ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KSRTC Bus: ಸರ್ಕಾರಿ ಬಸ್‌ಗಳಿಗೆ ADAS ರಕ್ಷೆ; ಅಪಘಾತ ತಡೆಗೆ ಹೈಟೆಕ್ ಸುರಕ್ಷತಾ ತಂತ್ರಜ್ಞಾನ ಅಳವಡಿಕೆ

ADAS technology in KSRTC buses: ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು (ADAS)ಆಧುನಿಕ ವಾಹನಗಳಲ್ಲಿ ಬಳಕೆಯಾಗುವ ಒಂದು ಹೈಟೆಕ್ ಸುರಕ್ಷತಾ ತಂತ್ರಜ್ಞಾನವಾಗಿದೆ. ಇದು ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲಕನಿಗೆ ಸಹಾಯ ಮಾಡಲು ಮತ್ತು ಅಪಘಾತಗಳನ್ನು ತಡೆಯಲು ಸಹಾಯವಾಗುತ್ತದೆ.

ಸರ್ಕಾರಿ ಬಸ್‌ಗಳಿಗೆ ಹೈಟೆಕ್‌ ರಕ್ಷೆ; ಅಪಘಾತ ತಪ್ಪಿಸಲು ADAS ತಂತ್ರಜ್ಞಾನ

-

Prabhakara R
Prabhakara R Oct 14, 2026 5:08 PM

ಬೆಂಗಳೂರು: ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗೆ ಸರಕಾರಿ ಬಸ್‌ಗಳಲ್ಲಿ (KSRTC Bus) ಹೈಟೆಕ್ ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಎಸ್‌ಆರ್‌ಟಿಸಿಯ 17 ವಿಭಾಗಗಳ ಆಯ್ದ 100 ಬಸ್‌ಗಳಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

ಈ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ ತಂತ್ರಜ್ಞಾನವು ಚಾಲಕರು ನಿದ್ರೆ ಮಾಡಿದರೆ, ಮೊಬೈಲ್ ಬಳಸಿದರೆ ತಕ್ಷಣವೇ ಎಚ್ಚರಿಕೆ ನೀಡುತ್ತದೆ. ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆಯುವ ಸಂಭವವಿದ್ದಾಗ ಹಾಗೂ ರಸ್ತೆ ಲೇನ್ ಬದಲಿಸುವಾಗಲೂ ಇದು ಮುನ್ನೆಚ್ಚರಿಕೆ ನೀಡುತ್ತದೆ.

ADAS ತಂತ್ರಜ್ಞಾನವು ಡಿಕ್ಕಿ ಮುನ್ನೆಚ್ಚರಿಕೆ, ಲೇನ್ ಕಂಟ್ರೋಲ್ ಮತ್ತು ಪಾದಚಾರಿಗಳ ರಕ್ಷಣೆಗೆ ಅಲರ್ಟ್, ಪ್ರಯಾಣದ ವೇಳೆ ಚಾಲಕರ ಆಯಾಸ ಹಾಗೂ ಗಮನ ಭಂಗ ತಡೆಯುವ ತಂತ್ರಜ್ಞಾನ, ರಿಯಲ್-ಟೈಮ್ ಲೈವ್ ಮೇಲಿಚಾರಣೆ ಹಾಗೂ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ ಹೊಂದಿರುತ್ತದೆ.

ಏನಿದು ADAS ತಂತ್ರಜ್ಞಾನ?

ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯು (ADAS-Advanced Driver Assistance Systems) ಆಧುನಿಕ ವಾಹನಗಳಲ್ಲಿ ಬಳಕೆಯಾಗುವ ಒಂದು ಹೈಟೆಕ್ ಸುರಕ್ಷತಾ ತಂತ್ರಜ್ಞಾನವಾಗಿದೆ. ಇದು ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲಕನಿಗೆ ಸಹಾಯ ಮಾಡಲು ಮತ್ತು ಅಪಘಾತಗಳನ್ನು ತಡೆಯಲು ಕ್ಯಾಮೆರಾಗಳು, ರೇಡಾರ್‌ಗಳು ಮತ್ತು ಸೆನ್ಸರ್‌ಗಳನ್ನು ಬಳಸುತ್ತದೆ. ಇದು ಅಪಘಾತಗಳನ್ನು ತಡೆಯಲು ಅನುಕೂಲವಾಗುತ್ತದೆ.

ಪ್ರಮುಖ ವೈಶಿಷ್ಯಗಳು:

ಎದುರಿಗೆ ಯಾರಾದರೂ ಅಚಾನಕ್ಕಾಗಿ ಬಂದಾಗ ಚಾಲಕ ಬ್ರೇಕ್ ಹಾಕದಿದ್ದರೆ, ವಾಹನ ತಾನಾಗಿಯೇ ಬ್ರೇಕ್ ಹಾಕುವ ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಕಾರು ತನ್ನ ಲೇನ್ ಬಿಟ್ಟು ಅಜಾಗರೂಕತೆಯಿಂದ ಬೇರೆ ಪಥಕ್ಕೆ ಹೋದರೆ ತಕ್ಷಣವೇ ಎಚ್ಚರಿಕೆ ನೀಡಿ ಸ್ಟೀರಿಂಗ್ ಸರಿಪಡಿಸುವ ಲೇನ್ ಕೀಪಿಂಗ್ ಅಸಿಸ್ಟ್, ಮುಂದಿನ ವಾಹನದ ವೇಗಕ್ಕೆ ತಕ್ಕಂತೆ ನಿಮ್ಮ ವಾಹನದ ವೇಗವನ್ನು ನಿಯಂತ್ರಿಸುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಪಕ್ಕದಲ್ಲಿ ಬರುವ ವಾಹನಗಳು ಡ್ರೈವರ್ ಕಣ್ಣಿಗೆ ಕಾಣದಿದ್ದರೆ ಆ ಬಗ್ಗೆ ಎಚ್ಚರಿಕೆ ನೀಡುವ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ವ್ಯವಸ್ಥೆ ಸೇರಿ ಹಲವು ವೈಶಿಷ್ಯಗಳನ್ನು ADAS ತಂತ್ರಜ್ಞಾನ ಹೊಂದಿದೆ.