ಜಪಾನ್ ಯುವತಿ ಬಾಯಲ್ಲಿ ಸಿರಿಗನ್ನಡ ಕೇಳಿ ಕನ್ನಡಿಗರು ಫುಲ್ ಖುಷ್; ವಿಡಿಯೊ ನೋಡಿ
Viral Video: ಬೆಂಗಳೂರಿನಲ್ಲಿ ಎಲ್ಲ ಹೊಂದಾಣಿಕೆಯಾದರೂ ಭಾಷೆ ವಿಚಾರಕ್ಕಾಗಿ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಕನ್ನಡ ಮಾತನಾಡುವ ವಿಚಾರಕ್ಕೆ ಅಸಮಾಧಾನ ಹೊಂದಿ ಸ್ಥಳೀಯರೊಂದಿಗೆ ಪರಭಾಷಿಕರು ವಾಗ್ವಾದ ನಡೆಸಿದ ಅನೇಕ ಘಟನೆ ನಡೆದಿವೆ. ಆದರೆ ಇದೀಗ ಬೆಂಗಳೂರಿನಲ್ಲಿ ವಾಸಿಸುವ ಜಪಾನ್‌ನ ಮಹಿಳೆಯೊಬ್ಬರು ಕನ್ನಡ ಭಾಷೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ವೇದಿಕೆಯ ಮೇಲೆ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ವಿಡಿಯೊ ವೈರಲ್ ಆಗಿದೆ.
ಕನ್ನಡದಲ್ಲಿ ಮಾತನಾಡಿದ ಜಪಾನ್ ಯುವತಿ -
ಬೆಂಗಳೂರು, ಜ. 13: ಇತ್ತೀಚಿನ ದಿನದಲ್ಲಿ ಕೆಲಸ ಅರಸಿ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶದಿಂದಲೂ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ಇತರ ಕೆಲಸ ನಿಮಿತ್ತ ಬಂದು ಬಳಿಕ ಇಲ್ಲೇ ಬದುಕು ಕಟ್ಟಿಕೊಂಡವರೂ ಇದ್ದಾರೆ. ಆದರೆ ಬೆಂಗಳೂರಿನಲ್ಲಿ ಎಲ್ಲ ಹೊಂದಾಣಿಕೆಯಾದರೂ ಭಾಷೆ ವಿಚಾರಕ್ಕಾಗಿ ಮಾತ್ರ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಕನ್ನಡ ಮಾತನಾಡುವ ವಿಚಾರಕ್ಕೆ ಅಸಮಾಧಾನ ಹೊಂದಿ ಸ್ಥಳೀಯರೊಂದಿಗೆ ಪರಭಾಷಿಕರು ವಾಗ್ವಾದ ನಡೆದ ಅನೇಕ ಉದಾಹರಣೆಗಳಿವೆ. ಈ ಮಧ್ಯೆ ಬೆಂಗಳೂರಿನಲ್ಲಿ ವಾಸಿಸುವ ಜಪಾನ್ ಮಹಿಳೆಯೊಬ್ಬರು ಕನ್ನಡದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ವೇದಿಕೆಯ ಮೇಲೆ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದು ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಬೆಂಗಳೂರಿನ ವೇದಿಕೆಯೊಂದಲ್ಲಿ ಹಿಂದಿ ಮಾತನಾಡುವ ಜಪಾನ್ ಮಹಿಳೆಯೊಬ್ಬರು ಕನ್ನಡ ಮಾತನಾಡಲು ಪ್ರಯತ್ನಿಸುತ್ತಿರುವ ವಿಡಿಯೊ ಭಾರಿ ಸದ್ದು ಮಾಡಿದೆ. ಸ್ಥಳೀಯರೊಂದಿಗೆ ಅವರು ಕನ್ನಡ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಮಾಡಿದ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ವಿಡಿಯೊ ನೋಡಿ:
ಬೆಂಗಳೂರಿನಲ್ಲಿ ನಡೆದ ಅನಿಮೆ (Anime) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ವೇದಿಕೆ ಮೇಲೆ ಬಂದು ಮೈಕ್ ಹಿಡಿದ ತಕ್ಷಣ "ನಮಸ್ಕಾರ ಬೆಂಗಳೂರು, ಹೇಗಿದ್ದೀರಾ?" ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರಿಂದ ಚಪ್ಪಾಳೆ ಮೂಲಕ ತೀವ್ರ ಬೆಂಬಲ ವ್ಯಕ್ತ ವಾಗಿದೆ. ಬಳಿಕ ''ಇಲ್ಲಿ ಒಳ್ಳೆಯ ಫುಡ್ ಯಾವುದು?'' ಎಂದು ಕೇಳಿದ್ದಾರೆ. ಅದಕ್ಕೆ ಅಲ್ಲಿದ್ದವರು ಮಸಾಲೆ ದೋಸೆ ಎಂದು ಉತ್ತರಿಸಿದ್ದಾರೆ.
ವಿಮೆ ಹಣ ಪಡೆಯಲು ತನ್ನ ಅಂತ್ಯಕ್ರಿಯೆಗೆ ತಾನೇ ಮುಂದಾದ ವ್ಯಕ್ತಿ; ಆಮೇಲೆ ನಡೆದಿದ್ದ ಎಲ್ಲಾ ಶಾಕಿಂಗ್
ನಂತರದಲ್ಲಿ ಕನ್ನಡದಲ್ಲಿ ಧನ್ಯವಾದ ಹೇಗೆ ಹೇಳುವುದು ಎಂದು ಅಲ್ಲಿದ್ದ ಜನರಿಂದಲೇ ಕಲಿತು, "ಧನ್ಯವಾದಗಳು" ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಸ್ಥಳೀಯ ಪ್ರೇಕ್ಷಕರೊಂದಿಗೆ ಕನ್ನಡದಲ್ಲಿ ಸಂಪರ್ಕ ಸಾಧಿಸಲು ಅವರು ಮಾಡಿದ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಅವರು ಶೇರ್ ಮಾಡಿಕೊಂಡಿದ್ದು"ನಾನು ಇನ್ನೂ ಹೆಚ್ಚು ಕನ್ನಡ ಕಲಿಯಬೇಕಿದೆ" ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು, "ಬೆಂಗಳೂರಿನ ಭೇಟಿಗಾಗಿ ಧನ್ಯವಾದಗಳು" ಎಂದು ಬರೆದರೆ, ಇನ್ನೊಬ್ಬರು, ʼʼವಾವ್, ನೀವು ಬಹು ಪ್ರತಿಭಾನ್ವಿತ ಮಹಿಳೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.