ಬೆಂಗಳೂರು: ದಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೊಸೈಟಿ ಆಫ್ ಇಂಡಿಯಾ (ಎಂ.ಎಸ್.ಎಸ್.ಐ)- ಬೆಂಗಳೂರು ಚಾಪ್ಟರ್, ರೋಟರಿ ಆಕ್ಷನ್ ಗ್ರೂಪ್ ಅಗೇನ್ಸ್ಟ್ ಮಲ್ಟಿಪಲ್ ಸ್ಕ್ಲೆರೋಸಿಸ್ (ಆರ್.ಎ.ಜಿ.ಎ.ಎಂ.ಎಸ್.) ಜೊತೆಯಲ್ಲಿ ಬೆಂಗಳೂರಿನ ರೋಟರಿ ಹೌಸ್ ಆಫ್ ಫ್ರೆಂಡ್ಶಿಪ್ ನಲ್ಲಿ “ನ್ಯಾವವಿಗೇಟಿಂಗ್ ಎಂ.ಎಸ್. ಟುಗೆದರ್” ಎಂಬ ಅರಿವು ಮತ್ತು ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಉಪಕ್ರಮವು ನ್ಯೂರಾಲಜಿಸ್ಟ್ ಗಳು, ಸರ್ಕಾರಿ ಪ್ರತಿನಿಧಿಗಳು, ರೋಟರಿ ನಾಯಕರು, ಆರೈಕೆ ಮಾಡುವವರು ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ನೊಂದಿಗೆ ಜೀವಿಸುವ ಜನರಿಗೆ ಘನತೆಯ ಜೀವನ ಮತ್ತು ಭಾರತದಲ್ಲಿ ಎಂ.ಎಸ್. ಆರೈಕೆಗೆ ವ್ಯವಸ್ಥಿತ ಬೆಂಬಲ ನೀಡುವ ಉದ್ದೇಶ ಹೊಂದಿತ್ತು.
ಈ ಕಾರ್ಯಕ್ರಮವು ಮಲ್ಟಿಪಲ್ ಸ್ಕ್ಲೆರೋಸಿಸ್ ಕ್ಷೇತ್ರ ವಿಸ್ತಾರವಾಗುತ್ತಿರುವ, ಪ್ರಾರಂಭಿಕ ರೋಗ ಪರೀಕ್ಷೆಯ ಸವಾಲುಗಳು, ಆರೈಕೆಯ ಲಭ್ಯತೆ, ಅಂಗವಿಕಲತೆ ಗುರುತಿಸುವುದು ಮತ್ತು ದೀರ್ಘಾವಧಿ ರೋಗ ನಿರ್ವಹಣೆ ಕುರಿತು ಆಳವಾದ ಚರ್ಚೆಗಳನ್ನು ಒಳಗೊಂಡಿತ್ತು. ಈ ಚರ್ಚೆಗಳು ಚಿಕಿತ್ಸೆಯಲ್ಲಿನ ಸುಧಾರಣೆಗಳ ಕುರಿತೂ ಆದ್ಯತೆ ನೀಡಿದ್ದು ಅದರಲ್ಲಿ ರೋಗ ವೃದ್ಧಿಯಾಗುವುದನ್ನು ನಿಧಾನಗೊಳಿಸುವ ಮತ್ತು ಮೊದಲೇ ನೀಡಿದರೆ ಜೀವನದ ಗುಣಮಟ್ಟ ರಕ್ಷಿಸುವ ಹೈ-ಎಫಿಷಿಯೆನ್ಸಿ ಥೆರಪಿಗಳು (ಎಚ್.ಇ.ಟಿ.ಗಳು) ಒಳಗೊಂಡಿದ್ದವು.
ಇದನ್ನೂ ಓದಿ:Drumstick Health Benefits: ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?
