇವೆಯನ್ನು ಕೊಡುಗೆಯಾಗಿ ಒದಗಿಸುವುದಾಗಿ ಘೋಷಿಸಿದೆ. ವಯಸ್ಸಾದ ಕಾಲದಲ್ಲಿ ದೇಶದ ಈ ಮಹಾನ್ ಸಾಧಕರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಒಂಟಿಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತಳೆಯಲಾಗಿದೆ.

ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್

ಈ ಸಂದರ್ಭದಲ್ಲಿ ಮಾತನಾಡಿದ ಅನ್ವಯ ಕಿನ್ ಕೇರ್ ನ ಸಂಸ್ಥಾಪಕರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ರೆಡ್ಡಿ ಅವರು, "ಮಕ್ಕಳಿಂದ ದೂರವಿದ್ದು ಒಂಟಿಯಾಗಿ ವಾಸಿಸುವ ದೇಶದ ಲಕ್ಷಾಂತರ ಪೋಷಕರ ಭೀತಿ ಮತ್ತು ಆತಂಕಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 10 ವರ್ಷಗಳ ಹಿಂದೆ ಅನ್ವಯ ಶುರುವಾಯಿತು. ಇಂದು ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿಯ ನಿದ್ರೆ ನೀಡಿದ್ದೇವೆ ಎಂಬ ತೃಪ್ತಿ ನಮಗಿದೆ. ಈ ಹೊಸ ಮೂರು ಸೇವೆಗಳು ಜೇಷ್ಠ ನಾಗರಿಕರ ನೋವು, ಆರೋಗ್ಯ ಮತ್ತು ನಂಬಿಕೆಯನ್ನು ನೇರವಾಗಿ ತಲುಪುವ ಸಣ್ಣ ಪ್ರಯತ್ನ" ಎಂದು ಹೇಳಿದರು.

ಈ ವಿಶೇಷ ಸಂಭ್ರಮಾಚರಣೆಯಲ್ಲಿ ಖ್ಯಾತ ಚಲನಚಿತ್ರ ನಟ ಪದ್ಮಶ್ರೀ ಬ್ರಹ್ಮಾನಂದಂ, ತೆಲಂಗಾಣ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್, ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ಕೆ. ಜೋಶಿ, ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮಹೇಂದರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಸಂಸ್ಥೆಯ ಹಿರಿಯ ಸದಸ್ಯರು ನಡೆಸಿಕೊಟ್ಟ ಆತ್ಮವಿಶ್ವಾಸದ ರ‍್ಯಾಂಪ್ ವಾಕ್ ಪ್ರದರ್ಶನ ಸಭಿಕರ ಮನ ಗೆದ್ದಿತು.

Anvayaa Kritagnya 1 ಒಕ

ಹಿರಿಯ ನಾಗರಿಕರಿಗಾಗಿ ಮೂರು ಹೊಸ ಡಿಜಿಟಲ್ ಸೇವೆಗಳು:

ಕ್ಯುರಾಪಾಡ್:

ಇದು ಧರಿಸಬಹುದಾದ ಸಣ್ಣ ಗಾತ್ರದ ನೋವು ನಿವಾರಕ ಸಾಧನವಾಗಿದ್ದು, ಕೆಂಪು ಮತ್ತು ಇನ್ಫ್ರಾರೆಡ್ ಬೆಳಕಿನ ಚಿಕಿತ್ಸೆಯ ಮೂಲಕ ಜೇಷ್ಠ ನಾಗರಿಕರ ಕೀಲು ಮತ್ತು ಸ್ನಾಯು ನೋವನ್ನು ಮನೆಯಲ್ಲೇ ಶಮನಗೊಳಿಸಲು ನೆರವಾಗುತ್ತದೆ.

