ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pravasi Prapancha : ವಾರವಿಡೀ ಓದಬಹುದಾದ ಸಮೃದ್ಧ ಪ್ರವಾಸಿ ಸಂಚಿಕೆ ಓದುಗರ ಕೈಗೆ: ಪ್ರವಾಸಿ ಪ್ರಪಂಚ ಇಂದು ಲೋಕಾರ್ಪಣೆ

ಪ್ರವಾಸಿ ಪ್ರಪಂಚವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಫ್ಕೆಸಿಸಿಐ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಲೋಕಾರ್ಪಣೆ‌ ಮಾಡಲಿದ್ದಾರೆ. ಪ್ರವಾಸಿ ಪ್ರಪಂಚದ ಮುದ್ರಣ ಆವೃತ್ತಿಯನ್ನು ಸಿಎಂ ಬಿಡುಗಡೆ ಮಾಡಿದರೆ, ವೆಬ್‌ಸೈಟ್ ಅನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಲೋಕಾರ್ಪಣೆ ಮಾಡಲಿದ್ದಾರೆ.

ವಿಶ್ವವಾಣಿ ಸಮೂಹದ ಸಾಹಸ ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆ ಜೂನ್ 4ರಂದು ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಪ್ರವಾಸೋದ್ಯಮದ ವಿವಿಧ ಮಜಲುಗಳನ್ನು ಕನ್ನಡಿಗರ ಮನೆಮನೆಗೆ ಉದ್ದೇಶದೊಂದಿಗೆ ತಲುಪಿಸುವ ಈ ವಾರಪತ್ರಿಕೆ ರೂಪುಗೊಂಡಿದೆ.

ಪ್ರವಾಸಿ ಪ್ರಪಂಚವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಫ್ಕೆಸಿಸಿಐ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಲೋಕಾರ್ಪಣೆ‌ ಮಾಡಲಿದ್ದಾರೆ. ಪ್ರವಾಸಿ ಪ್ರಪಂಚದ ಮುದ್ರಣ ಆವೃತ್ತಿಯನ್ನು ಸಿಎಂ ಬಿಡುಗಡೆ ಮಾಡಿದರೆ, ವೆಬ್‌ಸೈಟ್ ಅನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಡಿಜಿಟಲ್ ಚಾನೆಲ್‌ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಚಾಲನೆ ನೀಡಲಿದ್ದಾರೆ. ಸೋಶಿಯಲ್ ಮೀಡಿಯಾಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ಈ ವೇಳೆ ನಟ ಡಾಲಿ ಧನಂಜಯ, ಜಂಗಲ್ ಲಾಡ್ಜ್ಸ್ ಮತ್ತು ರೆಸಾಟ್ಸ ಅಧ್ಯಕ್ಷ ಅನಿಲ್ ಚಿಕ್ಕಮಾದು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Pravasi Prapancha: ವಿಶ್ವವಾಣಿ ಸಮೂಹದ ʼಪ್ರವಾಸಿ ಪ್ರಪಂಚʼ; ಜೂ. 4ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ

ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ಹೊರಬರಲಿರುವ ‘ಪ್ರವಾಸಿ ಪ್ರಪಂಚ’ದ ಕಾರ್ಯ ನಿರ್ವಾಹಕ ಸಂಪಾದಕರಾಗಿ ನವೀನ್ ಸಾಗರ್ ಕಾರ್ಯನಿರ್ವಹಿಸಲಿದ್ದಾರೆ. ವಿಶ್ವವಾಣಿ ದಿನಪತ್ರಿಕೆ, ಲೋಕಧ್ವನಿ ದಿನಪತ್ರಿಕೆ, ವಿಶ್ವವಾಣಿ ಟಿವಿ ವಾಹಿನಿ, ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್, ವಿಶ್ವವಾಣಿ ಮಾಧ್ಯಮ‌ ವಿದ್ಯಾಪೀಠ, ವಿಶ್ವವಾಣಿ ಪುಸ್ತಕ ಪ್ರಕಾಶನಗಳು ಈಗಾಗಲೇ ವಿಶ್ವವಾಣಿ ಸಮೂಹದಲ್ಲಿವೆ.

ಈಗಾಗಲೇ ಪ್ರವಾಸಿ ಪ್ರಪಂಚದ ಟೈಟಲ್ ಅನ್ನು ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಸಚಿವೆ, ಹಿರಿಯ ನಟಿ ಜಯಮಾಲಾ, ನಟ ವಸಿಷ್ಠ ಸಿಂಹ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.

ಪ್ರವಾಸಿ ಪ್ರಪಂಚದಲ್ಲಿ ಏನಿರುತ್ತದೆ?

ಪ್ರವಾಸಿ ಪ್ರಪಂಚ ವಾರಕ್ಕೊಮ್ಮೆ ಪ್ರತಿ ಶನಿವಾರ ಪ್ರಕಟವಾಗಲಿದೆ. ಬ್ರಾಡ್ ಶೀಟ್ ಆಕಾರದಲ್ಲಿ ಕನಿಷ್ಠ 16 ಪುಟಗಳೊಂದಿಗೆ ಮುದ್ರಣ ಆವೃತ್ತಿ ಬರಲಿದ್ದು, ರಾಜ್ಯ-ದೇಶ-ವಿದೇಶಗಳ ಪ್ರವಾಸಿ ತಾಣಗಳ ಸೊಗಸಾದ ಸಚಿತ್ರ ಪರಿಚಯ, ಅಲ್ಲಿಗೆ ತಲುಪುವ ಬಗೆ, ಪ್ರವಾಸಿಗರ ಅನುಭವ, ಕಡಿಮೆ ಬಜೆಟ್‌ನ ಟೂರ್ ಪ್ಲಾನಿಂಗ್, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಒಳಗೊಳ್ಳಲಿದೆ.

ಇದು ವೆಬ್ ಸೈಟ್, ಡಿಜಿಟಲ್ ಚಾನೆಲ್ ಸ್ವರೂಪಗಳಲ್ಲೂ ಪ್ರಕಟವಾಗಲಿದ್ದು, ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಅನ್ನೂ ಹೊಂದಿರಲಿದೆ. ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಸುದ್ದಿ, ಅಂಕಣ, ಪ್ರವಾಸ ಕಥನ, ಪ್ರವಾಸ ಪುಸ್ತಕ ವಿಮರ್ಶೆ, ಪ್ರವಾಸಿ ತಾಣ ಪರಿಚಯ ಸೇರಿದಂತೆ ಇನ್ನೂ ಹತ್ತಾರು ಆಸಕ್ತಿದಾಯಕ, ಸ್ವಾರಸ್ಯಪೂರ್ಣ ಮಾಹಿತಿ ಗಳನ್ನು ಪ್ರವಾಸಿ ಪ್ರಪಂಚ ಹೊಂದಿರಲಿದೆ.

ಒಂದು ವಾರವಿಡೀ ಓದಬಹುದಾದ ಸಮೃದ್ಧ ಹೂರಣವಿರುತ್ತದೆ. ಇದಕ್ಕೆ ಓದುಗರೂ ಬರೆಯ ಬಹುದು ಹಾಗೂ ತಾವು ಭೇಟಿ ನೀಡಿದ ತಾಣದ ಕುರಿತ ಲೇಖನ, ಚಿತ್ರ, ವಿಡಿಯೋಗಳನ್ನೂ ಕಳಿಸಬಹುದು.