ಎಂ.ಎಸ್.ಎಸ್.ಐ. ಇಂಡಿಯಾದ ಉಪಾಧ್ಯಕ್ಷ ಅರುಣ್ ಮೋಹನ್, “ಇಡೀ ಎಂ.ಎಸ್. ಇಕೊ ಸಿಸ್ಟಂ ಸವಾಲುಗಳಿಂದ ಕೂಡಿದೆ. ಆಳವಾದ ನಿಖರ ದತ್ತಾಂಶ ಹಾಗೂ ಅಸಮರ್ಪಕ ವಿಮಾ ರಕ್ಷಣೆಯ ವರೆಗೆ, ಸ್ಪಷ್ಟ ಅಂಗವಿಕಲತೆಯ ಮಾರ್ಗಸೂಚಿಗಳು ಮತ್ತು ಎಂ.ಎಸ್.ಚಿಕಿತ್ಸೆಗೆ ತಜ್ಞರ ಸಂಖ್ಯೆ ತಕ್ಕಷ್ಟಿಲ್ಲದಿರುವುದು ಮುಂತಾದವು. ಹೈ ಎಫಿಷಿಯೆನ್ಸಿ ಥೆರಪಿಗಳನ್ನು ಮೊದಲೇ ನೀಡಿದರೆ ಹಲವು ಆಸ್ಪತ್ರೆಗಳ ಭೇಟಿ, ಪುನರ್ ವಸತಿ ಮತ್ತು ದೀರ್ಘಾವಧಿ ಆರೈಕೆಯ ಅಗತ್ಯ ಕಡಿಮೆ ಮಾಡುತ್ತದೆ. ಎಂ.ಎಸ್. ಚಿಕಿತ್ಸೆಯ ಗುರಿ ರೋಗ ಹೆಚ್ಚಾಗುವುದನ್ನು ತಡೆಯುವುದು, ಅಂಗವೈಕಲ್ಯ ಸ್ಥಗಿತ ಗೊಳಿಸುವುದು ಅಲ್ಲೆ ಅನುಕೂಲಕರ ಡೋಸಿಂಗ್ ನೀಡುವ ಮೂಲಕ ಚಿಕಿತ್ಸೆಗೆ ಉತ್ತಮ ಸ್ಪಂದನೆ, ಉತ್ತಮ ಜೀವನದ ಗುಣಮಟ್ಟ ಮತ್ತು ಕೆಲಸ, ಶಿಕ್ಷಣ ಅಥವಾ ಕೌಟುಂಬಿಕ ಜವಾಬ್ದಾರಿ ಗಳಿಗೆ ಹೆಚ್ಚಿನ ಅಡತಡೆ ಇಲ್ಲದಿರುವುದು. ದಿ ವಾಕ್ ಇನ್ ಮೈ ಶೂಸ್ ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ” ಎಂದರು.
ರೋಟರಿ ಆಕ್ಷನ್ ಗ್ರೂಪ್ ಅಗೇನ್ಸ್ಟ್ ಮಲ್ಟಿಪಲ್ ಸ್ಕ್ಲೆರೋಸಿಸ್, ಇಂಡಿಯಾ ಚಾಪ್ಟರ್ ಅಧ್ಯಕ್ಷ ರೋಟರಿಯನ್ ಶಂಕರ್ ಸುಬ್ರಮಣಿಯನ್, “ಮಲ್ಟಿಪಲ್ ಸ್ಲೆರೋಸಿಸ್ ಅನ್ನು ಅಗೋಚರ ಕಾಯಿಲೆ ಎಂದ ಕರೆಯಲಾಗುತ್ತದೆ. ಆದರೂ ಅದರ ಪರಿಣಾಮ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಸತತ ಮತ್ತು ಆಳವಾದ ಸಂಕಷ್ಟ ತರುವಂಥದ್ದಾಗಿದೆ. ನ್ಯಾವಿಗೇಟಿಂಗ್ ಎಂ.ಎಸ್. ಟುಗೆದರ್ ಮತ್ತು ವಾಕ್ ಇನ್ ಮೈ ಶೂಸ್ ಅಭಿಯಾನದ ಮೂಲಕ ನಾವು ಎಂ.ಎಸ್.ನೊಂದಿಗೆ ಜೀವಿಸುತ್ತಿರುವ ಜನರು ಎದುರಿಸುವ ಪ್ರತಿನಿತ್ಯದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಗುರಿ ಹೊಂದಿದ್ದೇವೆ” ಎಂದರು.
ಪೂರ್ಣ ನ್ಯೂರೊ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ಸ್ ಸೀನಿಯರ್ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ.ರಾಜೇಶ್ ಅಯ್ಯರ್, “ಮಲ್ಟಿಪಲ್ ಸ್ಕ್ಲೆರೋಸಿಸ್ ನಿರ್ವಹಿಸಲು ಕಷ್ಟಕರವಾದ ಕಠಿಣ ನರ ಸಂಬಂಧಿ ರೋಗವಾಗಿದೆ. ಈ ರೋಗವು ಸಾಮಾನ್ಯವಾಗಿ ಯುವ ವಯಸ್ಕರನ್ನು ಬಾಧಿಸುತ್ತದೆ ಮತ್ತು ರೋಗಪತ್ತೆ ಮತ್ತು ಚಿಕಿತ್ಸೆ ತಡ ಮಾಡಿದರೆ ಅಂಗವೈಕಲ್ಯಕ್ಕೆ ದಾರಿ ಮಾಡುತ್ತದೆ. ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಅರ್ಧದಷ್ಟು ಎಂ.ಎಸ್.ಎಪಿ.ಗಳು ವ್ಹೀಲ್ ಚೇರ್ ಗೆ ಸೀಮಿತರಾಗುತ್ತಾರೆ” ಎಂದರು.
ಭಾರತದಲ್ಲಿ 20ರಿಂದ 40 ವರ್ಷ ವಯಸ್ಸಿನ 2 ಲಕ್ಷ ಜನರು ಎಂ.ಎಸ್.ನೊಂದಿಗೆ ಜೀವಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.