3000 ಬಿಸಿ ಥೆರಾಪ್ಯೂಟಿಕ್ಸ್:

ಹಿರಿಯ ನಾಗರಿಕರ ದೈಹಿಕ ಶಕ್ತಿ ಮತ್ತು ಆರೋಗ್ಯವನ್ನು ಸುಧಾರಿಸುವ ಚಿಕಿತ್ಸಾತ್ಮಕ ಹಾಗೂ ನೈಸರ್ಗಿಕ ಆರೈಕೆಯ ಉತ್ಪನ್ನಗಳನ್ನು ಈ ಸೌಲಭ್ಯ ಒಳಗೊಂಡಿದೆ.

ಪುಣ್ಯಕ:

ವಯೋಸಹಜ ಕಾರಣಗಳಿಂದ ದೇವಾಲಯಗಳಿಗೆ ತೆರಳಲು ಸಾಧ್ಯವಾಗದ ಹಿರಿಯರಿಗಾಗಿ ಆನ್‌ ಲೈನ್ ಪೂಜೆ, ದೇವಾಲಯಗಳ ದರ್ಶನ ಕಾಯ್ದಿರಿಸುವಿಕೆ, ಮನೆಗೇ ಅರ್ಚಕರನ್ನು ಆಹ್ವಾನಿ ಸುವುದು ಹಾಗೂ ಮನೆಬಾಗಿಲಿಗೆ ಪ್ರಸಾದ ತಲುಪಿಸುವ ಆಧ್ಯಾತ್ಮಿಕ ವೇದಿಕೆ ಇದಾಗಿದೆ.

10 ವರ್ಷಗಳ ಸಾಧನೆ

ಅನ್ವಯ ಕಿನ್ ಕೇರ್ ಸಂಸ್ಥೆಯು ಕಳೆದ 10 ವರ್ಷಗಳಲ್ಲಿ ಭಾರತದ ಹಿರಿಯ ನಾಗರಿಕರ ಆರೈಕೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. 38 ನಗರಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಸಕ್ರಿಯ ಹಿರಿಯ ನಾಗರಿಕರಿಗೆ ಸೇವೆ ನೀಡಲಾಗಿದ್ದು, ಮನೆಗಳಲ್ಲೇ 80 ಲಕ್ಷಕ್ಕೂ ಹೆಚ್ಚು ಗಂಟೆಗಳ ಆರೈಕೆ ಒದಗಿಸಲಾಗಿದೆ. ಆರೈಕೆ ಕ್ಷೇತ್ರದಲ್ಲಿ 15,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಹಾಗೂ 2 ಲಕ್ಷಕ್ಕೂ ಹೆಚ್ಚು ಸಾಂತ್ವನ ಭೇಟಿಗಳನ್ನು ಪೂರ್ಣಗೊಳಿಸಲಾಗಿದೆ. 5,000ಕ್ಕೂ ಹೆಚ್ಚು ವೈದ್ಯ ಕೀಯ ತುರ್ತು ಪರಿಸ್ಥಿತಿಗಳನ್ನು ಶೇ. 97 ರಷ್ಟು ಜೀವರಕ್ಷಣೆಯ ದಾಖಲೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ನಿರಂತರ ಆರೈಕೆಯಿಂದಾಗಿ ಹಿರಿಯರ ಮರು-ಆಸ್ಪತ್ರೆ ದಾಖಲಾತಿಯಲ್ಲಿ ಶೇ. 40 ಕಡಿತವಾಗಿದೆ. ಆರೈಕೆದಾರರು ಸದಾ ಜೊತೆಗಿರುವುದರಿಂದ ಶೂನ್ಯ ರಸ್ತೆ ಅಪಘಾತಗಳ ದಾಖಲೆ ಸಾಲಿಗೆ ಸೇರಿದೆ. ಶೇ. 35 ರಷ್ಟು ಸದಸ್ಯರು ತಮ್ಮ ವೃದ್ಧ ಪೋಷಕರಿದ್ದ ನಗರಗಳಿಗೆ ತುರ್ತು ಪ್ರಯಾಣ ಬೆಳೆಸುವುದು ತಪ್ಪಿದೆ.