ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ವೇದವಿಜ್ಞಾನ ಶೋಧ ಸಂಸ್ಥಾನ ಹಾಗೂ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ನೆರವಿ ನೊಂದಿಗೆ ಭಾರತೀಯ ಅನುಸಂಧಾನ ಪದ್ದತಿ ಎಂಬ ಏಳು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರ ಸಂಸ್ಕೃತ ವಿವಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಸಂಸ್ಕೃತ ಶಾಸ್ತ್ರಗಳಲ್ಲಿ ಹಾಗೂ ಭಾರತೀಯ ವಾಹ್ಮಯದಲ್ಲಿ ಅನುಸಂಧಾನದ ಗುಣಮಟ್ಟ ವೃದ್ಧಿಸುವ ಹಿನ್ನೆಲೆಯಲ್ಲಿ ದೇಶದ ಅನೇಕ ಭಾಗಗಳಿಂದ ನಾನಾ ಶಾಸ್ತ್ರಗಳಲ್ಲಿ ಪರಿಣತರಾದ 70ಕ್ಕೂ ಅಧಿಕ ವಿದ್ವಾಂಸರು ವ್ಯಾಕರಣ, ವೇದಾಂತ, ನ್ಯಾಯ ಮತ್ತಿತರೆ ವಿಚಾರಗಳ ಬಗ್ಗೆ ಗಹನವಾಗಿ ಚರ್ಚಿಸಿದರು.
ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್
ಪುರಾತನ ಕಾಲದಿಂದಲೂ ಭಾರತೀಯ ಅನುಸಂಧಾನ ಮತ್ತು ಗ್ರಂಥಸಂರಚನಾ ಪದ್ದತಿಯು ವಿಶಿಷ್ಟವಾಗಿದ್ದು, ಸ್ವಯಂ ಪೂರ್ಣವಾಗಿ ಬೆಳೆದುಬಂದಿದೆ. ಹಾಗಾಗಿ ಭಾರತೀಯ ಅನುಸಂಧಾನ ಪ್ರವಿಧಿಯು ತನ್ನ ಪರಂಪರೆ, ಶೋಧಸಾಮಗ್ರಿ, ತಂತ್ರ, ರೀತಿ, ಶೈಲಿಗಳು ವಿಭಿನ್ನತೆಯಿಂದ ಕೂಡಿದ್ದು, ಇವುಗಳ ಆಧಾರದ ಮೇಲೆ ವೈಜ್ಞಾನಿಕವಾದ, ಭಾರತೀಯತೆಯಿಂದ ಕೂಡಿದ ಅನುಸಂಧಾನ ಪ್ರವಿಧಿಯನ್ನು ರಚಿಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.
ಹಳೆಯ ಮತ್ತು ಪ್ರಕೃತವಾದ ಶಾಸ್ತ್ರಪದ್ಧತಿಗಳನ್ನು ಭಾರತೀಯತೆಯ ಸೊಗಡಿನೊಂದಿಗೆ ಇಂದಿನ ಶೋಧ ಸಂರಚನೆಗೆ ಅನುಕೂಲವಾಗುವ ಪ್ರವಿಧಿಗಳನ್ನು ಸಂಕಲಿಸುವುದು. ಅಗತ್ಯವಾದ ಮಾಹಿತಿ ಗಳನ್ನು ಚರ್ಚಿಸಿ ಸಂಯೋಜಿಸುವ, ಮೀಮಾಂಸಾ, ಶಿಕ್ಷಾಶಾಸ್ತ್ರಿ ಮತ್ತು ಸಾಹಿತ್ಯ ಮುಂತಾದ ಶಾಸ್ತ್ರ ಗಳಲ್ಲಿನ ಅನುಸಂಧಾನ ಪದ್ಧತಿಗಳನ್ನು ಗಮನಿಸಿ, ಸಂಗ್ರಹಿಸುವುದು. ಪದ್ಧತಿಗಳನ್ನು ವಿಚಾರ ಮಾಡುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಕಾರ್ಯಾಗಾರ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಹಲ್ಯಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ರಾಮಚಂದ್ರ ಜಿ. ಭಟ್, ಪ್ರೊ.ವ್ರಜಭೂಷಣ ಓಜ್ಜಾ, ಕುಲಸಚಿವ ಪ್ರೊ. ವಿ ಗಿರೀಶ್ಚಂದ್ರ, ಪ್ರೊ. ಶಿವಾನಿ ವಿ, ಡಾ. ಭಾಸ್ಕರ ಭಟ್ ಜೋಶಿ ಮತ್ತಿತರರು ಭಾಗವಹಿಸಿದ್ದರು.