ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಮತ್ತು ಐಎಚ್‌ಜಿ ಹೋಟೆಲ್ಸ್ ನಡುವೆ ಐದು ಹೋಟೆಲ್ ಒಪ್ಪಂದ; ಭಾರತಕ್ಕೆ ಕಾಲಿಡುತ್ತಿರುವ ಕಿಂಪ್ಟನ್

ಈ ಒಪ್ಪಂದದಡಿ ವಿವಿಧ ಬ್ರ್ಯಾಂಡ್‌ಗಳು ಮತ್ತು ಸ್ಥಳಗಳಲ್ಲಿ ಸುಮಾರು 1,500 ಕೊಠಡಿಗಳ ಸಾಮರ್ಥ್ಯದ ಹೋಟೆಲ್‌ಗಳು ನಿರ್ಮಾಣವಾಗಲಿದ್ದು, ಇದು ಭಾರತದಲ್ಲಿ ಐಎಚ್‌ಜಿ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಹೊಸ ಬಲ ನೀಡಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರದ ಬೆಳವಣಿಗೆ ಹಾಗೂ ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಬೆಂಗಳೂರು: ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್‌ಎಲ್) ಮತ್ತು ಜಾಗತಿಕ ಆತಿಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಐಎಚ್‌ಜಿ ಹೋಟೆಲ್ಸ್ ಅಂಡ್ ರಿಸಾರ್ಟ್ಸ್, ಭಾರತದಲ್ಲಿ ವಿಮಾನ ನಿಲ್ದಾಣ ಆಧಾರಿತ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಐದು ಹೋಟೆಲ್‌ಗಳ ಅಭಿವೃದ್ಧಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದಡಿ ವಿವಿಧ ಬ್ರ್ಯಾಂಡ್‌ಗಳು ಮತ್ತು ಸ್ಥಳಗಳಲ್ಲಿ ಸುಮಾರು 1,500 ಕೊಠಡಿಗಳ ಸಾಮರ್ಥ್ಯದ ಹೋಟೆಲ್‌ಗಳು ನಿರ್ಮಾಣವಾಗಲಿದ್ದು, ಇದು ಭಾರತದಲ್ಲಿ ಐಎಚ್‌ಜಿ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಹೊಸ ಬಲ ನೀಡಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರದ ಬೆಳವಣಿಗೆ ಹಾಗೂ ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ಜೈಪುರದಲ್ಲಿ ಕಿಂಪ್ಟನ್ ಹೋಟೆಲ್ ಸ್ಥಾಪನೆಯಾಗಲಿದ್ದು, ಅದಾನಿ ಏರ್‌ಪೋರ್ಟ್ ಸಿಟಿಗಳ ಭಾಗವಾಗಿ ನವಿ ಮುಂಬೈ, ಮಂಗಳೂರು ಹಾಗೂ ತಿರುವನಂತ ಪುರದಲ್ಲಿ ಹಾಲಿಡೇ ಇನ್ ಮತ್ತು ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ಗಳು ನಿರ್ಮಾಣ ವಾಗಲಿವೆ. ಇದಲ್ಲದೆ, ಈ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ಕುರಿತು ಎರಡೂ ಸಂಸ್ಥೆಗಳು ಮುಂದಿನ ಹಂತದ ಚರ್ಚೆಗಳನ್ನು ನಡೆಸುತ್ತಿವೆ.

ಇದನ್ನೂ ಓದಿ: Bangalore News: ಅಂತಾರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣಾ ದಿನ ಪ್ರಯುಕ್ತ ಕಾರ್ಯತಂತ್ರ ಮತ್ತು ಸುಸ್ಥಿರ ಬೆಳವಣಿಗೆ ಕುರಿತು ಐಸಿಎಂಎಐ ನಿಂದ ಉನ್ನತ ಮಟ್ಟದ ವಿಚಾರ ಸಂಕಿರಣ

