ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Grihalakshmi, Grihajyoti: ಗೃಹಲಕ್ಷ್ಮೀ ಬಳಿಕ ಗೃಹಜ್ಯೋತಿಗೂ ಸರ್ಜರಿ

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅರ್ಹತೆ ಇಲ್ಲದವರೂ ಫಲಾನು ಭವಿಗಳಾಗುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಅದಕ್ಕೆ ತಡೆ ನೀಡಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಗ್ಯಾರಂಟಿ ಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.

ಗೃಹಲಕ್ಷ್ಮೀ ಪರಿಷ್ಕರಣೆ ಬಳಿಕ 77 ಕೋಟಿ ರು. ಉಳಿತಾಯ, 3.89 ಲಕ್ಷ ಅನರ್ಹರ ಪತ್ತೆ

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅರ್ಹತೆ ಇಲ್ಲದವರೂ ಫಲಾನುಭವಿಗಳಾಗುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಅದಕ್ಕೆ ತಡೆ ನೀಡಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಗ್ಯಾರಂಟಿ ಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.

ಗೃಹಲಕ್ಮೀ ಪರಿಷ್ಕರಣೆ ಬಳಿಕ 77 ಕೋಟಿ ರು. ಉಳಿತಾಯವಾಗಿದೆ, 3.89 ಲಕ್ಷ ಅನರ್ಹರ ಪತ್ತೆ ಯಾಗಿದೆ. ಅದನ್ನೇ ಗೃಹ ಜ್ಯೋತಿಗೂ ಅನ್ವಯಿಸಲು ಸರಕಾರ ನಿರ್ಧರಿಸಿದೆ. ಗೃಹಲಕ್ಷ್ಮೀಯಲ್ಲಿ ಕೆಲವು ನಕಲಿ ಫಲಾನುಭವಿಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಗೃಹಜ್ಯೋತಿಗೂ ಸರ್ಜರಿ ನಡೆಯಲಿದೆ. ಹಣ ಪೋಲು ತಡೆಯಲು ಸರಕಾರ ಮುಂದಾಗಿದ್ದು, ಶಕ್ತಿ ಯೋಜನೆಯಂತೆ ಗೃಹ ಜ್ಯೋತಿಗೂ ಸ್ಮಾರ್ಟ್ ಕಾರ್ಡ್ ವಿತರಣೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಸ್ಮಾರ್ಟ್ ಕಾರ್ಡ್‌ಗೆ ಮತದಾರರ ಗುರುತಿನ ಸಂಖ್ಯೆ ನಮೂದು ಮಾಡುವುದು ಕಡ್ಡಾಯಗೊಳಿಸು ವುದು, ಹೊರ ರಾಜ್ಯದ ಫಲಾನುಭವಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರಕಾರ ಈ ತೀರ್ಮಾನಕ್ಕೆ ಮುಂದಾಗಿದೆ. ಈ ಸ್ಮಾರ್ಟ್ʼಕಾರ್ಡ್‌ನಲ್ಲಿ ವೋಟರ್ ಐಡಿ, ಮೀಟರ್, ಆಧಾರ್ ಸಂಖ್ಯೆ, ಫಲಾನುಭವಿಯ ಹೆಸರು ಮತ್ತಿತರ ಮಾಹಿತಿ ಒಳಗೊಂಡಿರುತ್ತದೆ.

ಇದನ್ನೂ ಓದಿ: Gruhalakshmi scheme: ಗೃಹಲಕ್ಷ್ಮಿ ಹಣದಲ್ಲಿ ಆಯುಧ ಪೂಜೆ ದಿನದಂದು ವಾಷಿಂಗ್ ಮಷಿನ್ ಖರೀದಿಸಿದ ಮಹಿಳೆ; ಸಿಎಂ ಸಂತಸ

ಅರ್ಧಕ್ಕರ್ಧ ಫಲಾನುಭವಿಗಳ ಕಡಿತ?: ಸರಕಾರದ ಹೊಸ ನಿಯಮಗಳಿಂದ ಅರ್ಧ ಕ್ಕರ್ಧ ಫಲಾನುಭವಿಗಳು ಕಡಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬಾಡಿಗೆ ಮನೆ ಬದಲಾಯಿಸಿದಾಗೆಲ್ಲ ಹೊಸ ಸ್ಮಾರ್ಟ್ ಕಾರ್ಡ್ ಪಡೆಯುವುದು ಗೊಂದಲಕ್ಕೆ ಕಾರಣವಾಗಲಿದೆ. ಇದರ ಜೊತೆಗೆ ಹೊಸ ಸರಾಸರಿ ನಿಗದಿಯಾಗುತ್ತಾ? ಹಳೆಯ ಕ್ರಮವೇ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಸಹ ಮೂಡಿದೆ.

ಶಕ್ತಿ ಕಾರ್ಡ್‌ಗೆ ಅಂತಿಮ ಸಿದ್ಧತೆ: ಸಚಿವ ಸುರೇಶ್ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಸುಮಾರು 2 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವಿತರಿಸುವ ಸಾಧ್ಯತೆಗಳಿವೆ. ಪುರುಷರಿಗೂ ಸ್ಮಾರ್ಟ್ ಕಾರ್ಡ್ ನೀಡಲಿರುವ ಹಿನ್ನೆಲೆಯಲ್ಲಿ ಒಟ್ಟು 3 ಕೋಟಿ ಕಾರ್ಡ್‌ಗಳು ಬೇಕಾಗುತ್ತವೆ ಎಂದು ಸುರೇಶ್ ಹೇಳಿದ್ದಾರೆ.

ಗೃಹಜ್ಯೋತಿ: ಮಾನದಂಡಗಳೇನು?

ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು

ಗೃಹಬಳಕೆಯ ವಿದ್ಯುತ್ ಸಂಪರ್ಕ ಹೊಂದಿರಬೇಕು

ಕಳೆದ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಪರಿಗಣನೆ

ನಿಗದಿತ ಮಿತಿಯೊಳಗೆ ಬಳಕೆ ಮಾಡಿದರೆ ಉಚಿತ ವಿದ್ಯುತ್

ಬಾಡಿಗೆ ಮನೆಯಲ್ಲಿ ವಾಸಿಸುವವರೂ ಅರ್ಜಿ ಸಲ್ಲಿಸಬೇಕು

ವಾಣಿಜ್ಯ ವಿದ್ಯುತ್ ಸಂಪರ್ಕಗಳಿಗೆ ಯೋಜನೆ ಅನ್ವಯಿಸಲ್ಲ

image

ವಿರೋಧ ಪಕ್ಷಗಳಿಗೆ ಆಗದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಯ ಹಣ ಬೇರೆಯವರ ಖಾತೆಗೆ ಹಣ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಕರ್ನಾಟಕದವರಿಗೆ ಈ ಯೋಜನೆ ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ಕೊಡಲು ಸಾಧ್ಯವಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ. ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ.

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