ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉತ್ತರ ಕರ್ನಾಟಕಕ್ಕೆ ಸಾವಿರ ಎಕರೆ ಕೈಗಾರಿಕಾ ಪಾರ್ಕ್

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಬೆಳಗಾಗಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ‘ಕೈಗಾರಿಕಾ ಪಾರ್ಕ್’ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್ ಪ್ರಸ್ತಾವನೆಯಲ್ಲಿ ಘೋಷಿಸಿದ್ದಾರೆ.

ಧಾರವಾಡ ಕೈಗಾರಿಕಾ ನೋಡ್‌ಗೆ ಸಾವಿರ ಎಕರೆ ಭೂಮಿ-75 ಸಾವಿರ ಉದ್ಯೋಗ ಸೃಷ್ಟಿ

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಬೆಳಗಾಗಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ‘ಕೈಗಾರಿಕಾ ಪಾರ್ಕ್’ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್ ಪ್ರಸ್ತಾವನೆಯಲ್ಲಿ ಘೋಷಿಸಿದ್ದಾರೆ.

‘ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್’(ಬಿಎಂಐಸಿ) ಯೋಜನೆಯಡಿ 30 ಸಾವಿರ ಕೋಟಿ ರು.ಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಆ ಮೂಲಕ ರಾಜ್ಯದಲ್ಲಿ 75 ಸಾವಿರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಧಾರವಾಡ ನಗರದಿಂದ ವಾಯುವ್ಯ ದಿಕ್ಕಿನಲ್ಲಿ 23 ಕಿಮೀ ದೂರದಲ್ಲಿರುವ ದುರ್ಗದಕೇರಿ-ಕಿತ್ತೂರು-ದೊಂಬಾರಕೊಪ ಗ್ರಾಮಗಳ ಬಳಿ ‘ಧಾರವಾಡ ಕೈಗಾರಿಕಾ ನೋಡ್’ಗಾಗಿ 1 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 600 ಕೋಟಿ ರು. ಅನುದಾನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಅದಕ್ಕಾಗಿ 200 ಕೋಟಿ ರು. ಮೀಸಲಿಡಲಾಗಿದೆ.

ಇದನ್ನೂ ಓದಿ: Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ: ಅಡಿಗಾಸ್‌ ಯಾತ್ರಾ ಸ್ವಾಗತ

ಎಂಎಸ್‌ಎಂಇ ಉತ್ತೇಜನ: ‘ಎಂಎಸ್‌ಎಂಇ’ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ‘ಕೆಎಸ್ಎಸ್‌ಐಡಿಸಿ’ ಮೂಲಕ ಹಲವು ಜಿಲ್ಲೆಗಳಲ್ಲಿ 8 ಕೈಗಾರಿಕಾ ವಸಾಹತುಗಳ ಅಭಿವೃದ್ಧಿ. 2026-27ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಬಳ್ಳಾರಿಯ ಕಂಪ್ಲಿಯಲ್ಲಿ ಹೊಸದಾಗಿ 2 ಕೈಗಾರಿಕಾ ವಸಾಹತು ಆರಂಭ. ಅಲ್ಲದೇ, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 10 ಕೈಗಾರಿಕಾ ವಸಾಹತುಗಳಲ್ಲಿ 1500 ಕೈಗಾರಿಕಾ ನಿವೇಶನಗಳ ವಿತರಣೆ ಮಾಡಲಾಗುವುದು.

ಜವಳಿ ಪಾರ್ಕ್: ಕಲಬುರಗಿಯಲ್ಲಿನ ‘ಪಿಎಂ ಮಿತ್ರ ಬೃಹತ್ ಜವಳಿ ಪಾರ್ಕ್’ಗೆ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರಕಾರ 390 ಕೋಟಿ ರು. ಅನುದಾನ ನೀಡಲಿದೆ. ಅದರಲ್ಲಿ 75 ಕೋಟಿ ರು.ಗಳನ್ನು 2026-27ರಲ್ಲಿ ನೀಡಲಾಗುತ್ತದೆ.

ಎಂಎಸ್‌ಇ-ಸಿಡಿಪಿ ಹತ್ತು ಕ್ಲಸ್ಟರ್

ಸೂಕ್ಷ್ಮ-ಸಣ್ಣ- ಮಧ್ಯಮ ಗಾತ್ರದ ಉದ್ಯಮ (ಎಂಎಸ್‌ಎಂಇ) ಸಂಸ್ಥೆಗಳಿಗೆ ಪ್ರೋತ್ಸಾಹ ಮತ್ತು ಉದ್ಯೋಗ ಸೃಷ್ಟಿಗಾಗಿ ‘ಎಂಎಸ್‌ಇ-ಸಿಡಿಪಿ’ ಅಡಿಯಲ್ಲಿ 2026ರಲ್ಲಿ 15 ಕೋಟಿ ರು. ವೆಚ್ಚದಲ್ಲಿ 10 ಕ್ಲಸ್ಟರ್‌ಗಳ ಸ್ಥಾಪನೆ.