ಈ ಸಹಭಾಗಿತ್ವದ ಮೂಲಕ ಕಿಂಪ್ಟನ್ ಹೋಟೆಲ್ಸ್ ಅಂಡ್ ರೆಸ್ಟೋರೆಂಟ್ಸ್ ಬ್ರ್ಯಾಂಡ್ ಭಾರತಕ್ಕೆ ಮೊದಲ ಬಾರಿಗೆ ಪ್ರವೇಶಿಸುತ್ತಿದೆ. ವಿನ್ಯಾಸ ಆಧಾರಿತ ಹೋಟೆಲ್‌ಗಳು, ವಿಶಿಷ್ಟ ಆಹಾರ ಅನುಭವಗಳು ಹಾಗೂ ಬೂಟಿಕ್ ಐಷಾರಾಮಿ ಆತಿಥ್ಯ ಸೇವೆಗಳಿಗೆ ಜಾಗತಿಕವಾಗಿ ಹೆಸರುವಾಸಿಯಾದ ಕಿಂಪ್ಟನ್ ಬ್ರ್ಯಾಂಡ್‌ನ ಪ್ರವೇಶವು ಭಾರತದಲ್ಲಿ ಪ್ರೀಮಿಯಂ ಲೈಫ್‌ ಸ್ಟೈಲ್ ಆತಿಥ್ಯ ಸೇವೆಗಳ ಮೇಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಭಾರತದಲ್ಲಿ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ವೇಗವಾಗಿ ಬೆಳೆಯು ತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಪ್ರಯಾಣಿಕರ ಸಂಖ್ಯೆ, ದೇಶೀಯ ಪ್ರವಾಸೋದ್ಯಮ ಹಾಗೂ ವ್ಯವಹಾರಿಕ ಪ್ರವಾಸಗಳ ಹೆಚ್ಚಳದಿಂದ ವಿಮಾನ ನಿಲ್ದಾಣ ಆಧಾರಿತ ಅಭಿವೃದ್ಧಿಗಳು ಪ್ರಮುಖ ವಾಣಿಜ್ಯ ಮತ್ತು ಆತಿಥ್ಯ ಕೇಂದ್ರಗಳಾಗಿ ರೂಪು ಗೊಳ್ಳುತ್ತಿವೆ.

ಈ ಕುರಿತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ನಿರ್ದೇಶಕ ಪ್ರಣವ್ ಅದಾನಿ ಮಾತನಾಡಿ, “ಆತಿಥ್ಯ ಮತ್ತು ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಅದಾನಿ ಸಮೂಹ ತನ್ನ ಹಾಜರಾತಿಯನ್ನು ವಿಸ್ತರಿಸುತ್ತಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಪರಿಸರದ ಸುತ್ತಮುತ್ತ ಪ್ರಯಾಣ, ವಾಸ್ತವ್ಯ ಮತ್ತು ನಗರ ಅನುಭವಗಳನ್ನು ಸಮಗ್ರವಾಗಿ ಒದಗಿಸುವ ವಿಶ್ವಮಟ್ಟದ ತಾಣಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಜಾಗತಿಕ ಮಟ್ಟದ ಸೇವೆ ಮತ್ತು ಕಾರ್ಯಕ್ಷಮತೆ ಹೊಂದಿರುವ ಅಂತರರಾಷ್ಟ್ರೀಯ ಹೋಟೆಲ್ ಬ್ರ್ಯಾಂಡ್‌ಗಳೊಂದಿಗೆ ನಾವು ಸಹಭಾಗಿತ್ವ ನಿರ್ಮಿಸು ತ್ತಿದ್ದೇವೆ. ಐಎಚ್‌ಜಿ ಹೋಟೆಲ್ಸ್ ಅಂಡ್ ರಿಸಾರ್ಟ್ಸ್ ಜೊತೆಗಿನ ಈ ಒಪ್ಪಂದ ಹಾಗೂ ಪ್ರಮುಖ ನಗರಗಳಲ್ಲಿ ಐದು ಹೋಟೆಲ್‌ಗಳ ಅಭಿವೃದ್ಧಿ, ಭಾರತದ ದೀರ್ಘಕಾಲೀನ ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ಉನ್ನತ ಮಟ್ಟದ ಆತಿಥ್ಯ ಮೂಲಸೌಕರ್ಯ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ,” ಎಂದರು.

ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾದ ಎಎಎಚ್‌ ಎಲ್, ತನ್ನ ವಿಸ್ತರಿಸುತ್ತಿರುವ ವಿಮಾನ ನಿಲ್ದಾಣ ಜಾಲದ ಮೂಲಕ ಪ್ರತಿವರ್ಷ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ವಿಮಾನ ನಿಲ್ದಾಣಗಳನ್ನು ಕೇವಲ ಪ್ರಯಾಣ ಕೇಂದ್ರ ಗಳಾಗಿ ಮಾತ್ರವಲ್ಲದೆ ಆತಿಥ್ಯ, ಚಿಲ್ಲರೆ ವ್ಯಾಪಾರ, ವಾಣಿಜ್ಯ ಮತ್ತು ಸಾಮಾಜಿಕ ಮೂಲ ಸೌಕರ್ಯಗಳನ್ನು ಒಳಗೊಂಡ ಸಮಗ್ರ ನಗರ ಪರಿಸರಗಳಾಗಿ ರೂಪಿಸುವ ದಿಸೆಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಸುಮಾರು 663 ಏಕರ ವ್ಯಾಪ್ತಿಯ ಏರ್‌ಪೋರ್ಟ್ ಸಿಟಿ ಅಭಿವೃದ್ಧಿ ಯೋಜನೆಗಳ ಮೂಲಕ, ಪ್ರಯಾಣ ಅನುಭವವನ್ನು ಸುಧಾರಿಸುವ ಜೊತೆಗೆ ದೀರ್ಘಕಾಲೀನ ಆರ್ಥಿಕ ಮತ್ತು ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಮಿಶ್ರ ಬಳಕೆಯ ತಾಣಗಳನ್ನು ನಿರ್ಮಿಸಲಾಗುತ್ತಿದೆ.