ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aero India 2025: ಬೆಂಗಳೂರು ಏರ್‌ ಶೋ: ಬೆಂಗಳೂರು-ಹೈದರಾಬಾದ್‌ ರಸ್ತೆಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್!

ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದ್ದು, ಸುತ್ತಮುತ್ತಲೂ ಟ್ರಾಫಿಕ್ ಬಿಸಿ ತಟ್ಟಲಿದೆ. ಇಂದು ಎರಡನೇ ದಿನದ‌ ಏರ್ ಶೋ ಆರಂಭವಾಗಿದ್ದು, ಏರ್ ಶೋ ಗೆ ಸಾವಿರಾರು ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಆಗಮಿಸಿವೆ. ಈ ವೇಳೆ ಏರ್ ಶೋ ನಡೆಯುವ ಬೆಂಗಳೂರು ಹೈದರಾಬಾದ್ ರಸ್ತೆ ಪುಲ್ ಟ್ರಾಪಿಕ್ ಜಾಮ್ ಆಗಿದೆ. ಬೆಂಗಳೂರಿನಿಂದ ಏರ್ಪೊಟ್ ಕಡೆ ತೆರಳುವ ಮಾರ್ಗದಲ್ಲಿ ಸುಮಾರು 4 ಕಿಲೋ ಮಿಟರ್ ಗೂ ಅಧಿಕ ದೂರ ಟ್ರಾಪಿಕ್ ಜಾಮ್ ಆಗಿದ್ದು, ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

Aero India 2025

ಬೆಂಗಳೂರು: ಯಲಹಂಕ(Yelahanka) ವಾಯುನೆಲೆಯಲ್ಲಿ(Air Force Station) ಏರ್ ಶೋ(Air Show) ನಡೆಯುತ್ತಿದ್ದು, ಸುತ್ತಮುತ್ತಲೂ ಟ್ರಾಫಿಕ್ ಬಿಸಿ ತಟ್ಟಿದೆ. ಇಂದು(ಫೆ.11) ಎರಡನೇ ದಿನದ‌ ಏರ್ ಶೋ ಆರಂಭವಾಗಿದ್ದು, ಏರ್ ಶೋ ಗೆ ಸಾವಿರಾರು ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಆಗಮಿಸಿವೆ. ಈ ವೇಳೆ ಏರ್ ಶೋ(Aero India 2025) ನಡೆಯುವ ಬೆಂಗಳೂರು ಹೈದರಾಬಾದ್ ರಸ್ತೆ ಫುಲ್ ಟ್ರಾಪಿಕ್ ಜಾಮ್ ಆಗಿದೆ. ಬೆಂಗಳೂರಿನಿಂದ ಏರ್ಪೊಟ್ ಕಡೆಗೆ ತೆರಳುವ ಮಾರ್ಗದಲ್ಲಿ ಸುಮಾರು 4 ಕಿಲೋ ಮಿಟರ್ ಗೂ ಅಧಿಕ ದೂರ ಟ್ರಾಪಿಕ್ ಜಾಮ್ ಆಗಿದ್ದು, ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ​ಶೋ ನಡೆಯುತ್ತಿರುವ ಕಾರಣ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿದೆ. ಬಾಗಲೂರು ಕ್ರಾಸ್ ಸ್ಕೈ ವಾಕ್ ಬಳಿ ಆ್ಯಂಬುಲೆನ್ಸ್​ ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದೆ. ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​ ಸಿಲುಕಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಯಲಹಂಕ ಪ್ಲೈ ಓವರ್ ಮೇಲೆಯೂ ಜಾಮ್ ಆಗಿದ್ದು,ಬಾಗಲೂರು ಸರ್ವಿಸ್ ರಸ್ತೆಯಲ್ಲೂ ಟ್ರಾಫಿಕ್‌ ಕಾವು ತಗಲಿದೆ. ಇತ್ತ ಏರ್ಪೊಟ್ ಗೆ ತೆರಳುವ ಪ್ರಯಾಣಿಕರು ಪರದಾಡಿದ್ದಾರೆ. ಟ್ರಾಪಿಕ್ ಜಾಮ್ ನಿಂದ ವಾಹನ ಸವಾರರು ಹೈರಾಣಾಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Aero India 2025: ಏರೋ ಇಂಡಿಯಾ ಉದ್ಘಾಟನೆ, ಏರ್‌ ಶೋವನ್ನು ಕುಂಭ ಮೇಳಕ್ಕೆ ಹೋಲಿಸಿದ ರಾಜನಾಥ್‌ ಸಿಂಗ್‌

ಏರ್ ಶೋಗೆ ಬರುವವರು ಬರಬೇಕಾದ ಮಾರ್ಗ:

  • ಬೆಂಗಳೂರು ಪೂರ್ವ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ- ಕೆ.ಆರ್ ಪುರ ನಾಗವಾರ ಜಂಕ್ಷನ್-ಥಣಿಸಂದ್ರ-ನಾರಾಯಣಪುರ ಕ್ರಾಸ್ ಮೂಲಕ ಬೈಪಾಸ್ ಯಲಹಂಕ ಕಾಫಿ ಡೇ ಪೋರ್ಡ್​ ಶೋ ಮೂಲಕ ಬರಬೇಕು.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವುದು- ಗೊರೆಗುಂಟೆ ಪಾಳ್ಯ ಬಿಇಎಲ್, ಗಂಗಮ್ಮ ಸರ್ಕಲ್-ಎಂಎಸ್ ಪಾಳ್ಯ ಸರ್ಕಲ್-ಉನ್ನಿಕೃಷ್ಣನ್ ರಸ್ತೆ, ಮದರ್ ಡೈರಿ ಜಂಕ್ಷನ್.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಬರುವುದು ಹೇಗೆ- ಮೈಸೂರು ರಸ್ತೆ ಮೂಲಕ ನಾಯಂಡನಹಳ್ಳಿ- ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ- ಬಿ.ಇ.ಎಲ್ ವೃತ್ತ- ಗಂಗಮ್ಮ ವೃತ್ತ- ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್.